ಭಾರತ ನೋಡಿ ಕಲಿಯಿರಿ: ಹೇಗ್ ತೀರ್ಪಿನ ಕುರಿತು ಚೀನಾ ಕಿವಿ ಹಿಂಡಿದ ಜಾನ್ ಕೆರ್ರಿ

ವಿವಾದಿತ ದಕ್ಷಿಣ ಚಿನಾ ಸಮುದ್ರದಲ್ಲಿ ಪದೇ ಪದೇ ಅಂತಾರಾಷ್ಟ್ರೀಯ ನ್ಯಾಯಮಂಡಳಿಯ ತೀರ್ಪು ಉಲ್ಲಂಘಿಸುತ್ತಿರುವ ಚೀನಾ ದೇಶ ಭಾರತವನ್ನು ನೋಡಿ ಕಲಿಯಬೇಕಿದೆ ಎಂದು ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಜಾನ್ ಕೆರ್ರಿ ಹೇಳಿದ್ದಾರೆ.
ಅಮೆರಿಕ ವಿದೇಶಾಂಗ ಸಚಿವ ಜಾನ್ ಕೆರ್ರಿ (ಸಂಗ್ರಹ ಚಿತ್ರ)
ಅಮೆರಿಕ ವಿದೇಶಾಂಗ ಸಚಿವ ಜಾನ್ ಕೆರ್ರಿ (ಸಂಗ್ರಹ ಚಿತ್ರ)

ನವದೆಹಲಿ: ವಿವಾದಿತ ದಕ್ಷಿಣ ಚಿನಾ ಸಮುದ್ರದಲ್ಲಿ ಪದೇ ಪದೇ ಅಂತಾರಾಷ್ಟ್ರೀಯ ನ್ಯಾಯಮಂಡಳಿಯ ತೀರ್ಪು ಉಲ್ಲಂಘಿಸುತ್ತಿರುವ ಚೀನಾ ದೇಶ ಭಾರತವನ್ನು ನೋಡಿ ಕಲಿಯಬೇಕಿದೆ  ಎಂದು ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಜಾನ್ ಕೆರ್ರಿ ಹೇಳಿದ್ದಾರೆ.

ಎರಡು ದಿನಗಳ ಪ್ರವಾಸಕ್ಕಾಗಿ ಭಾರತಕ್ಕೆ ಆಗಮಿಸಿರುವ ಅಮೆರಿಕ ವಿದೇಶಾಂಗ ಸಚಿವ ಜಾನ್ ಕೆರ್ರಿ ಬುಧವಾರ ದೆಹಲಿಯಲ್ಲಿ ಮಾತನಾಡುತ್ತ ಹೇಗ್ ಅಂತಾರಾಷ್ಟ್ರೀಯ ತೀರ್ಪನ್ನು ಉದ್ದೇಶಿಸಿ  ಮಾತನಾಡಿದರು. ಈ ವೇಳೆ ಚೀನಾ ದೇಶ ಅಂತಾರಾಷ್ಟ್ರೀಯ ನ್ಯಾಯಾಲಯದ ತೀರ್ಪನ್ನು ಉಲ್ಲಂಘಿಸುತ್ತಿರುವ ಮಾತನಾಡಿದ ಕೆರ್ರಿ, "ದಕ್ಷಿಣ ಚೀನಾ ಸಮುದ್ರದ ವಿವಾದಕ್ಕೆ ಹೋಲಿಕೆಯಿರುವ  ಬಾಂಗ್ಲಾದೇಶ ಹಾಗೂ ಭಾರತ ಸಮುದ್ರ ಗಡಿ ವಿವಾದಕ್ಕೆ ಸಂಬಂಧಿಸಿ 2014ರಲ್ಲಿ ಅಂತಾರಾಷ್ಟ್ರೀಯ ನ್ಯಾಯಮಂಡಳಿ ಭಾರತ ವಿರುದ್ಧ ತೀರ್ಪು ನೀಡಿತ್ತು. ಇದಕ್ಕೆ ಭಾರತ ಬದ್ಧವಾಗುವ ಮೂಲಕ  ಗಡಿ ವಿವಾದವನ್ನು ಬಗೆಹರಿಸಿದೆ ಎಂದು ಹೇಳಿದರು.

ಅಂತೆಯೇ "ದಕ್ಷಿಣ ಚೀನಾ ಸಮುದ್ರದ ಮೇಲೆ ಚೀನಾ ದೇಶಕ್ಕೂ ಕೂಡ ಯಾವುದೇ ಐತಿಹಾಸಿಕ ಹಕ್ಕಿಲ್ಲ ಎಂದು ಹೇಗ್ ಅಂತಾರಾಷ್ಟ್ರೀಯ ನ್ಯಾಯಾಲಯ ತೀರ್ಪು ನೀಡಿದ್ದು, ಆದರೂ ಚೀನಾ  ದೇಶ ತೀರ್ಪನ್ನು ಉಲ್ಲಂಘಿಸಿ ವಿವಾದಿತ ಸಮುದ್ರ ಪ್ರದೇಶದಲ್ಲಿ ಚಟುವಟಿಕೆ ಮುಂದುವರಿಸಿದೆ ಎಂದು ಕೆರ್ರಿ ಕಿಡಿಕಾರಿದ್ದಾರೆ.

ಉಗ್ರರ ಸ್ವರ್ಗ ಪಾಕಿಸ್ತಾನದ ಕಿವಿ ಹಿಂಡಿದ ಅಮೆರಿಕ

ಇನ್ನು ಇದೇ ವೇಳೆ ಜಾಗತಿಕ ಭಯೋತ್ಪಾದನೆ ಕುರಿತು ಮಾತನಾಡಿದ ಜಾನ್ ಕೆರ್ರಿ, ಉಗ್ರರ ಸ್ವರ್ಗವಾಗಿರುವ ತಾಣಗಳನ್ನು ನಿರ್ಮೂಲನೆಗೊಳಿಸಲು ಅಮೆರಿಕದ ಪ್ರಯತ್ನ  ಮುಂದುವರಿಸಲಾಗುವುದು. ಅಲ್‌ಖೈದಾ, ಲಷ್ಕರ್ ಎ ತೊಯ್ಬಾ, ಜೈಶ್ ಎ ಮೊಹಮ್ಮದ್ ಹಾಗೂ ದಾವೂದ್ ಇಬ್ರಾಹಿಂ ಗ್ಯಾಂಗ್‌ಗಳ ಚಟುವಟಿಕೆಗಳನ್ನು ನಿಯಂತ್ರಿಸಲು ಉಭಯ ದೇಶಗಳು  ಪ್ರಯತ್ನಿಸಲಿವೆ ಎಂದು ಅವರು ಹೇಳಿದರು.

ಅಂತೆಯೇ ಮುಂಬೈ ಹಾಗೂ ಪಠಾಣ್‌ಕೋಟ್ ದಾಳಿಕೋರರ ವಿರುದ್ಧ ಪಾಕಿಸ್ತಾನ ಕ್ರಮ ಕೈಗೊಳ್ಳಬೇಕು ಎಂದು ಹೇಳಿದ ಕೆರ್ರಿ,  ಗಡಿಯಲ್ಲಿ ಭಯೋತ್ಪಾದನೆಗೆ ಪ್ರೋತ್ಸಾಹಿಸುತ್ತಿರುವ ಉಗ್ರರನ್ನು  ನಿಯಂತ್ರಿಸಬೇಕು ಎಂದು ಪಾಕಿಸ್ತಾನಕ್ಕೆ ತಾಕೀತು ಮಾಡಲಾಗಿದೆ. ಈ ನಿಟ್ಟಿನಲ್ಲಿ ಭಾರತದ ಬೆಂಬಲಕ್ಕೆ ತಾವು ಸದಾ ನಿಲ್ಲುವುದಾಗಿ ಜಾನ್ ಕೆರ್ರಿ ಹೇಳಿದರೆ.

"ತನ್ನ ನೆಲದಲ್ಲಿ ಉಗ್ರರನ್ನು ಸದೆಬಡಿಯಲು ಪಾಕಿಸ್ತಾನ ಇನ್ನಷ್ಟು ಕ್ರಮಕೈಗೊಳ್ಳಬೇಕಿದೆ. ಇದೇ ವೇಳೆ ಪಾಕಿಸ್ತಾನವೂ ಉಗ್ರವಾದದಿಂದ ತೊಂದರೆ ಅನುಭವಿಸಿದ್ದು, 50 ಸಾವಿರ ಜನರನ್ನು  ಕಳೆದುಕೊಂಡಿದೆ. ನಾವು ಪಾಕಿಸ್ತಾನದ ಜತೆಗೆ ಈ ಸಂಬಂಧ ಮಾತುಕತೆ ನಡೆಸುತ್ತಿದ್ದೇವೆ. ಪಾಕಿಸ್ತಾನದ ಪಶ್ಚಿಮ ಭಾಗದಲ್ಲಿನ ಉಗ್ರರು ಭಾರತ ಮತ್ತು ಪಾಕಿಸ್ತಾನದ ಸಂಬಂಧವನ್ನು ಹಾಳು  ಮಾಡುತ್ತಿರುವುದರ ಜತೆಗೆ ಆಫ್ಘಾನಿಸ್ತಾನದಲ್ಲಿ ಶಾಂತಿಯನ್ನೂ ಹಾಳುಗೆಡವುತ್ತಿದ್ದಾರೆ ಎಂದು ಕೆರ್ರಿ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com