ಡಿಜಿಟಲ್ ಇಂಡಿಯಾ ವಿವಾದಕ್ಕೆ ತೆರೆ ಎಳೆಯಲು ಪ್ರಯತ್ನಿಸಿದ ಫೇಸ್ಬುಕ್

ನರೇಂದ್ರ ಮೋದಿ ಅವರ 'ಡಿಜಿಟಲ್ ಇಂಡಿಯಾ' ಅಭಿಯಾನಕ್ಕೆ ಬೆಂಬಲಿಸಲು ಫೇಸ್ಬುಕ್ ನಲ್ಲಿ ತಮ್ಮ ಫೋಟೋಗಳಿಗೆ ತಿರಂಗವನ್ನು ಬಳಿದುಕೊಳ್ಳಲು ಅವಕಾಶ ನೀಡಿದ್ದ
ಡಿಜಿಟಲ್ ಇಂಡಿಯಾ ಅಭಿಯಾನಕ್ಕೆ ಬೆಂಬಲಿಸಿ ಫೋಟೋ ಬದಲಿಸಿಕೊಂಡಿದ್ದ ಮಾರ್ಕ್ ಜ್ಯೂಕರ್ ಬರ್ಗ್
ಡಿಜಿಟಲ್ ಇಂಡಿಯಾ ಅಭಿಯಾನಕ್ಕೆ ಬೆಂಬಲಿಸಿ ಫೋಟೋ ಬದಲಿಸಿಕೊಂಡಿದ್ದ ಮಾರ್ಕ್ ಜ್ಯೂಕರ್ ಬರ್ಗ್

ನವದೆಹಲಿ: ನರೇಂದ್ರ ಮೋದಿ ಅವರ 'ಡಿಜಿಟಲ್ ಇಂಡಿಯಾ' ಅಭಿಯಾನಕ್ಕೆ ಬೆಂಬಲಿಸಲು ಫೇಸ್ಬುಕ್ ನಲ್ಲಿ ತಮ್ಮ ಫೋಟೋಗಳಿಗೆ ತಿರಂಗವನ್ನು ಬಳಿದುಕೊಳ್ಳಲು ಅವಕಾಶ ನೀಡಿದ್ದ ನಡೆ ವಿವಾದಕ್ಕೆ ಎಡೆ ಮಾಡಿ ಕೊಟ್ಟಿತ್ತು. ಏಕೆಂದರೆ ಆ ಭಿಯಾನದ ಜೊತೆ ಇಂಟರ್ನೆಟ್.ಆರ್ಗ್ ಮಿಳಿತಗೊಂಡಿದೆ ಎಂಬ ಆರೋಪ ಕೇಳಿ ಬಂದಿತ್ತು. ಏಕೆಂದರೆ ಇಂಟರ್ನೆಟ್.ಆರ್ಗ್, ನಿರ್ಲಿಪ್ತ ಅಂತರ್ಜಾಲಕ್ಕೆ ವಿರೋಧಿ ಎಂದೆ ಬಣ್ಣಿಸಲಾಗಿತ್ತು.

ಈಗ ಈ ವಿವಾದಕ್ಕೆ ತೆರೆ ಎಳೆಯಲು ಪ್ರಯತ್ನಿಸಿರುವ ಫೇಸ್ಬುಕ್ ಸಂಸ್ಥೆ ಇದು ಅವರ ಎಂಜಿನಿಯರ್ ಒಬ್ಬನ ತಪ್ಪು ಎಂದು ತಿಳಿಸಿದೆ.

"ಡಿಜಿಟಲ್ ಇಂಡಿಯಾಗೆ ನಿಮ್ಮ ಚಿತ್ರ ಬದಲಾಯಿಸುವುದಕ್ಕೂ, ಇಂಟರ್ನೆಟ್. ಆರ್ಗ್ ಗೂ ಸಂಬಂಧವಿಲ್ಲ. ಎಂಜಿನಿಯರ್ ಒಬ್ಬನ ತಪ್ಪಿನಿಂದ 'ಇಂಟರ್ನೆಟ್.ಆರ್ಗ್ ಪ್ರೊಫೈಲ್ ಪಿಕ್ಚರ್' ಎಂಬುದನ್ನು ಕೋಡಿಂಗ್ ನಲ್ಲಿ ಬಳಸಲಾಗಿತ್ತು" ಎಂದು ಫೇಸ್ಬುಕ್ ವಕ್ತಾರ ತಿಳಿಸಿದ್ದಾರೆ.

"ಆದರೆ ಇದು ಯಾವುದೇ ರೀತಿ ಇಂಟರ್ನೆಟ್.ಆರ್ಗ್ ಸಂಬಧಿಸಿಲ್ಲ. ಈ ಗೊಂದಲವನ್ನು ಬಗೆಹರಿಸಲು ಸಂಪೂರ್ಣ ಕೋಡ್ ಬದಲಾಯಿಸಿದ್ದೇವೆ" ಎಂದು ಅವರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com