ಕೈ ವಶೀಕರಣದ ಭೀತಿ ರೆಸಾರ್ಟ್ ನತ್ತ ಬಿಜೆಪಿ

ಮೇಯರ್ ಸ್ಥಾನಕ್ಕಾಗಿ ನಡೆಯುತ್ತಿರುವ ಜಿದ್ದಾಜಿದ್ದಿನ ಬೆಳವಣಿಗೆಯಲ್ಲಿ ತನ್ನ ಸದಸ್ಯರನ್ನು ಒಟ್ಟಾಗಿಟ್ಟುಕೊಳ್ಳುವ ಉದ್ದೇಶದಿಂದ ಬಿಜೆಪಿಯು ಗುರುವಾರ ಮಧ್ಯಾಹ್ನ ಅವರನ್ನೆಲ್ಲ ರೆಸಾರ್ಟ್ ವಾಸಕ್ಕೆ ಕಳುಹಿಸಿತು...

ಬೆಂಗಳೂರು: ಮೇಯರ್ ಸ್ಥಾನಕ್ಕಾಗಿ ನಡೆಯುತ್ತಿರುವ ಜಿದ್ದಾಜಿದ್ದಿನ ಬೆಳವಣಿಗೆಯಲ್ಲಿ ತನ್ನ ಸದಸ್ಯರನ್ನು ಒಟ್ಟಾಗಿಟ್ಟುಕೊಳ್ಳುವ ಉದ್ದೇಶದಿಂದ ಬಿಜೆಪಿಯು ಗುರುವಾರ ಮಧ್ಯಾಹ್ನ ಅವರನ್ನೆಲ್ಲ ರೆಸಾರ್ಟ್ ವಾಸಕ್ಕೆ ಕಳುಹಿಸಿತು.

ಶುಕ್ರವಾರ ಬೆಳಗ್ಗೆ ಈ ಎಲ್ಲಾ ನೂರು ಸದಸ್ಯರು ಒಟ್ಟಾಗಿ ರೆಸಾರ್ಟ್‍ನಿಂದ ಬಿಬಿಎಂಪಿ ಕಚೇರಿಗೆ ಬರಲಿದ್ದಾರೆ. ಕಾಂಗ್ರೆಸ್-ಜೆಡಿಎಸ್ ಸಂಬಂಧದಲ್ಲಿ ಯಾವುದೇ ಬದಲಾವಣೆ ಕಾಣದ
ಹಿನ್ನೆಲೆಯಲ್ಲಿ ಮತ್ತು ಪಕ್ಷದಿಂದ ಮೇಯರ್ ಸ್ಥಾನಕ್ಕೆ ಕಣಕ್ಕಿಳಿಸುವ ಉದ್ದೇಶದಿಂದ ಸ್ಪಷ್ಟ ತೀರ್ಮಾನಕ್ಕೆ ಬರುವುದಕ್ಕಾಗಿ ಗುರುವಾರ ಮಧ್ಯಾಹ್ನ 12 ಗಂಟೆಗೆ ಪಕ್ಷದ ಕಚೇರಿಯಲ್ಲಿ ಸಭೆ
ಕರೆಯಲಾಗಿತ್ತು. ಕಾರ್ಪೊರೇಟರ್ ಗಳು ಮತ್ತು ಮುಖಂಡರು ಪಕ್ಷದ ಕಚೇರಿಗೆ ಆಗಮಿಸಿ ಸಭೆ ಆರಂಭಿಸುವಾಗ 12.30 ದಾಟಿತ್ತು.

ನಂತರ ಊಟದ ವಿರಾಮದವರೆಗೆ ಚರ್ಚೆ ನಡೆದು, ಮುಂದೆ ಎಲ್ಲರೂ ರೆಸಾರ್ಟ್ ಗೆ ಹೋಗುವುದೆಂದು ಮುಖಂಡರು ತೀರ್ಮಾನಕ್ಕೆ ಬಂದರು. ಅದರಂತೆ ಮ.3ಕ್ಕೆ ನೂತನ ಸದಸ್ಯರು ಲಗ್ಗೇ-ಜ್ ನೊಂದಿಗೆ ಬಸ್ಸನ್ನೇರಿ ತುಮಕೂರು ರಸ್ತೆ ನೆಲಮಂಗಲ ಬಳಿಯ ಗೋಲ್ಡನ್ ಪಾಮï ರೆಸಾರ್ಟ್‍ಗೆ ಹೊರಟರು. ಸಭೆಯಲ್ಲಿ ಆರ್.ಅಶೋಕ್, ಸುಬ್ಬನರಸಿಂಹ, ವಿ. ಸೋಮಣ್ಣ, ಪಿ.ಸಿ. ಮೋಹನ್, ಅರವಿಂದ ಲಿಂಬಾವಳಿ ಸೇರಿದಂತೆ ಬೆಂಗಳೂರಿನ ಪ್ರಮುಖ ಶಾಸಕರು ಹಾಜರಿದ್ದರು.

ಕಾರಣವೇನು?
ಜಿದ್ದಾಜಿದ್ದಿನ ಪೈಪೋಟಿಯ ಕೊನೆ ಕ್ಷಣದಲ್ಲಿ ಆಗಬಹುದಾದ ಬದಲಾವಣೆಗಳು ಮತ್ತು ಕಾಂಗ್ರೆಸ್ ಪಕ್ಷ ಎಲ್ಲಿ ತನ್ನ ಸದಸ್ಯರನ್ನು ಹೈಜಾಕ್ ಮಾಡಬಹುದೆಂಬ ಅನುಮಾನದಲ್ಲಿ ಬಿಜೆಪಿಯು ತನ್ನ ಸದಸ್ಯರನ್ನು ಒಗ್ಗಟ್ಟಾಗಿ ಇಡಲು ರೆಸಾರ್ಟ್‍ಗೆ ವರ್ಗಾಯಿಸುವ ನಿರ್ಧಾರಕ್ಕೆ ಬರಲಾಯಿತೆಂದು ಪಕ್ಷದ ಮುಖಂಡರು ತಿಳಿಸಿದರು. ಕಾಂಗ್ರೆಸ್ ಪಕ್ಷವು ಅಧಿಕಾರ ಉಳಿಸಿಕೊಳ್ಳುವ ಉದ್ದೇಶದಿಂದ ಕೊನೆ ಘಳಿಗೆಯಲ್ಲಿ ತಮ್ಮ ಪಕ್ಷದ ಸದಸ್ಯರು ಮತದಾನಕ್ಕೆ ಬಾರದಂತೆ ತಡೆಯುವ ಸಾಧ್ಯತೆ ಇಲ್ಲದಿಲ್ಲ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com