
ಮುಂಬೈ: ಮಹಾರಾಷ್ಟ್ರ ರಾಜ್ಯದಲ್ಲಿ ನಾಲ್ಕು ದಿನಗಳ ಕಾಲದವರೆಗೆ ಮಾಂಸ ಮಾರಾಟವನ್ನು ನಿಷೇಧಿಸಿರುವುದನ್ನು ವಿರೋಧಿಸಿ ಮಹಾರಾಷ್ಟ್ರ ನವನಿರ್ಮಾಣ ಸೇನೆಯ ಕಾರ್ಯಕರ್ತರು ಮುಂಬೈನ ದಾದರ್ ನ ಅಗರ ಬಾಜಾರ್ ನಲ್ಲಿ ಮಟನ್ ಮಾರಾಟ ಮಾಡಲಿದ್ದಾರೆ,
ಮಹಾರಾಷ್ಟ್ರ ಸರ್ಕಾರ ಈ ನಿಷೇಧವನ್ನು ಹೇರಿರುವುದರಿಂದ ರಾಜಕೀಯ ಪಕ್ಷಗಳ ನಡುವೆ ತೀವ್ರ ಮಾತಿನ ಚಕಮಕಿ, ಆರೋಪ ಪ್ರತ್ಯಾರೋಪಗಳು ಕೇಳಿಬಂದಿವೆ.
ಜೈನರ ಹಬ್ಬ ಪರ್ಯುಶನ್ ಪ್ರಯುಕ್ತ ಮಹಾರಾಷ್ಟ್ರ ಸರ್ಕಾರ ಮುಂಬೈನಲ್ಲಿ ನಾಲ್ಕು ದಿನಗಳ ಕಾಲ ಮಾಂಸ ಮಾರಾಟವನ್ನು ನಿಷೇಧಗೊಳಿಸಿತ್ತು.
Advertisement