
ನವದೆಹಲಿ: ಕೌಟುಂಬಿಕ ದೌರ್ಜನ್ಯ ಮತ್ತು ತಮ್ಮ ಪತ್ನಿಯ ಕೊಲೆ ಆರೋಪ ಎದುರುಸುತ್ತಿರುವ ಎಎಪಿ ಶಾಸಕ ಸೋಮನಾಥ ಭಾರತಿ ಅವರಿಗೆ ಬಂಧನದಿಂದ ಎರಡು ದಿನಗಳ ಮುಕ್ತಿ ದೊರೆತಿದೆ. ಗುರುವಾರದವರೆಗೆ ಯಾವುದೇ ಕ್ರಮ ತೆಗೆದುಕೊಳ್ಳದಂತೆ ದೆಹಲಿ ಪೊಲೀಸರಿಗೆ ಹೈಕೋರ್ಟ್ ಆದೇಶ ನೀಡಿದೆ.
ಮಧ್ಯಂತರ ಆದೇಶ ನೀಡಿದ ನ್ಯಾಯಮೂರ್ತಿ ಸುರೇಶ್ ಕೈಟ್ ಅವರು ಸೆಪ್ಟಂಬರ್ ೧೭ ರಂದು ವಿಚಾರಣೆಯ ಪ್ರಗತಿಯ ವರದಿ ನೀಡುವಂತೆ ಹೇಳಿದೆ. ಅಂದು ಮತ್ತೆ ವಿಚಾರಣೆ ನಡೆಯಲಿದೆ. ದೆಹಲಿಯ ಮಾಜಿ ಕಾನೂನು ಮಂತ್ರಿಗೆ ಮಧ್ಯಂತರ ರಕ್ಷಣೆ ನೀಡದಂತೆ ದೆಹಲಿ ಪೊಲೀಸರು ಮಾಡಿದ ಮನವಿಯನ್ನು ತಿರಸ್ಕರಿಸಿದ ನ್ಯಾಯಾಲಯ "ನಾನು ದಾಖಲೆಗಳನ್ನು ಪರಿಗಣಿಸಬೇಕಿದೆ, ಆದುದರಿಂದ ಈ ವಿಷವಾಗಿ ಅಫಿಡವಿಟ್ ಸಲ್ಲಿಸಿ" ಎಂದಿದ್ದಾರೆ.
"ನಿಮಗೆ ಪ್ರತುಕ್ರಿಯೆ ಸಲ್ಲಿಸಲು ಇಷ್ಟವಿಲ್ಲದಿದ್ದರೆ ಹೇಳಿ, ಇಂದೆ ವಿಚಾರಣೆ ನಡೆಸಿ ತೀರ್ಪು ನೀಡುತ್ತಾನೆ" ಎಂದು ನ್ಯಾಯಾಲಯ ಹೇಳಿದ್ದು ನಂತರ "ನೋಟಿಸ್ ಜಾರಿ ಮಾಡಲಾಗಿದೆ. ಈ ಮಧ್ಯೆ ದೆಹಲಿ ಪೊಲೀಸರು ವರದಿ ಸಲ್ಲಿಸಲಿದ್ದಾರೆ. ಆಲಿಯವರೆಗೂ ಯಾವುದೇ ಕ್ರಮ ಕೈಗೊಳ್ಳುವುದು ಬೇಡ" ಎಂದಿದ್ದಾರೆ.
ನೆನ್ನೆ ಟ್ರಯಲ್ ನ್ಯಾಯಾಲಯ ಎಎಪಿ ಶಾಸಕನ ವಿರುದ್ಧ ಜಾಮೀನು ರಹಿತ ವಾರೆಂಟ್ ಹೊರಡಿಸಿದ ಹಿನ್ನಲೆಯಲ್ಲಿ ಅವರು ನಿರೀಕ್ಷಣಾ ಜಾಮೀನು ಕೋರಿ ಹೈಕೋರ್ಟ್ ಮೊರೆ ಹೋಗಿದ್ದರು.
Advertisement