ಚೆನ್ನೈ: ಅಮ್ಯಾ ಕ್ಯಾಂಟಿನ್ ತಂದುಕೊಟ್ಟ ಜನಪ್ರಿಯತೆಯಿಂದ ಪ್ರೇರೆಪಿತರಾಗಿರುವ ತಮಿಳುಮಾಡು ಮುಖ್ಯಮಂತ್ರಿ ಜೆ.ಜಯಲಲಿತಾ ಅವರು ಈಗ ಗ್ರಾಮೀಣ ಪ್ರದೇಶದಲ್ಲಿ ಯುವಕರಿಗಾಗಿ ಅಮ್ಮಾ ಜಿಮ್ ಹಾಗೂ ಅಮ್ಮಾ ಪಾರ್ಕ್ ನಿರ್ಮಿಸುವುದಾಗಿ ಘೋಷಿಸಿದ್ದಾರೆ.
ಸುಮಾರು 100 ಕೋಟಿ ರುಪಾಯಿ ವೆಚ್ಚದಲ್ಲಿ ಹಳ್ಳಿಗಳಲ್ಲಿ 500 ಜಿಮ್ ಹಾಗೂ ಪಾರ್ಕ್ ನಿರ್ಮಿಸುವುದಾಗಿ ಜಯಲಲಿತಾ ಅವರು ಇಂದು ತಮಿಳುನಾಡು ವಿಧಾನಸಭೆಗೆ ತಿಳಿಸಿದ್ದಾರೆ.
ಪ್ರತಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಒಂದು ಅಮ್ಮಾ ಪಾರ್ಕ್ ಹಾಗೂ ಜಿಮ್ ನಿರ್ಮಿಸುವುದು ಈ ಯೋಜನೆಯ ಉದ್ದೇಶವಾಗಿದೆ. ಅಮ್ಮಾ ಪಾರ್ಕ್ ಗಳಲ್ಲಿ ಶುದ್ಧ ಕುಡಿಯುವ ನೀರು, ಶೌಚಾಲಯ, ಮಕ್ಕಳ ಆಟದ ವಲಯ, ಹಿರಿಯ ನಾಗರಿಕರು ವಿಶ್ರಮಿಸಲು ಸಿಮೆಂಟ್ ಬೆಂಚ್ ಗಳು ಇರಲಿವೆ ಎಂದು ತಮಿಳುನಾಡು ಸಿಎಂ ಹೇಳಿದ್ದಾರೆ.
ರಾಜ್ಯಾದ್ಯಂತ ಹಳ್ಳಿಗಳಲ್ಲಿ ಒಟ್ಟು 500 ಜಿಮ್ ಗಳನ್ನು ಆರಂಭಿಸಲಾಗುತ್ತಿದ್ದು, ಇದಕ್ಕಾಗಿ 50 ಕೋಟಿ ರುಪಾಯಿ ವೆಚ್ಚ ಮಾಡಲಾಗುತ್ತಿದೆ. ಪ್ರತಿ ಜಿಮ್ ಗೆ 10 ಲಕ್ಷ ರುಪಾಯಿ ನೀಡಲಾಗುವುದು ಎಂದು ಜಯಾ ತಿಳಿಸಿದ್ದಾರೆ.