ಎಜಿಯನ್ ಸಮುದ್ರದಲ್ಲಿ ಕೊಚ್ಚಿಹೋದ ೨೬ ನಿರಾಶ್ರಿತರು

ನಾಲ್ಕು ಮಕ್ಕಳು ಮತ್ತು ೧೧ ಮಹಿಳೆಯರನ್ನು ಒಳಗೊಂಡಂತೆ ಎಜಿಯನ್ ಸಮುದ್ರದಲ್ಲಿ ಹಡಗು ಮುಗುಚಿದ ಪರಿಣಾಮ ೨೬ ನಿರಾಶ್ರಿತರು ಮೃತಪಟ್ಟ ಘಟನೆ ನಡೆದಿದೆ. ೨೦೦ಕ್ಕೂ
ನಿರಾಶ್ರಿತರು ಸಮುದ್ರ ದಾಟಲು ಪ್ರಯತ್ನಿಸುವ ಒಂದು ಸಂಗ್ರಹ ಚಿತ್ರ
ನಿರಾಶ್ರಿತರು ಸಮುದ್ರ ದಾಟಲು ಪ್ರಯತ್ನಿಸುವ ಒಂದು ಸಂಗ್ರಹ ಚಿತ್ರ
Updated on

ಅಂಕಾರಾ: ನಾಲ್ಕು ಮಕ್ಕಳು ಮತ್ತು ೧೧ ಮಹಿಳೆಯರನ್ನು ಒಳಗೊಂಡಂತೆ ಎಜಿಯನ್ ಸಮುದ್ರದಲ್ಲಿ ಹಡಗು ಮುಗುಚಿದ ಪರಿಣಾಮ ೨೬ ನಿರಾಶ್ರಿತರು ಮೃತಪಟ್ಟ ಘಟನೆ ನಡೆದಿದೆ. ೨೦೦ಕ್ಕೂ ಹೆಚ್ಚು ಜನರನ್ನು ಹೊತ್ತ ಹಡಗಿನಲ್ಲಿ ಗ್ರೀಕ್ ದ್ವೀಪ ಕೋಸ್ ಗೆ ತೆರಳಲು ಪ್ರಯತ್ನಿಸುತ್ತಿದ್ದರು ಎನ್ನಲಾಗಿದೆ.

೨೦ ಮೀಟರ್ ಉದ್ದದ ಮರದ ಹಡಗು ಟರ್ಕಿ ಬೀಚಿನಿಂದ ಮಂಗಳವಾರ ಬೆಳಗ್ಗೆ ೬:೦೦ ಘಂಟೆಗೆ ಹೊರಟು ಎಜಿಯನ್ ಸಮುದ್ರ ಅಂತರಾಷ್ಟ್ರೀಯ ನೀರಿನಲ್ಲಿ ತೆಳುವಾಗ ಮುಳುಗಿತು ಎಂದು  ಮಾಧ್ಯಮವೊಂದು ವರದಿ ಮಾಡಿದೆ.

ಸ್ಥಳಕ್ಕೆ ಧಾವಿಸಿದ ರಕ್ಷಣಾ ಕಾರ್ಯಾಚರಣೆಯ ಹಡಗುಗಳು ೨೧೧ ಜನರನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದು, ನಾಲ್ಕು ಮಕ್ಕಳ ಹಾಗು ೨೦ ವಯಸ್ಕರ ದೇಹಗಳನ್ನು ಕೂಡ ಪತ್ತೆ ಹಚ್ಚಿದೆ. ಉಳಿದವರ ರಕ್ಷಣಾ ಶೋಧನೆ ಪ್ರಗತಿಯಲ್ಲಿದೆ.

ಭಾನುವಾರ ಎಜಿಯನ್ ಸಮುದ್ರದಲ್ಲಿ ೩೪ ವಲಸಿಗರು ಮುಳುಗಿ ಸತ್ತ ಬೆನ್ನಲ್ಲೇ ಈ ಘಟನೆ ನಡೆದಿದೆ.

ಬಲ್ಲ ಮೂಲಗಳ ಅಂದಾಜಿನ ಪ್ರಕಾರ ಇಲ್ಲಿಯವರೆಗೂ ೨,೩೦,೦೦೦ ನಿರಾಶ್ರಿತರು ಗ್ರೀಕ್ ದ್ವೀಪವನ್ನು ಇಲ್ಲಿಯವರೆಗೆ ತೆರಳಿದ್ದಾರೆ ಇವರೆಲ್ಲರೂ ಯೂರೋಪಿಯನ್ ದೇಶಗಳಲ್ಲಿ ಆಶ್ರಯ ಬಯಸಿದ್ದಾರೆ. ದುರಂತವೆಂದರೆ ಇದೆ ಸಮಯದಲ್ಲಿ ಸುಮಾರು ೨೭೦೦ಕ್ಕೂ ಹೆಚ್ಚು ನಿರಾಶ್ರಿತರು ಅಸುನೀಗಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com