ಬಿಬಿಎಂಪಿ ಸಹಾಯಕ ಆಯುಕ್ತ ಕೆ.ಮಥಾಯಿ ಎತ್ತಂಗಡಿ

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ)ಯ ಜಾಹೀರಾತು ಹಗರಣ ಬಯಲಿಗೇಳೆದಿದ್ದ ಬಿಬಿಎಂಪಿ ಸಹಾಯಕ ಆಯುಕ್ತ ಕೆ.ಮಥಾಯಿ ಅವರನ್ನು...
ಕೆ.ಮಥಾಯಿ
ಕೆ.ಮಥಾಯಿ
ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ)ಯ ಜಾಹೀರಾತು ಹಗರಣ ಬಯಲಿಗೇಳೆದಿದ್ದ ಬಿಬಿಎಂಪಿ ಸಹಾಯಕ ಆಯುಕ್ತ ಕೆ.ಮಥಾಯಿ ಅವರನ್ನು ಮಂಗಳವಾರ ಮಾತೃ ಇಲಾಖೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಗೆ ವರ್ಗಾವಣೆ ಮಾಡಲಾಗಿದೆ.
ನಿಯಮಾವಳಿಗೆ ವ್ಯತಿರಿಕ್ತವಾಗಿ ನಡೆದುಕೊಂಡ ಆರೋಪದ ಹಿನ್ನೆಲೆಯಲ್ಲಿ ಕೆ.ಮಥಾಯಿ ಅವರ ವಿರುದ್ಧ ಶಿಸ್ತು ಕ್ರಮಕ್ಕೆ ಮುಂದಾಗಿರುವ ಸರ್ಕಾರ, ತಕ್ಷಣದಿಂದಲೇ ಜಾರಿಗೆ ಬರುವಂತೆ ಅವರನ್ನು ಬಿಬಿಎಂಪಿ ಸೇವೆಯಿಂದ ಬಿಡುಗಡೆಗೊಳಿಸಿದೆ
ಕರ್ನಾಕಟ ನಾಗರಿಕ ಸೇವಾ ನಿಯಮ ಉಲ್ಲಂಘಿಸಿದ ಆರೋಪದ ಮೇಲೆ ಮಥಾಯಿ ಅವರನ್ನು ವರ್ಗಾವಣೆ ಮಾಡಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಗೆ ಆದೇಶ ಹೊರಡಿಸಿದೆ.
ಈ ಹಿಂದೆ ಮಥಾಯಿ ಅವರನ್ನು ಜಾಹೀರಾತು ವಿಭಾಗದಿಂದ ಎತ್ತಂಗಡಿ ಮಾಡಿ, ಮಾರುಕಟ್ಟೆ ವಿಭಾಗದ ಜವಾಬ್ದಾರಿ ನೀಡುವಂತೆ ಬಿಬಿಎಂಪಿ ಮೇಯರ್ ಬಿ.ಎನ್.ಮಂಜುನಾಥ್ ರೆಡ್ಡಿ ಅವರು ಆಯುಕ್ತರಿಗೆ ಶಿಫಾರಸು ಮಾಡಿದ್ದರು.
ಮಥಾಯಿ ಅವರು 2014ರಿಂದ ಬಿಬಿಎಂಪಿಯ ಜಾಹೀರಾತು ವಿಭಾಗದ ಸಹಾಯಕ ಆಯುಕ್ತರಾಗಿ ಕಾರ್ಯನಿರ್ವಹಸುತ್ತಿದ್ದರು. ಇದಕ್ಕು ಮುನ್ನ ಅವರು ರಾಜ್ಯದ ಹಲವು ಕಡೆ ಕಾರ್ಯನಿರ್ವಹಿಸಿದ್ದಾರೆ. ಅವರನ್ನು ಆರು ತಿಂಗಳಲ್ಲಿ ಮೂರು ಬಾರಿ ವರ್ಗಾವಣೆ ಮಾಡಲಾಗಿತ್ತು.
ಜಾಹೀರಾತು ವಿಭಾಗದ ಅವ್ಯವಸ್ಥೆ, ಜಾಹೀರಾತು ತೆರಿಗೆ ಸಂಗ್ರಹದ ವೈಫಲ್ಯದ ಬಗ್ಗೆ ಕೆ.ಮಥಾಯಿ ಅವರು 5 ವರದಿಗಳನ್ನು ನೀಡಿದ್ದರು. ತೆರಿಗೆ ಸಂಗ್ರಹ ವೈಫಲ್ಯದಿಂದ 2000 ಸಾವಿರ ಕೋಟಿ ನಷ್ಟ ಉಂಟಾಗಿದೆ ಎಂದು ಅವರು ವರದಿಯಲ್ಲಿ ಹೇಳಿದ್ದರು. ಅಲ್ಲದೆ ಬಿಬಿಎಂಪಿಯ ಜಾಹೀರಾತು, ಕಂದಾಯ ವಿಭಾಗದ ಅಧಿಕಾರಿಗಳು, ನೌಕರರು, ಹಿರಿಯ ಅಧಿಕಾರಿಗಳ ಅಡಳಿತ ವೈಫಲ್ಯವೇ ಈ ನಷ್ಟಕ್ಕೆ ಕಾರಣ ಎಂದು ವರದಿಯಲ್ಲಿ ಹೇಳಿದ್ದರು. ಈ ಜಾಹೀರಾತು ಹಗರಣದ ಬಗ್ಗೆ ಸಿಬಿಐ ಅಥವ ಸಿಐಡಿ ತನಿಖೆಯಾಗಬೇಕು ಎಂದು ಶಿಫಾರಸು ಮಾಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com