ಚೆನ್ನೈ: ಸಿನಿಮೀಯ ರೀತಿ ರೈಲು ದರೋಡೆ, ಬರೋಬ್ಬರಿ 342 ಕೋಟಿ ಲೂಟಿ!

ತಮಿಳುನಾಡಿನಲ್ಲಿ ಸಿನಿಮೀಯ ರೀತಿ ರೈಲು ದರೋಡೆ ನಡೆದಿದ್ದು, ದರೋಡೆಕೋರರು ಭಾರತೀಯ ರಿಸರ್ವ್ ಬ್ಯಾಂಕ್ ಗೆ ಸಾಗಿಸುತ್ತಿದ್ದ ಬರೋಬ್ಬರಿ...
ಸೇಲಂ ಎಕ್ಸ್ ಪ್ರೆಸ್ ರೈಲಿನ ಬೋಗಿ
ಸೇಲಂ ಎಕ್ಸ್ ಪ್ರೆಸ್ ರೈಲಿನ ಬೋಗಿ
ಚೆನ್ನೈ: ತಮಿಳುನಾಡಿನಲ್ಲಿ ಸಿನಿಮೀಯ ರೀತಿ ರೈಲು ದರೋಡೆ ನಡೆದಿದ್ದು, ದರೋಡೆಕೋರರು ಭಾರತೀಯ ರಿಸರ್ವ್ ಬ್ಯಾಂಕ್ ಗೆ ಸಾಗಿಸುತ್ತಿದ್ದ ಬರೋಬ್ಬರಿ 342 ಕೋಟಿ ರುಪಾಯಿ ಲೂಟಿ ಮಾಡಿದ್ದಾರೆ. 
ಸೇಲಂನಿಂದ ಚೆನ್ನೈಗೆ ತೆರಳುತ್ತಿದ್ದ ಸೇಲಂ ಎಕ್ಸ್ ಪ್ರೆಸ್ ರೈಲಿನ 2 ಬೋಗಿಗಳಲ್ಲಿ ಸುಮಾರು 23 ಟನ್ ಗಳಷ್ಟು ಹಳೆಯ ನೋಟುಗಳನ್ನು ಭಾರತೀಯ ರಿಸರ್ವ್ ಬ್ಯಾಂಕ್ ಗೆ ಸಾಗಿಸಲಾಗುತ್ತಿತ್ತು. ಒಟ್ಟು 228 ಬಾಕ್ಸ್ ಗಳಲ್ಲಿ 342 ಕೋಟಿ ರುಪಾಯಿಗಳಷ್ಟು ಹಳೇ ನೋಟುಗಳಿದ್ದವು ಎಂದು ವರದಿ ಮಾಡಲಾಗಿದೆ.
ದರೋಡೆಕೋರರು ರೈಲಿನ ಮೇಲಿನಿಂದಲೇ ಗ್ಯಾಸ್ ಕಟ್ಟರ್ ಬಳಸಿ ಬೋಗಿಯ ಒಳಗೆ ಇಳಿದು ನೂರಾರು ಕೋಟಿ ರುಪಾಯಿ ಹಣವನ್ನು ದೋಚಿದ್ದಾರೆ. ವಿಪರ್ಯಾಸ ಎಂಬಂತೆ ಈ ಘಟನೆ ರೈಲು ಚೆನ್ನೈನ ಎಗ್ಮೋರ್ ನಿಲ್ದಾಣಕ್ಕೆ ಬಂದಾಗ ಅಧಿಕಾರಿಗಳ ಗಮನಕ್ಕೆ ಬಂದಿದೆ.
ಸುಮಾರು 5 ಬ್ಯಾಂಕ್ ಗಳ ಹಳೇ ನೋಟುಗಳನ್ನು ರೈಲಿನಲ್ಲಿ ಸಾಗಿಸಲಾಗುತ್ತಿತ್ತು. ರೈಲು ನಿಲ್ದಾಣಕ್ಕೆ ಬಂದು ನಿಂತಾಗ ಬಾಕ್ಸ್ ಗಳೆಲ್ಲಾ ಖಾಲಿಯಾಗಿದ್ದಿರುವುದು ಅಧಿಕಾರಿಗಳ ಗಮನಕ್ಕೆ ಬಂದಿದೆ. ಆದರೆ ಒಟ್ಟು ಎಷ್ಟು ಹಣ ಇತ್ತು ಎಂಬ ನಿಖರ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಾಗಿದೆ.
ಘಟನೆ ಬಗ್ಗೆ ಆರ್ ಬಿಐ ದೂರು ನೀಡಿದ್ದು, ರೈಲ್ವೆ ಪೊಲೀಸ್ ಮತ್ತು ತಮಿಳುನಾಡು ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com