ಸಿಂಧುಗೆ ತೆಲಂಗಾಣದಿಂದ 5 ಕೋಟಿ, ಆಂಧ್ರದಿಂದ 3 ಕೋಟಿ ಬಹುಮಾನ ಘೋಷಣೆ

ರಿಯೋ ಒಲಿಂಪಿಕ್ಸ್‌ ಬ್ಯಾಡ್ಮಿಂಟನ್‌ನಲ್ಲಿ ಬೆಳ್ಳಿ ಪದಕ ಗೆದ್ದು ಐತಿಹಾಸಿಕ ದಾಖಲೆ ನಿರ್ಮಿಸಿದ ಪಿ.ವಿ.ಸಿಂಧು ಅವರಿಗೆ ತೆಲಂಗಾಣ ಸರ್ಕಾರ...
ಪಿ.ವಿ.ಸಿಂಧು
ಪಿ.ವಿ.ಸಿಂಧು
ಹೈದ್ರಾಬಾದ್‌: ರಿಯೋ ಒಲಿಂಪಿಕ್ಸ್‌ ಬ್ಯಾಡ್ಮಿಂಟನ್‌ನಲ್ಲಿ ಬೆಳ್ಳಿ ಪದಕ ಗೆದ್ದು ಐತಿಹಾಸಿಕ ದಾಖಲೆ ನಿರ್ಮಿಸಿದ ಪಿ.ವಿ.ಸಿಂಧು ಅವರಿಗೆ ತೆಲಂಗಾಣ ಸರ್ಕಾರ 5 ಕೋಟಿ ರುಪಾಯಿ ನಗದು ಬಹುಮಾನ ಹಾಗೂ ಸರ್ಕಾರಿ ನೌಕರಿ ನೀಡುವುದಾಗಿ ಶನಿವಾರ ಘೋಷಿಸಿದೆ,
ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರು ಹೈದ್ರಾಬಾದ್‌ನ ಅಪ್ರತಿಮ ಸಾಧಕಿಗೆ 5 ಕೋಟಿ ರುಪಾಯಿ ಬಹುಮಾನ ಹಾಗೂ ಸರ್ಕಾರಿ ನೌಕರಿ ನೀಡುವುದಾಗಿ ಹೇಳಿದ್ದಾರೆ. ಅಲ್ಲದೆ ಆಗಸ್ಟ್ 22ರಂದು ತಾಯ್ನಾಡಿಗೆ ಮರಳುತ್ತಿರುವ ಪಿ.ವಿ.ಸಿಂಧು ಅದ್ಧೂರಿ ಸ್ವಾಗತ ನೀಡಲಾಗುವುದು ಎಂದು ತಿಳಿಸಿದ್ದಾರೆ.
ಇನ್ನು ಆಂಧ್ರಪ್ರದೇಶ ಸರ್ಕಾರವೂ ಪಿ.ವಿ.ಸಿಂಧುಗೆ ಮೂರು ಕೋಟಿ ರುಪಾಯಿ, ಗ್ರೂಪ್ ಎ ನೌಕರಿ ಹಾಗೂ ನೂತನ ರಾಜಧಾನಿಯಲ್ಲಿ ಫ್ಲ್ಯಾಟ್ ನೀಡುವುದಾಗಿ ಘೋಷಿಸಿದೆ.
ಈ ಮಧ್ಯೆ, ಸಿಂಧು ನಮ್ಮರಾಜ್ಯದವಳು ಎಂದು ಆಂಧ್ರ ಮತ್ತು ತೆಲಂಗಾಣ ಪರಸ್ಪರ ಹಗ್ಗಜಗ್ಗಾಟ ನಡೆಸುತ್ತಿದ್ದು, ಹೈದ್ರಾಬಾದ್‌ನಲ್ಲಿ ಹುಟ್ಟಿ ಬೆಳೆದಿದ್ದು ಈಕೆ ತೆಲಂಗಾಣದವಳು ಎಂದು ಕೆಲವರು ವಾದಿಸಿದರೆ,ಇನ್ನು ಸಿಮಾಂಧ್ರದವರು ಸಿಂಧು ವಿಜಯವಾಡದಲ್ಲಿ ಹುಟ್ಟಿದ್ದು ನಮ್ಮ ರಾಜ್ಯದ 'ಅಮ್ಮಾಯಿ' ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com