ಸಲಿಂಗ ಮದುವೆ ಮಾನ್ಯತೆಗಾಗಿ ಚೈನಾ ಜೋಡಿ ನಡೆಸಿದ ಹೋರಾಟಕ್ಕೆ ಸಿಗದ ಕೋರ್ಟ್ ಮನ್ನಣೆ

ಚೈನಾದಲ್ಲಿ ಇಂತಹ ಮೊದಲ ಪ್ರಕರಣದಲ್ಲಿ ಬುಧವಾರ ನ್ಯಾಯಾಧೀಶರು ಸಲಿಂಗ ಮದುವೆ ಅಸಾಧು ಎಂದು ನೊಂದಣಿ ಸಾಧ್ಯವಿಲ್ಲ ಎಂದಿದ್ದಾರೆ.
ಚೈನಾದಲ್ಲಿ ಸಲಿಂಗ ಮದುವೆ ಮಾನ್ಯತೆಗಾಗಿ ಹೋರಾಟ ನಡೆಸಿದ್ದ ಜೋಡಿ
ಚೈನಾದಲ್ಲಿ ಸಲಿಂಗ ಮದುವೆ ಮಾನ್ಯತೆಗಾಗಿ ಹೋರಾಟ ನಡೆಸಿದ್ದ ಜೋಡಿ

ಬೀಜಿಂಗ್: ಚೈನಾದಲ್ಲಿ ಇಂತಹ ಮೊದಲ ಪ್ರಕರಣದಲ್ಲಿ ಬುಧವಾರ ನ್ಯಾಯಾಧೀಶರು ಸಲಿಂಗ ಮದುವೆ ಅಸಾಧು ಎಂದು ನೊಂದಣಿ ಸಾಧ್ಯವಿಲ್ಲ ಎಂದಿದ್ದಾರೆ.

ತಮ್ಮ ಮದುವೆ ನೊಂದಣಿ ತಿರಸ್ಕಾರವಾದ ಮೇಲೆ ಸುನ್ ವೆನ್ಲಿನ್ ಮತ್ತು ಹು ಮಿಂಗ್ಲೈಂಗ್ ಚಂಗ್ಶಾ ನಗರ ಅಧಿಕಾರಿಗಳ ವಿರುದ್ಧ ಕಾನೂನು ದ್ಯಾವೆ ಹೂಡಿದ್ದರು ಎಂದು ಬಿಬಿಸಿ ವರದಿ ಮಾಡಿದೆ.

ಒಂದೇ ಲಿಂಗದ ಮದುವೆಗೆ ಚೈನಾದಲ್ಲಿ ಮಾನ್ಯತೆ ಇಲ್ಲ ಆದರೆ ಸಲಿಂಗಕಾಮದ ಬಗ್ಗೆ ಹೆಚ್ಚಿನ ಅರಿವು ಮೂಡುತ್ತಿದೆ.

ನ್ಯಾಯಾಲಯ ಪ್ರವೇಶಿಸಿದಂತೆ ಸುನ್ (೨೭) ಮತ್ತು ಹು (೩೭) ಬೆಂಬಲಿಗರು ಹರ್ಷೋದ್ಘಾರ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಅಧಿಕಾರಿಗಳು ಕೇವಲ ೧೦೦ ಜನರನ್ನಷ್ಟೇ ನ್ಯಾಯಾಲಯದ ಒಳಗೆ ಹೋಗಲು ಅನುಮತಿ ನೀಡಿದ್ದರು.

ಪ್ರಕರಣದ ವಾದವನ್ನು ಆಲಿಸಿದ ಕೆಲವೇ ಘಂಟೆಗಳಲ್ಲಿ ಈ ಪ್ರಕರಣವನ್ನು ಕೋರ್ಟ್ ವಜಾ ಮಾಡಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ಜೋಡಿಯ ಪರ ವಾದಿಸಿದ ವಕೀಲ ಶಿ ಫುನಾಂಗ್ ತೀರ್ಪು ನನ್ನ ವಿರುದ್ಧ ಇರುತ್ತದೆ ಎಂದು ಮಂಗೊಂಡಿದ್ದೆ ಆದರೆ ಇಷ್ಟು ಬೇಗ ತೀರ್ಪು ನೀಡುತ್ತಾರೆ ಎಂದುಕೊಂಡಿರಲಿಲ್ಲ.

ಇದರ ವಿರುದ್ಧ ಉನ್ನತ ನ್ಯಾಯಾಲಯದ ಮೊರೆ ಹೋಗುವುದಾಗಿ ಜೋಡಿ ತಿಳಿಸಿದ್ದು, ಈ ದ್ಯಾವೆ ಕೈಬಿಡಲು ಪೊಲೀಸರು ಒತ್ತಡ ಹೇರಿದ್ದರು ಎಂದು ಕೂಡ ಆರೋಪಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com