ಮಹದಾಯಿ ಯೋಜನೆ: ಸ್ಯಾಂಡಲ್‌ವುಡ್ ನಟ-ನಟಿಯರ ಆಕ್ರೋಶಿತ ನುಡಿಗಳು

ಮಹದಾಯಿ ಹಾಗೂ ಕಳಸಾ-ಬಂಡೂರಿ ಯೋಜನೆಗಳು ಅನುಷ್ಠಾನಕ್ಕೆ ಒತ್ತಾಯಿಸಿ ಸ್ಯಾಂಡಲ್‌ವುಡ್ ನ ನಟ-ನಟಿಯರು ಗಂಡುಮೆಟ್ಟಿದ ನಾಡು ಹುಬ್ಬಳ್ಳಿಯಲ್ಲಿ ಬೃಹತ್...
ಶಿವರಾಜ್ ಕುಮಾರ್
ಶಿವರಾಜ್ ಕುಮಾರ್
ಮಹದಾಯಿ ಹಾಗೂ ಕಳಸಾ-ಬಂಡೂರಿ ಯೋಜನೆಗಳು ಅನುಷ್ಠಾನಕ್ಕೆ ಒತ್ತಾಯಿಸಿ
ಸ್ಯಾಂಡಲ್‌ವುಡ್ ನ ನಟ-ನಟಿಯರು ಗಂಡುಮೆಟ್ಟಿದ ನಾಡು ಹುಬ್ಬಳ್ಳಿಯಲ್ಲಿ ಬೃಹತ್ ಪ್ರತಿಭಟನಾ ರ್ಯಾಲಿಯನ್ನು ನಡೆಸಿದ್ದು, ಬಳಿಕ ಚೆನ್ನಮ್ಮ ವೃತ್ತದಲ್ಲಿ ಬಹಿರಂಗ ಸಭೆಯನ್ನುದ್ದೇಶಿಸಿ ಮಾತನಾಡಿದರು.
ಶಿವರಾಜ್ ಕುಮಾರ್: ಮಹದಾಯಿ ಹೋರಾಟಕ್ಕೆ ನಮ್ಮ ಬೆಂಬಲ ಸದಾ ಇರುತ್ತೆ. ನಾವು ನಮ್ಮ ನೀರನ್ನು ಕೇಳಿದ್ದೇವೆ, ನಮ್ಮ ಪಾಲಿನ ನೀರು ನಮಗೆ ಕೊಡಲಿ ಎಂದು ನಟ ಶಿವರಾಜ್​​ಕುಮಾರ್​​ ಹೇಳಿದ್ದಾರೆ. ಕಷ್ಟ ಬಂದಿದೆ ಎಂದು ರೈತರು ಆತ್ಮಹತ್ಯೆ ಮಾಡಿಕೊಳ್ಳಬಾರದು. ಒಗ್ಗಟ್ಟಾಗಿ ಎದುರಿಸಬೇಕು ರೈತರು ಧೈರ್ಯವಾಗಿರಬೇಕು. ನಿಮ್ಮ ಹೋರಾಟಕ್ಕೆ ಸದಾ ಬೆಂಬಲ ನೀಡುತ್ತೇವೆ. ರೈತರ ಹೋರಾಟಕ್ಕೆ ಎಲ್ಲಿಗೆ ಬೇಕಾದರೂ ನಾವು ಬರಲು ಸಿದ್ಧ ಎಂದು ನಟ ಶಿವರಾಜ್​​ಕುಮಾರ್​​ ಹೇಳಿದ್ದಾರೆ. ನಮ್ಮೆಲ್ಲರ ಕೂಗು ಭಾರತಕ್ಕೆ ಅಲ್ಲ, ಇಡೀ ವಿಶ್ವಕ್ಕೆ ಕೇಳಬೇಕು. ನಾವು ನಮ್ಮ ನೀರನ್ನು ಕೇಳಿದ್ದೇವೆ, ಪಾಕಿಸ್ತಾನದ ನೀರಲ್ಲ. ತಮಿಳುನಾಡಿಗೆ ನಾವು ಕಾವೇರಿ ನೀರು ಕೊಟ್ಟಿದ್ದೇವೆ. ನಮ್ಮ ಪಾಲಿನ ನೀರು ನಮಗೆ ಕೊಡಲಿ ಎಂದು ಶಿವರಾಜ್ ಕುಮಾರ್ ಗುಡುಗಿದ್ದಾರೆ.
ರವಿಚಂದ್ರನ್: ನಿಮ್ಮ ಸಮಸ್ಯೆಗೆ ಚಿತ್ರರಂಗ ಒಗ್ಗಟ್ಟಾಗಿ ಬಂದಿದೆ. ನಿಮ್ಮ ಪ್ರೀತಿ, ಅಭಿಮಾನವೇ ನಮ್ಮನ್ನು ಇಲ್ಲಿಗೆ ಬರುವಂತೆ ಮಾಡಿದೆ. ನಮ್ಮ ನೋವು ಎಲ್ಲಿಗೆ ತಲುಪಬೇಕು ಅಲ್ಲಿಗೆ ಹೋಗಬೇಕು. ನಿಮ್ಮ ಕಷ್ಟ-ಸುಖಗಳಿಗೆ ಚಿತ್ರರಂಗ ಸದಾ ಇದ್ದೇ ಇರುತ್ತೆ. 
ಉಪೇಂದ್ರ: ನಮ್ಮ ದೇಶ ವಿಶ್ವಕ್ಕೆ ಕೊಡೋದನ್ನು ಕಲಿಸಿದೆ. ಇಲ್ಲಿ ರೈತರು ಕಷ್ಟದಲ್ಲಿದ್ದಾರೆ ನಮ್ಮ ನೀರು ನಮಗೆ ಕೊಡಿ. ನಿಮ್ಮೆಲ್ಲರ ಹೋರಾಟಕ್ಕೆ ನಮ್ಮ ಬೆಂಬಲ ಸದಾ ಇರುತ್ತೆ. 
ಪುನೀತ್ ರಾಜ್ ಕುಮಾರ್: ನಾವೆಲ್ಲ ಭಾರತೀಯರು,ಕರ್ನಾಟಕಕ್ಕೆ ಸಮಸ್ಯೆ ಬಂದರೆ ನಾವೆಲ್ಲ ಒಂದಾಗಬೇಕು. ನಿಮ್ಮ ಸಮಸ್ಯೆಗೆ ನಮ್ಮ ಬೆಂಬಲ ಸದಾ ಇರುತ್ತೆ. ಕೇಂದ್ರ-ರಾಜ್ಯ ಸರ್ಕಾರಗಳು ಸಮಸ್ಯೆ ಬಗೆಹರಿಸಬೇಕು ಎಂದು ಪುನೀತ್ ಆಗ್ರಹಿಸಿದ್ದಾರೆ. 
ದುನಿಯಾ ವಿಜಿ: ಉತ್ತರ ಕರ್ನಾಟಕ ಜನರ ಹೋರಾಟಕ್ಕೆ ನಮ್ಮೆಲ್ಲರ ಬೆಂಬಲ ಇದೆ. ಯುವಕರು ಗೋವಾಕ್ಕೆ ಪ್ರವಾಸ ಹೋಗುವುದನ್ನು ನಿಲ್ಲಿಸಿ, ಗೋವಾಕ್ಕೆ ತೆರಳುವ ವಾಹನಗಳನ್ನು ನಿಲ್ಲಿಸಿ. ಗೋವಾ ಸರ್ಕಾರಕ್ಕೆ ಆಗ ಪ್ರತಿಭಟನೆ ಬಿಸಿ ತಟ್ಟುತ್ತೆ . 
ದರ್ಶನ್: ನೀರು ಕೊಟ್ಟರೆ ಮೆದು ರೊಟ್ಟಿ ಕೊಡೋಣ. ನೀರು ಕೊಡದೇ ಇದ್ದರೆ ಖಡಕ್ ರೊಟ್ಟಿಯೇ ಕೊಟ್ಟು ಬಿಡೋಣ. ನಿಮ್ಮೆಲ್ಲರ ಹೋರಾಟಕ್ಕೆ ನಾವೆಲ್ಲ ಇರುತ್ತೇವೆ. 
ರಂಗಾಯಣ ರಘು: ಸಾಲ ಮಾಡಿ, ಆದರೆ, ಸಾಲಕ್ಕಾಗಿ ಸಾಯಬೇಡಿ. ಮಳೆ, ಬೆಳೆ ಚೆನ್ನಾಗಿ ಬಂದ ಮೇಲೆ ಸಾಲ ತೀರಿಸಿ . ನಮಗೆ ನ್ಯಾಯ ಬೇಕು, ಕುಡಿಯುವ ನೀರೂ ಬೇಕು. 
ಜಯಮಾಲ: ನಿಮ್ಮೆಲ್ಲರ ಇಚ್ಛಾಶಕ್ತಿ ಹೀಗೆ ಇರಲಿ, ಯೋಜನೆ ಜಾರಿಯಾಗುತ್ತೆ. ರಾಜಕೀಯದ ರಹಿತವಾಗಿ ಸಮಸ್ಯೆ ಪರಿಹರಿಸಲಿ. ಇಂದಿರಾಗಾಂಧಿ, ವಾಜಪೇಯಿ ಜಲ ವಿವಾದ ಬಗೆಹರಿಸಿದ್ದರು. ಪ್ರಧಾನಿ ಮೋದಿ ಮಧ್ಯಸ್ಥಿಕೆ ವಹಿಸಿ ಸಮಸ್ಯೆ ಪರಿಹರಿಸಲಿ. 
ದೊಡ್ಡಣ್ಣ: 1962ರಲ್ಲಿ ಪ್ರವಾಹ ಪೀಡಿತರ ನೆರವಿಗೆ ಚಿತ್ರರಂಗ ಬಂದಿತ್ತು. ಅಂದು ರಾಜ್ ​ಕುಮಾರ್​ ನೇತೃತ್ವದಲ್ಲಿ ಚಿತ್ರರಂಗ ನೆರವಾಗಿತ್ತು. ಬಳಿಕ ಗೋಕಾಕ್ ಚಳವಳಿಯಲ್ಲಿ ಮತ್ತೆ ಚಿತ್ರರಂಗ ಭಾಗಿಯಾಗಿತ್ತು. ರಾಜ್​ಕುಮಾರ್​ ನೇತೃತ್ವದಲ್ಲಿ ಹೋರಾಟ ಯಶಸ್ವಿಯಾಗಿತ್ತು. ಈಗ ಕಳಸಾ-ಬಂಡೂರಿ ಹೋರಾಟಕ್ಕೆ ಚಿತ್ರರಂಗ ಬಂದಿದೆ. ಯೋಜನೆ ಜಾರಿವರೆಗೂ ಚಿತ್ರರಂಗ ನಿಮ್ಮ ಜೊತೆ ಇರುತ್ತೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com