ತಮಿಳುನಾಡಿನಲ್ಲಿ ಹಸುಗೂಸುಗಳಿಗೆ 9 ತಿಂಗಳು 'ಅಮ್ಮ' ಭಾಗ್ಯ

ತಮಿಳುನಾಡು ಸರ್ಕಾರ ರಾಜ್ಯ ಸರ್ಕಾರಿ ನೌಕರರ ಹೆರಿಗೆ ರಜೆಯನ್ನು 6 ತಿಂಗಳಿಂದ 9 ತಿಂಗಳಿಗೆ ವಿಸ್ತರಿಸುವ ಮೂಲಕ ಎಐಎಡಿಎಂಕೆ...
ಜಯಲಲಿತಾ
ಜಯಲಲಿತಾ
ಚೆನ್ನೈ: ತಮಿಳುನಾಡು ಸರ್ಕಾರ ರಾಜ್ಯ ಸರ್ಕಾರಿ ನೌಕರರ ಹೆರಿಗೆ ರಜೆಯನ್ನು 6 ತಿಂಗಳಿಂದ 9 ತಿಂಗಳಿಗೆ ವಿಸ್ತರಿಸುವ ಮೂಲಕ ಎಐಎಡಿಎಂಕೆ ಸರ್ಕಾರ ಮತ್ತೊಂದು ಚುನಾವಣಾ ಭರವಸೆಯನ್ನು ಈಡೇರಿಸಿದೆ.
2011ರಲ್ಲಿ ನಮ್ಮ ಸರ್ಕಾರ ಹೆರಿಗೆ ರಜೆಯನ್ನು 90 ದಿನಗಳಿಂದ ಆರು ತಿಂಗಳಿಗೆ ವಿಸ್ತರಿಸಿತ್ತು. ಈಗ ಆ ರಜೆಯನ್ನು 6 ತಿಂಗಳಿಂದ 9 ತಿಂಗಳಿಗೆ ವಿಸ್ತರಿಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಜೆ.ಜಯಲಲಿತಾ ಅವರು ಇಂದು ವಿಧಾಸಭೆಗೆ ತಿಳಿಸಿದ್ದಾರೆ.
ಇದೇ ವೇಳೆ ರಾಜ್ಯಾದಂತ ಇರುವ ಸರ್ಕಾರಿ ಆಸ್ಪತ್ರೆಗಳಲ್ಲಿ ಕೋಟ್ಯಂತರ ರುಪಾಯಿ ವೆಚ್ಚದ ಯೋಜನೆ ಕೈಗೊಳ್ಳುವುದಾಗಿ ಜಯಲಲಿತಾ ಅವರು ಘೋಷಿಸಿದ್ದಾರೆ.
ಕಳೆದ ತಿಂಗಳು ರಾಜ್ಯಸಭೆಯಲ್ಲಿ ದುಡಿಯುವ ಎಲ್ಲಾ ಮಹಿಳೆಯರಿಗೂ 6 ತಿಂಗಳು ಹೆರಿಗೆ ರಜೆ ನೀಡುವ ತಿದ್ದುಪಡಿ ವಿಧೇಯಕವನ್ನು ಅಂಗೀಕರಿಸಲಾಗಿದ್ದು, ಲೋಕಸಭೆಯ ಅಂಗೀಕಾರ ಪಡೆಯಬೇಕಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com