ಭಾರತಕ್ಕೆ ತಾಂತ್ರಿಕ ದಿಗ್ಗಜರು ಘೋಷಿಸಿದ ಪ್ರಮುಖ 5 ಯೋಜನೆಗಳು

ಪ್ರಧಾನಿ ನರೇಂದ್ರ ಮೋದಿ ಸಿಲಿಕಾನ್ ವ್ಯಾಲಿ ಭೇಟಿ ವೇಳೆ ಸಾಫ್ಟ್ ವೇರ್ ಕಂಪನಿಗಳ ಸಿಇಒ ಗಳಿಂದ ಡಿಜಿಟಲ್ ಇಂಡಿಯಾ ಯೋಜನೆಗೆ ಬೆಂಬಲ ಸಿಕ್ಕಿದೆ...
ಸಿಲಿಕಾನ್ ವ್ಯಾಲಿಯಲ್ಲಿ ಪ್ರಧಾನಿ ಮೋದಿ
ಸಿಲಿಕಾನ್ ವ್ಯಾಲಿಯಲ್ಲಿ ಪ್ರಧಾನಿ ಮೋದಿ
ಸಿಲಿಕಾನ್ ವ್ಯಾಲಿ: ಪ್ರಧಾನಿ ನರೇಂದ್ರ ಮೋದಿ ಸಿಲಿಕಾನ್ ವ್ಯಾಲಿ ಭೇಟಿ ವೇಳೆ ಸಾಫ್ಟ್ ವೇರ್ ಕಂಪನಿಗಳ ಸಿಇಒ ಗಳಿಂದ ಡಿಜಿಟಲ್ ಇಂಡಿಯಾ ಯೋಜನೆಗೆ ಬೆಂಬಲ ಸಿಕ್ಕಿದೆ.
ಮೋದಿ ಭೇಟಿ ವೇಳೆ ಆ್ಯಪಲ್ ಸಿಇಒ ಟಿಮ್ ಕುಕ್, ಮೈಕ್ರೋಸಾಫ್ಟ್ ಸಿಇಒ ಸಿತ್ಯ ನಡೆಲ್ಲಾ, ಗೂಗಲ್ ಸಿಇಒ ಸುಂದರ್ ಪಿಚ್ಚೈ, ಕ್ವಾಲ್ಕೋಮ್ ನ ಕಾರ್ಯಕಾರಿ ಅಧ್ಯಕ್ಷ ಪೌಲ್ ಜಾಗೋಬ್, ಸಿಸ್ಕೋ ಕಾರ್ಯಕಾರಿ ಮುಖ್ಯಸ್ಥ ಜಾನ್ ಛೇಂಬರ್ಸ್ ಮತ್ತು ಅಡೋಬ್ ಸಿಇಒ ಶಂತನು ನಾರಾಯೆಣ್ ಡಿಜಿಟಲ್ ಇಂಡಿಯಾ ಯೋಜನೆಗಳಿಗೆ ಸಹಕರಿಸುವ ಭರವಸೆ ನೀಡಿದರು. 
ಐದು ಯೋಜನೆಗಳು ಇಂತಿವೆ:
* ಜಾಗತಿಕ ಹುಡುಕು ತಾಣ ಗೂಗಲ್ ದೇಶದ ಪ್ರಮುಖ 500 ರೇಲ್ವೆ ನಿಲ್ದಾಣಗಳಲ್ಲಿ ಉಚಿತ ವೈ-ಪೈ ಕೇಂದ್ರಗಳನ್ನು ಸ್ಥಾಪಿಸಲು ಭಾರತಕ್ಕೆ ನೆರವಾಗಲಿದೆ. 
* ಮೊಬೈಲ್ ಹಾಗೂ ಇಂಟರ್ ನೆಟ್ ಸೇವೆಯನ್ನು ಭಾರತದಲ್ಲಿ ಅಭಿವೃದ್ಧಿಗೊಳಿಸಲು ಚಿಪ್ ತಯಾರಿಕಾ ಕಂಪನಿ ಕ್ವಾಲ್ಕೋಮನ್ ಶತಕೋಟಿ ರು. ಹೂಡಲು ಆಸಕ್ತವಾಗಿದೆ. 
* ವಿಶ್ವದ ಇತರೆ ದೇಶಗಳಿಗೆ ಹೋಲಿಸಿದಲ್ಲಿ ಭಾರತದಲ್ಲಿ ಇಂಟರ್ನೆಟ್ ಮೊಬೈಲ್ ದಟ್ಟಣೆ ಹೆಚ್ಚು. ಅದನ್ನು ಸರಿದೂಗಿಸಲು ಬೆಂಗಳೂರಿನಲ್ಲಿ ಕ್ವಾಲ್ಕೋಮನ್ ಡಿಸೈನ್ ಇಂಡಿಯಾ ಪ್ರಯೋಗಾಲಯವೊಂದನ್ನು ಸ್ಥಾಪಿಸಲು ಆಸಕ್ತಿ ತೋರಿದೆ. 
* ಮೈಕ್ರೋಸಾಫ್ಟ್ ಸಿಇಒ ಸತ್ಯ ನಡೆಲ್ಲಾ ಭಾರತದ ಐದು ಲಕ್ಷ ಹಳ್ಳಿಗಳನ್ನು ಬ್ರಾಡ್ ಬ್ಯಾಂಡ್ ಮೂಲಕ ಸಂಪರ್ಕಿಸುವ ಭಾರತ ಸರ್ಕಾರದ ಯೋಜನೆಗೆ ಬಂಡವಾಳ ಹೂಡಲಿದೆ ಎಂದಿದ್ದಾರೆ. 
* ಮೈಕ್ರೋಸಾಫ್ಟ್ ಮುಂದಿನ ವಾರ ಕ್ಲೌಡ್ ಕಂಪ್ಯೂಟಿಂಗ್ ನ ಡಾಟಾ ಕೇಂದ್ರಗಳನ್ನು ಭಾರತದಲ್ಲಿ ಸ್ಥಾಪಿಸುವ ಬಗ್ಗೆ ಮುಂದಿನ ವಾರ ಘೋಷಿಸುವುದಾಗಿ ಹೇಳಿದೆ. ಇದರಿಂದ ದೇಶದೆಲ್ಲಡೆ ಇಂಟರ್ನೆಟ್ ರಚನಾತ್ಮಕವಾಗಿ, ದಕ್ಷತೆಯಿಂದ ಹಾಗೂ ಫಲದಾಯಿಕವಾಗಿ ಕಾರ್ಯನಿರ್ವಹಿಸುವಂತೆ ಮಾಡಲು ಸಾಧ್ಯವೆಂದು ನಾಡೆಲ್ಲಾ ಅಭಿಪ್ರಾಯಪಟ್ಟಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com