ವೈಜಾಗ್ ನಿಂದ ಹಾರುವಾಗ ಮಿಗ್-29ಕೆ ಯುದ್ಧ ವಿಮಾನದಿಂದ ಬಿದ್ದುಹೋದ ಇಂಧನ ಟ್ಯಾಂಕ್

ಆಂಧ್ರಪ್ರದೇಶದ ಕರಾವಳಿ ನಗರದ ಐ ಎನ್ ಎಸ್ ದೇಗ ವಾಯು ನೆಲೆಯಿಂದ, ಹಾರುವಾಗ ಭಾರತೀಯ ನೌಕಾಪಡೆಯ ಯುದ್ಧ ವಿಮಾನ ಮಿಗ್-29ಕೆ ನ ಇಂಧನ ಟ್ಯಾಂಕ್ ಆಕಸ್ಮಿಕವಾಗಿ ಬಿದ್ದುಹೋದ ಘಟನೆ
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ವಿಶಾಖಪಟ್ಟಣಂ: ಆಂಧ್ರಪ್ರದೇಶದ ಕರಾವಳಿ ನಗರದ ಐ ಎನ್ ಎಸ್ ದೇಗ ವಾಯು ನೆಲೆಯಿಂದ, ಹಾರುವಾಗ ಭಾರತೀಯ ನೌಕಾಪಡೆಯ ಯುದ್ಧ ವಿಮಾನ ಮಿಗ್-29ಕೆ ನ ಇಂಧನ ಟ್ಯಾಂಕ್ ಆಕಸ್ಮಿಕವಾಗಿ ಬಿದ್ದುಹೋದ ಘಟನೆ ಸೋಮವಾರ ಸಂಭವಿಸಿದೆ. 
ಇದರಿಂದ ರನ್ ವೇ ನಲ್ಲಿ ಸಣ್ಣ ಬೆಂಕಿ ಕಾಣಿಸಿಕೊಂಡಿತು ಆದರೆ ಸಿಬ್ಬಂದಿ ಅದನ್ನು ಕೂಡಲೇ ನಂದಿಸಿದರು ಎಂದು ಪೂರ್ವ ನೌಕಾ ಕಮಾಂಡ್ ವಕ್ತಾರ ಹೇಳಿದ್ದಾರೆ. 
"ಈ ಘಟನೆಯಲ್ಲಿ ಯಾರಿಗೂ ಗಾಯವಾಗಿಲ್ಲ. ವಿಮಾನಕ್ಕಾಗಲಿ ಅಥವಾ ರನ್ ವೇ ಗಾಗಲಿ ಯಾವುದೇ ಹಾನಿಯಾಗಿಲ್ಲ" ಎಂದು ಅಧಿಕಾರಿ ಹೇಳಿದ್ದಾರೆ. 
ಮಿಗ್-29ಕೆ ತನ್ನ ಮಾಮೂಲಿ ತರಬೇತಿ ನಡೆಸುತ್ತಿತ್ತು, ಕೆಳಗಿಳಿಯುವಾಗ ಸಮತೋಲನ ಕಾಪಾಡಲು ಮತ್ತೊಂದು ರಕ್ಕೆಯ ಮೇಲಿದ್ದ ಎರಡನೇ ಇಂಧನ ಟ್ಯಾಂಕ್ ಅನ್ನು ಕೂಡ ಕಳಚಿಕೊಂಡಿತು ಎಂದು ಅಧಿಕಾರಿ ತಿಳಿಸಿದ್ದಾರೆ. 
"ವಿಮಾನ ತನ್ನ ತರಬೇತಿಯನ್ನು ಮುಂದುವರೆಸಿತು ಮತ್ತು ಹಿಂದಿರುವಾಗ, ಸಮತೋಲನ ಕಾಪಾಡಲು ಮತ್ತೊಂದು ರಕ್ಕೆಯ ಮೇಲಿದ್ದ ಎರಡನೇ ಇಂಧನ ಟ್ಯಾಂಕ್ ಅನ್ನು ಕೂಡ ಕಳಚಿಕೊಂಡಿತು. ಖಾಲಿ ರಸ್ತೆಯಲ್ಲಿ ಖಾಲಿ ಇಂಧನ ಟ್ಯಾಂಕ್ ಬಿದ್ದಿತು. ಇದರಿಂದ ಯಾರಿಗೂ ಹಾನಿಯಾಗಿಲ್ಲ" ಎಂದು ಕೂಡ ಅವರು ಹೇಳಿದ್ದಾರೆ. 
ಈ ಘಟನೆಗೆ ಸಂಬಂಧಿಸಿದಂತೆ ನೌಕಾದಳ ತನಿಖೆಗೆ ಆದೇಶಿಸಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com