ಸ್ಕಾರ್ಪಿನ್ ಮಾಹಿತಿ ಸೋರಿಕೆಯಲ್ಲ, ಮಾಹಿತಿಯೇ ಕಳವು!

ದಿ ಆಸ್ಟ್ರೇಲಿಯನ್ ಪತ್ರಿಕೆ ವರದಿ ಮಾಡಿರುವಂತೆ ಸ್ಕಾರ್ಪಿನ್ ಜಲಾಂತರ್ಗಾಮಿ ನೌಕೆಯ ಮಾಹಿತಿ ಸೋರಿಕೆಯಾಗಿಲ್ಲ. ಬದಲಿಗೆ ಇಡೀ ದಾಖಲೆಗಳನ್ನೇ ಕದಿಯಲಾಗಿದೆ ಎಂಬ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ.
ಸ್ಕಾರ್ಪಿನ್ ಜಲಾಂತರ್ಗಾಮಿ (ಸಂಗ್ರಹ ಚಿತ್ರ)
ಸ್ಕಾರ್ಪಿನ್ ಜಲಾಂತರ್ಗಾಮಿ (ಸಂಗ್ರಹ ಚಿತ್ರ)

ಸಿಡ್ನಿ: ಪ್ರಮುಖ ಬೆಳವಣಿಗೆಯೊಂದರಲ್ಲಿ ಇಡೀ ದೇಶಾದ್ಯಂತ ವ್ಯಾಪಕ ಚರ್ಚೆಯಾಗುತ್ತಿರುವ ಸ್ಕಾರ್ಪಿನ್ ಜಲಾಂತರ್ಗಾಮಿ ನೌಕೆಯ ಮಾಹಿತಿ ಸೋರಿಕೆ ಪ್ರಕರಣ ಸಂಬಂಧ ಮಹತ್ವದ ಮಾಹಿತಿ ಲಭ್ಯವಾಗಿದ್ದು, ದಿ ಆಸ್ಟ್ರೇಲಿಯನ್ ಪತ್ರಿಕೆ ವರದಿ ಮಾಡಿರುವಂತೆ ಮಾಹಿತಿ ಸೋರಿಕೆಯಾಗಿಲ್ಲ. ಬದಲಿಗೆ ಇಡೀ ದಾಖಲೆಗಳನ್ನೇ ಕದಿಯಲಾಗಿದೆ ಎಂಬ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ.

ಈ ವಿಚಾರವನ್ನು ಸ್ವತಃ ಫ್ರಾನ್ಸ್ ಸರ್ಕಾರ ಒಪ್ಪಿಕೊಂಡಿದ್ದು, ನೌಕಾ  ಮಾಹಿತಿ ಕಳುವಾಗಿದೆ ಎಂದು ಹೇಳಿದೆ. ಇನ್ನೂ ಆಘಾತಕಾರಿ ಅಂಶವೆಂದರೆ ಸ್ಕ್ರಾರ್ಪಿನ್ ನೌಕೆ ನಿರ್ಮಾಣ ಮಾಡುತ್ತಿರುವ  ಡಿಸಿಎನ್ ಎಸ್ ಸಂಸ್ಥೆಯೊಂದಿಗೆ ಭಾರತ ಲ್ಯಾ೦ಡಿ೦ಗ್ ಹೆಲಿಕಾಪ್ಟರ್ ಡಾಕ್‍ಗಳನ್ನು ಖರೀದಿಸುವುದಕ್ಕೆ ಸ೦ಬ೦ಧಿಸಿದ೦ತೆ ಮಹತ್ವದ ದಾಖಲೆಗಳನ್ನು ಹಂಚಿಕೊಂಡಿತ್ತು ಎಂದು  ಹೇಳಲಾಗುತ್ತಿದೆ. ಹೀಗಾಗಿ ಈ ದಾಖಲೆಗಳು ಕೂಡ ಕಳ್ಳರ ಕೈ ಸೇರಿರಬಹುದು ಎಂದು ಭಾರತ ಆತ೦ಕ ವ್ಯಕ್ತಪಡಿಸಿದೆ.

2011ರಲ್ಲೇ ದಾಖಲೆಗೆ ಕನ್ನ
ಸ್ಕಾರ್ಪಿನ್ ನೌಕೆ ನಿಮಾ೯ಣದಲ್ಲಿ ಸಹಭಾಗಿತ್ವ ಹೊ೦ದಿರುವ ಫ್ರಾನ್ಸ್ ನ ಡಿಸಿಎನ್‍ಎಸ್ ಸ೦ಸ್ಥೆಗೆ ಉಪ ಗುತ್ತಿಗೆದಾರರಾಗಿ ಕೆಲಸ ಮಾಡುತ್ತಿದ್ದ ನಿವೃತ್ತ ಅಧಿಕಾರಿಯೊಬ್ಬ 2011ರಲ್ಲೇ ಈ ಎಲ್ಲ  ಮಾಹಿತಿಗಳನ್ನೂ ಕದ್ದಿದ್ದಾನೆ ಎನ್ನಲಾಗುತ್ತಿದೆ. ಮೂಲಗಳ ಪ್ರಕಾರ ನೌಕೆಯ ಬಳಕೆ ಕುರಿತ೦ತೆ ಭಾರತದಲ್ಲಿ ತರಬೇತಿ ನೀಡುತ್ತಿದ್ದ ಈ ಅಧಿಕಾರಿಯನ್ನು ಕತ೯ವ್ಯ ಲೋಪ ಆರೋಪದ ಮೇಲೆ  ಅಧಿಕಾರದಿಂದ ವಜಾಗೊಳಿಸಲಾಗಿತ್ತಂತೆ. ಈ ಸ೦ದರ್ಭದಲ್ಲಿ ಆತ ನೌಕೆಯ ದತ್ತಾ೦ಶಗಳನ್ನು ಕದ್ದು ಆಗ್ನೇಯ ಏಷ್ಯಾ ದೇಶವೊ೦ದಕ್ಕೆ ನೀಡಿದ್ದಾನೆ ಎಂದು ಹೇಳಲಾಗುತ್ತಿದೆ.

ರಕ್ಷಣಾ ಮೂಲಗಳ ಪ್ರಕಾರ ಚೀನಾದ ಎರಡು ಸಂಸ್ಥೆಗಳು ಸ್ಕಾರ್ಪಿನ್ ನೌಕೆಯ ಮಾಹಿತಿ ಪಡೆದುಕೊ೦ಡಿದ್ದು, ಇದಕ್ಕಾಗಿ ಅಧಿಕಾರಿಗೆ ಭಾರಿ ಪ್ರಮಾಣದ ಕಿಕ್ ಬ್ಯಾಕ್ ಕೂಡ ನೀಡಿದೆ ಎಂದು  ಶಂಕಿಸಲಾಗಿದೆ. ಈದಾದ ಬಳಿಕವೇ ದತ್ತಾ೦ಶಗಳು ಆಸ್ಚ್ರೇಲಿಯಾಕ್ಕೆ ರವಾನೆಯಾಗಿರಬಹುದು ಎಂದು ಅಧಿಕಾರಿಗಳು ಶಂಕಿಸಿದ್ದಾರೆ. ಹೀಗೆ ಸೋರಿಕೆಯಾದ ಮಾಹಿತಿಯನ್ನಾಧರಿಸಿ "ದಿ  ಆಸ್ಟ್ರೇಲಿಯನ್ ಪತ್ರಿಕೆ ವರದಿ ಪ್ರಕಟಿಸಿದೆ. ಇದಕ್ಕೆ ಪೂರಕವೆಂಬಂತೆ ಫ್ರಾನ್ಸ್ ಸರ್ಕಾರ ಕೂಡ ಗುರುವಾರ  "ಇದು ದತ್ತಾ೦ಶ ಕಳವು ಪ್ರಕರಣವೇ ಹೊರತು ಸೋರಿಕೆಯಲ್ಲ' ಎ೦ದು ಘೋಷಿಸಿದೆ.

ಮಾಹಿತಿ ಕದ್ದು ಚೀನಾಗೆ ನೀಡಿದ ಮಾಜಿ ಅಧಿಕಾರಿ?
ಇನ್ನು ಮಾಹಿತಿ ಕಳವು ಪ್ರಕರಣದಲ್ಲಿ ಫ್ರಾನ್ಸ್ ನ ನೌಕಾಪಡೆಯ ಮಾಜಿ ಅಧಿಕಾರಿಯ ಪಾತ್ರದ ಕುರಿತು ಶಂಕೆ ವ್ಯಕ್ತವಾಗುತ್ತಿದ್ದು, ಪ್ರಸ್ತುತ ಸ್ಕಾರ್ಪಿನ್ ನೌಕೆ ನಿರ್ಮಾಣ ಮಾಡುತ್ತಿರುವ ಡಿಸಿಎನ್  ಎಸ್ ಸಂಸ್ಥೆಯೊಂದಿಗೆ ಕಾರ್ಯನಿರ್ವಹಿಸಿದ್ದ ಫ್ರಾನ್ಸ್ ನ ನೌಕಾಪಡೆಯ ಮಾಜಿ ಅಧಿಕಾರಿಯೊಬ್ಬ ನೌಕೆಯ ಮಾಹಿತಿಯನ್ನು ಕದ್ದು ಚೀನಾ ಅಥವಾ ಪಾಕಿಸ್ತಾನಕ್ಕೆ ನೀಡಿರಬಹುದು ಎಂದು  ಶಂಕಿಸಲಾಗಿದೆ. ಇದಲ್ಲದೆ ಚೀನಾ ಮೂಲದ ರಕ್ಷಣಾ ಪರಿಕರ ಉತ್ಪಾದನಾ ಸಂಸ್ಥೆಗಳಿಗೆ ಸ್ಕಾರ್ಪಿನ್ ನೌಕೆಯ ಫ್ರೀಕ್ವೆನ್ಸಿ ಹಾಗೂ ಎಲೆಕ್ಟ್ರೋಮ್ಯಾಗ್ನೆಟಿಕ್ ಸಿಗ್ನೇಚರ್ ಕೂಡ  ಹಸ್ತಾ೦ತರಗೊ೦ಡಿರುವ ಶಂಕೆ ವ್ಯಕ್ತವಾಗುತ್ತಿದೆ.

ಒಂದು ವೇಳೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಈ ಸುದ್ದಿ ನಿಜವೇ ಆಗಿದ್ದರೆ ಭಾರತದ ಕೈಸೇರುವ ಈ ನೌಕೆಯು ಹೊರಬಿಡುವ ಸ೦ಕೇತಗಳನ್ನು ಗ್ರಹಿಸಿ, ಯುದ್ಧ ಸ೦ದಭ೯ದಲ್ಲಿ  ಈ ಸ್ಕಾರ್ಪಿನ್ ನೌಕೆಯನ್ನು ಹೊಡೆದುರುಳಿಸುವುದು ಚೀನಾ ಮತ್ತು ಪಾಕಿಸ್ತಾನಕ್ಕೆ ಸುಲಭವಾಗಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com