ಕಾಂಗ್ರೆಸ್ 50 ವರ್ಷಗಳಲ್ಲಿ ಮಾಡಲಾಗದ್ದನ್ನು ನಾನು 50 ತಿಂಗಳಲ್ಲಿ ಮಾಡುತ್ತೇನೆ: ಮೋದಿ

ಕಾಂಗ್ರೆಸ್‌ನಿಂದ 50 ವರ್ಷಗಳಲ್ಲಿ ಸಾಧ್ಯವಾಗದ್ದನ್ನು ಬಿಜೆಪಿ 50 ತಿಂಗಳಲ್ಲಿ ಮಾಡಿ ತೋರಿಸುತ್ತೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ
Updated on

ವಾರಣಾಸಿ: ಕಾಂಗ್ರೆಸ್‌ನಿಂದ 50 ವರ್ಷಗಳಲ್ಲಿ ಸಾಧ್ಯವಾಗದ್ದನ್ನು ಬಿಜೆಪಿ 50 ತಿಂಗಳಲ್ಲಿ ಮಾಡಿ ತೋರಿಸುತ್ತೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಎಂಟು ತಿಂಗಳಲ್ಲಿ ಇದೇ ಮೊದಲ ಬಾರಿಗೆ ಶುಕ್ರವಾರ ತಮ್ಮ ಲೋಕಸಭಾ ಕ್ಷೇತ್ರ ವಾರಾಣಸಿಗೆ ಭೇಟಿ ನೀಡಿ ಮಾತನಾಡಿದ ಮೋದಿ ಕಾಂಗ್ರೆಸ್‌ನ ‘ಗರೀಭಿ ಹಠಾವೊ’ ಆಂದೋಲನದ ಬಗ್ಗೆ ತೀವ್ರ ವಾಗ್ದಾಳಿ ನಡೆಸಿದರು.  

ಬಡವರ ಜೀವನದಲ್ಲಿ ಸಣ್ಣ ಬದಲಾವಣೆಯನ್ನೂ ಹಿಂದಿನ ಸರ್ಕಾರದಿಂದ ತರಲು ಆಗಿಲ್ಲ. 5 ದಶಕದ ಆಡಳಿತದಲ್ಲಿ ಬಡವರಿಗಾಗಿ ಒಂದು ಬ್ಯಾಂಕ್‌ ಖಾತೆಯನ್ನೂ ತೆರೆಯಲು ಆಗದವರು ಈಗ ಬಿಜೆಪಿ ಸರ್ಕಾರದ ‘ಜನ ಧನ ಯೋಜನೆ’ಬಗ್ಗೆ  ಟೀಕಿಸುತ್ತಿದ್ದಾರೆ ಎಂದು ಕಿಡಿ ಕಾರಿದರು.


ಬಡತನ ನಿರ್ಮೂಲನೆ ಎನ್ನುವುದು ಚುನಾವಣೆ ಸಂದರ್ಭದಲ್ಲಿ ಮಾತ್ರ  ಸಂಪ್ರದಾಯ ಎನ್ನುವಂತೆ ಚಾಲ್ತಿಗೆ ಬರುತ್ತಿತ್ತು.  ಕಳೆದ 40–50 ವರ್ಷಗಳಿಂದ ‘ಗರೀಭಿ ಹಠಾವೊ’ ಎಂಬ ಘೋಷ ವಾಕ್ಯ ಕೇಳುತ್ತಿದ್ದೇವೆ. ಆದರೆ, ಬಡತನ ಮಾತ್ರ ನಿರ್ಮೂಲನೆ ಆಗಿಲ್ಲ ಎಂದು ಅಸಮಾಧಾನ ವ್ಯಕ್ತ ಪಡಿಸಿದರು.

ಜನ ಧನ ಯೋಜನೆಯ ಮೂಲಕ ಇದುವರೆಗೆ 18 ಕೋಟಿ ಬ್ಯಾಂಕ್‌ ಖಾತೆಗಳನ್ನು ತೆರೆಯಲಾಗಿದೆ. ಈ ಖಾತೆಗಳಲ್ಲಿ ಬಡವರು ಇದುವರೆಗೆ 30 ಸಾವಿರ ಕೋಟಿ ಠೇವಣಿ ಇರಿಸಿದ್ದಾರೆ ಎಂದು ಅವರು ತಿಳಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com