ಭಾರತೀಯ ಗೂಢಾಚಾರಿ ಬಗ್ಗೆ ರಾಷ್ಟ್ರೀಯ ಸಂಸತ್ತಿನಲ್ಲಿ ವಿವರಿಸಲಿರುವ ಸರ್ತಜ್ ಅಜೀಜ್

ಪಾಕಿಸ್ತಾನದಲ್ಲಿ ಭಾರತೀಯ ಗೂಢಾಚಾರ ಸಂಸ್ಥೆಗಳ ಚಟುವಟಿಕೆಗಳ ಬಗ್ಗೆ ವಿದೇಶಾಂಗ ವ್ಯವಹಾರಗಳ ಪಾಕಿಸ್ತಾನಿ ಸಂಸತ್ತಿನ ಸ್ಥಾಯಿ ಸಮಿತಿಗೆ ಸೋಮವಾರ ವಿವರ ನೀಡಲಾಗುವುದು ಎಂದು...
ಪಾಕಿಸ್ತಾನಿ ಪ್ರಧಾನ ಮಂತ್ರಿ ನವಾಜ್ ಶರೀಫ್ ಅವರ ವಿದೇಶಾಂಗ ವ್ಯವಹಾರಗಳ ಸಲಹೆಗಾರ ಸರ್ತಜ್ ಅಜೀಜ್
ಪಾಕಿಸ್ತಾನಿ ಪ್ರಧಾನ ಮಂತ್ರಿ ನವಾಜ್ ಶರೀಫ್ ಅವರ ವಿದೇಶಾಂಗ ವ್ಯವಹಾರಗಳ ಸಲಹೆಗಾರ ಸರ್ತಜ್ ಅಜೀಜ್

ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಭಾರತೀಯ ಗೂಢಾಚಾರ ಸಂಸ್ಥೆಗಳ ಚಟುವಟಿಕೆಗಳ ಬಗ್ಗೆ ವಿದೇಶಾಂಗ ವ್ಯವಹಾರಗಳ ಪಾಕಿಸ್ತಾನಿ ಸಂಸತ್ತಿನ ಸ್ಥಾಯಿ ಸಮಿತಿಗೆ ಸೋಮವಾರ ವಿವರ ನೀಡಲಾಗುವುದು ಎಂದು ಮಾಧ್ಯಮವೊಂದು ವರದಿ ಮಾಡಿದೆ.

ಈ ಸಮಿತಿಗೆ ಪಾಕಿಸ್ತಾನಿ ಪ್ರಧಾನ ಮಂತ್ರಿ ನವಾಜ್ ಶರೀಫ್ ಅವರ ವಿದೇಶಾಂಗ ವ್ಯವಹಾರಗಳ ಸಲಹೆಗಾರ ಸರ್ತಜ್ ಅಜೀಜ್ ವಿವರ ನೀಡಲಿದ್ದಾರೆ. ಈ ಸ್ಥಾಯಿ ಸಮಿತಿಯ ಅಧ್ಯಕ್ಷ ಅವೈಸ್ ಅಹ್ಮನ್ ಖಾನ್ ಎಂದು ಡಾನ್ ಪತ್ರಿಕೆ ವರದಿ ಮಾಡಿದೆ.

ಸೆನೆಟ್ ಭದ್ರತಾ ಮಂಡಲಿ ಎದುರು ಕಳೆದ ವಾರವಷ್ಟೇ ಈ ವಿಷಯವಾಗಿ ಭದ್ರತಾ ಸಚಿವ ಖವಾಜಾ ಅಸೀಫ್ ವಿವರಿಸಿದ್ದರು ಎಂದು ಕೂಡ ದಿನಪತ್ರಿಕೆ ವರದಿ ಮಾಡಿದೆ.

ಮಾರ್ಚ್ ೨೯ ರಂದು ಬಂಧಿತ ಭಾರತೀಯ ಗೂಢಾಚಾರಿ ತಪ್ಪೊಪ್ಪಿಕೊಂಡಿರುವ ವಿಡಿಯೋವನ್ನು ಅಂತರ ಸೇವೆಗಳ ಸಾರ್ವಜನಿಕ ಸಂಪರ್ಕ ಇಲಾಖೆ ಬಿಡುಗಡೆ ಮಾಡಿತ್ತು. ಇದರಲ್ಲಿ ಆ ಗೂಢಾಚಾರಿ ಬಲೋಚಿಸ್ಥಾನ ಮತ್ತು ಕರಾಚಿಯಲ್ಲಿ ಭಯೋತ್ಪಾದನಾ ಚಟುವಟಿಕೆಗಳನ್ನು ನಡೆಸಲು ಪ್ರಯತ್ನಿಸಿದ್ದರ ಬಗ್ಗೆ ಒಪ್ಪಿಕೊಂಡಿದ್ದ.

ಆರ್ ಎ ಡಬ್ಲ್ಯು ಏಜೆಂಟ್ ತಪ್ಪೊಪ್ಪಿಕೊಂಡ ಆ ವಿಡಿಯೋದಲ್ಲಿ, ಬಲೋಚಿಸ್ಥಾನದ ಬಂಡುಕೋರರ ಜೊತೆಗೆ ಸಭೆ ನಡೆಸಿ, ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸುವುದು ಅವನ ಕರ್ತವ್ಯವಾಗಿತ್ತು ಎಂದು ಒಪ್ಪಿಕೊಂಡಿದ್ದನು ಎಂದು ದಿನಪತ್ರಿಕೆ ವರದಿ ಮಾಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com