
ನವದೆಹಲಿ: ಹಿರಿಯ ಕಾಂಗ್ರೆಸ್ ನಾಯಕ ಎಚ್.ಆರ್. ಭಾರದ್ವಾಜ್ ಮತ್ತೆ ಪಕ್ಷದ ಮುಖಂಡರ ವಿರುದ್ಧ ಟೀಕಾಸ್ತ್ರ ಪ್ರಯೋಗಿಸಿದ್ದಾರೆ. ಕಾಂಗ್ರೆಸ್ ವರಿಷ್ಠರ ಭಟ್ಟಂಗಿಗಳಿಂದಾಗಿ ತಾವು ರಾಜ್ಯಪಾಲನಾಗಬೇಕಾಯಿತು ಎಂದು ಕಿಡಿಕಾರಿದ್ದಾರೆ.
ರಾಜ್ಯಪಾಲ ಹುದ್ದೆಗೆ ನಾನೊಬ್ಬ ಅನರ್ಹ ವ್ಯಕ್ತಿ. ನನ್ನನ್ನು ರಾಜ್ಯಪಾಲರನ್ನಾಗಿ ಮಾಡಿದ್ದ ಕ್ಕಾಗಿ ಮನಮೋಹನ ಸಿಂಗ್‍ರನ್ನು ದೂರುವು ದಿಲ್ಲ. ದಿಲ್ಲಿಯ ಕೆಲವು ಭಟ್ಟಂಗಿಗಳಿಗೆ ಒಳ್ಳೆ ಯವರು ಸರ್ಕಾರದಲ್ಲಿರುವುದೇ ಬೇಕಿಲ್ಲ. ಇಂದಿರಾ ಗಾಂಧಿಯವರು ಯಾವತ್ತೂ ಈ ರೀತಿ ವರ್ತಿಸಿರಲಿಲ್ಲ ಎಂದು ಪುಸ್ತಕ ಬಿಡುಗಡೆ ಸಮಾರಂಭವೊಂದರಲ್ಲಿ ಶನಿವಾರ ಭಾರ ದ್ವಾಜ್ ಕಿಡಿಕಾರಿದ್ದಾರೆ. 2009ರ ಚುನಾವಣೆ ಬಳಿಕ ಕಾನೂನು ಸಚಿವರಾಗಿದ್ದ ಭಾರದ್ವಾಜ್ ರನ್ನು ಕರ್ನಾಟಕದ ರಾಜ್ಯಪಾಲರಾಗಿ ನೇಮಿಸಲಾಗಿತ್ತು.
ಇದೇ ವೇಳೆ ಕರ್ನಾಟಕದ ರಾಜ್ಯಪಾಲರಾಗಿದ್ದಾಗ ಅವಧಿಯಲ್ಲಿ ಕೇಳಿ ಬಂದ ವಿವಾದಗಳ ಕುರಿತೂ ಪ್ರತಿಕ್ರಿಯಿಸಿದ್ದಾರೆ. ನನ್ನನ್ನು ರಾಜ್ಯಪಾಲರನ್ನಾಗಿ ಮಾಡಿ ನಂತರ ಅವಮಾನ ಮಾಡಿದರು ಎಂದೂ ಅಸಮಾಧಾನ ತೋಡಿಕೊಂಡಿದ್ದಾರೆ. ರಾಷ್ಟ್ರಪತಿ, ಉಪರಾಷ್ಟ್ರಪತಿ, ಪ್ರಧಾನಿಯಂಥ ಹುದ್ದೆಗೆ ಸಂವಿಧಾನಬದ್ಧ ಜವಾಬ್ದಾರಿ ಇದೆ. ಹಾಗಾಗಿ ಅಂಥ ಹುದ್ದೆಗೆ ಗೌರವ ನೀಡುವ ಅಗತ್ಯವಿದೆ ಎಂದಿದ್ದಾರೆ ಭಾರದ್ವಾಜ್.
Advertisement