ಸೋರಿಕೆ ಪಾರ್ಟ್-2: ಬಹಿರಂಗವಾಯ್ತು ಸ್ಕಾರ್ಪಿನ್ ರಕ್ಷಣಾ ಸಾಮರ್ಥ್ಯ!

ಇಡೀ ದೇಶವನ್ನೇ ಬೆಚ್ಚಿ ಬೀಳಿಸಿರುವ ಸ್ಕಾರ್ಪಿನ್ ಜಲಾಂತರ್ಗಾಮಿ ನೌಕೆಯ ದಾಖಲೆ ಸೋರಿಕೆ ಪ್ರಕರಣ ಸಂಬಂಧ ಎರಡನೇ ದಾಖಲೆಗಳನ್ನು ಬಿಡುಗಡೆ ಮಾಡಲಾಗಿದ್ದು, ಈ ಬಾರಿ ಜಲಾಂತರ್ಗಾಮಿಯ ರಕ್ಷಣಾ ಸಾಮರ್ಥ್ಯಗಳ ಕುರಿತ ಕಡತಗಳನ್ನು ಬಿಡುಗಡೆ ಮಾಡಲಾಗಿದೆ.
ಸ್ಕಾರ್ಪಿನ್ ಜಲಾಂತರ್ಗಾಮಿ (ಸಂಗ್ರಹ ಚಿತ್ರ)
ಸ್ಕಾರ್ಪಿನ್ ಜಲಾಂತರ್ಗಾಮಿ (ಸಂಗ್ರಹ ಚಿತ್ರ)

ಸಿಡ್ನಿ: ಇಡೀ ದೇಶವನ್ನೇ ಬೆಚ್ಚಿ ಬೀಳಿಸಿರುವ ಸ್ಕಾರ್ಪಿನ್ ಜಲಾಂತರ್ಗಾಮಿ ನೌಕೆಯ ದಾಖಲೆ ಸೋರಿಕೆ ಪ್ರಕರಣ ಸಂಬಂಧ ಎರಡನೇ ದಾಖಲೆಗಳನ್ನು ಬಿಡುಗಡೆ ಮಾಡಲಾಗಿದ್ದು, ಈ ಬಾರಿ  ಜಲಾಂತರ್ಗಾಮಿಯ ರಕ್ಷಣಾ ಸಾಮರ್ಥ್ಯಗಳ ಕುರಿತ ಕಡತಗಳನ್ನು ಬಿಡುಗಡೆ ಮಾಡಲಾಗಿದೆ.

ಜಲಾಂತರ್ಗಾಮಿ ನೌಕೆಯ ಸೂಕ್ಷ್ಮದಾಖಲೆಗಳು ಸೋರಿಕೆಯಾಗಿದೆ ಎಂದು ವರದಿ ಮಾಡಿರುವ "ದಿ ಆಸ್ಟ್ರೇಲಿಯನ್" ಪತ್ರಿಕೆ ಎರಡನೇ ಬಾರಿಗೆ ದಾಖಲೆಗಳನ್ನು ಬಿಡುಗಡೆ ಮಾಡಿದ್ದು, ತನ್ನ  ಅಧಿಕೃತ ವೆಬ್ ಸೈಟ್ ನಲ್ಲಿ ಈ ಬಗ್ಗೆ ದಾಖಲೆಗಳನ್ನು ಪತ್ರಿಕೆ ಅಪ್ ಲೋಡ್ ಮಾಡಿದೆ. ಪತ್ರಿಕೆ ಬಿಡುಗಡೆ ಮಾಡಿದೆ ಎಂದು ಹೇಳಲಾಗುತ್ತಿರುವ ಮಾಹಿತಿಗಳ ಪ್ರಕಾರ ಭಾರತದ ಬಹು ಉದ್ದೇಶಿತ  ಸ್ಕಾರ್ಪಿನ್ ಜಲಾಂತರ್ಗಾಮಿಯ ರಕ್ಷಣಾ ಸಾಮರ್ಥ್ಯಕ್ಕೆ ಕುರಿತಂತೆ ದಾಖಲೆಗಳು ಈ ಬಾರಿ ಬಿಡುಗಡೆಯಾಗಿದ್ದು, ಪ್ರಮುಖವಾಗಿ ನೌಕೆಯ ಸೋನಾರ್ ವ್ಯವಸ್ಥೆ ಕುರಿತಾದ ದಾಖಲೆಗಳು  ಬಿಡುಯಾಗಿವೆ ಎಂದು ಹೇಳಲಾಗುತ್ತಿದೆ.

ಸೋನಾರ್ ವ್ಯವಸ್ಥೆಯ ಸಂಪೂರ್ಣ ಮಾಹಿತಿಗಳು ಬಿಡುಗಡೆಯಾಗಿದ್ದು, ಈ ಸೋನಾರ್ ವ್ಯವಸ್ಥೆ ಫ್ರೀಕ್ವೆನ್ಸಿ, ಯಾವ ಡಿಗ್ರಿಯಲ್ಲಿ ಅದು ಕಾರ್ಯ ನಿರ್ವಹಿಸುತ್ತದೆ ಎಂಬ ಮಾಹಿತಿಗಳು  ಸೋರಿಕೆಯಾಗಿದೆ. ಇದಲ್ಲದೆ ನೌಕೆಯ ನಿರ್ವಹಣಾ ಕಾರ್ಯಸೂಚಿ ಕೂಡ ಸೋರಿಕೆಯಾಗಿದ್ದು, ನೌಕೆ ಹೇಗೆ ಎದುರಾಳಿ ನೌಕೆ ಸಿಡಿಸುವ ಅಸ್ತ್ರವನ್ನು ಗುರಿಯಾಗಿಸಿಕೊಂಡು ದಾಳಿ ಮಾಡುತ್ತದೆ  ಎಂಬ ಆಘಾತಕಾರಿ ಅಂಶ ಕೂಡ ಸೋರಿಕೆಯಾಗಿದೆ ಎಂದು ಪತ್ರಿಕೆ ಹೇಳಿದೆ.

ಸೋರಿಕೆ ಮಾಹಿತಿ ಅಷ್ಟೇನೂ ಅಪಾಯಕಾರಿ ಅಲ್ಲ ಎಂದ ತಜ್ಞರು

ಇನ್ನು ದಿ ಆಸ್ಟ್ರೇಲಿಯನ್ ಪತ್ರಿಕೆ ಪ್ರಸ್ತುತ ಬಿಡುಗಡೆ ಮಾಡಿರುವ ಮಾಹಿತಿಗಳು ಅಷ್ಟೇನೂ ಅಪಾಯಕಾರಿಯಲ್ಲ ಎಂದು ಭಾರತದ ರಕ್ಷಣಾ ಅಭಿಪ್ರಾಯಪಟ್ಟಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿರುವ  ರಕ್ಷಣಾ ತಜ್ಞ ಹಾಗೂ ಸೊಸೈಟಿ ಆಫ್ ಪಾಲಿಸಿ ಸ್ಟಡೀಸ್ ಸಂಸ್ಥೆಯ ನಿರ್ದೇಶಕ ಉದಯ್ ಭಾಸ್ಕರ್ ಅವರು, ಸೋರಿಕೆಯಾದ ಮಾಹಿತಿಯನ್ನು ಸೂಕ್ಷ್ಮವಾಗಿ ಗಮನಿಸಿದರೆ, ಇದೇನೂ ಅಂಥಹ  ಗಂಭೀರ ಸೋರಿಕೆಯಲ್ಲ ಎಂದೆನಿಸುತ್ತದೆ ಎಂದು ಹೇಳಿದ್ದಾರೆ.

"ಮಾರುಕಟ್ಟೆಯಲ್ಲಿ ನಾವು ಈಗ ಯಾವುದೇ ಉಪಕರಣಗಳನ್ನು ತೆಗೆದುಕೊಂಡರೂ ಅದರೊಂದಿಗೆ ಕಾರ್ಯನಿರ್ವಹಣಾ ಸೂಚನೆಗಳ (ಆಪರೇಟಿಂಗ್ ಇನ್ಸ್ ಸ್ಟ್ರಕ್ಷನ್) ಪುಸ್ತಿಕೆಯನ್ನು ನೀಡುತ್ತಾರೆ.  ಪ್ರಸ್ತುತ "ದಿ ಆಸ್ಟ್ರೇಲಿಯನ್" ಪತ್ರಿಕೆ ಬಹಿರಂಗಗೊಳಿಸಿರುವ ಮಾಹಿತಿ ಕೂಡ ಇದೇ ರೀತಿಯಲ್ಲಿದೆ. ನೌಕೆಯ ಪ್ರಾಥಮಿಕ ಕಾರ್ಯನಿರ್ವಹಣಾ ಸೂಚನೆಗಳು ಸೋರಿಕೆಯಾಗಿದೆ. ಆದರೆ  ನಿರ್ಮಾಣ ಹಂತದಲ್ಲಿ ಆಯಾ ದೇಶಗಳು ತಮಗೆ ಬೇಕಾದ ರೀತಿಯಲ್ಲಿ ತಾಂತ್ರಿಕ ಕಾರ್ಯನಿರ್ವಹಣೆಯನ್ನು ಬದಲಿಸಿಕೊಳ್ಳುವ ಅವಕಾಶವಿದೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com