ನಗದು ಹಿಂಪಡೆಯುವುದಕ್ಕೆ ನಿರ್ಬಂಧ; ಆದೇಶ ಹಿಂಪಡೆಯಲು ಸಲ್ಲಿಸಿದ್ದ ಅರ್ಜಿ ಹೈಕೋರ್ಟ್ ನಲ್ಲಿ ವಜಾ

ಕೇಂದ್ರ ಸರ್ಕಾರ ನೋಟು ಹಿಂಪಡೆತ ನಿರ್ಧಾರದ ಭಾಗವಾಗಿ ಬ್ಯಾಂಕ್ ಗಳಿಂದ ನಗದು ಹಿಂಪಡೆಯುವುದಕ್ಕೆ ಹಾಕಿರುವ ನಿರ್ಭಂಧವನ್ನು ತೆಗೆದುಹಾಕುವುದಕ್ಕಾಗಿ ಸಲ್ಲಿಸಿದ್ದ ಆರ್ಜಿಯನ್ನು ದೆಹಲಿ ಹೈಕೋರ್ಟ್ ವಜಾ
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನವದೆಹಲಿ: ಕೇಂದ್ರ ಸರ್ಕಾರ ನೋಟು ಹಿಂಪಡೆತ ನಿರ್ಧಾರದ ಭಾಗವಾಗಿ ಬ್ಯಾಂಕ್ ಗಳಿಂದ ನಗದು ಹಿಂಪಡೆಯುವುದಕ್ಕೆ ಹಾಕಿರುವ ನಿರ್ಭಂಧವನ್ನು ತೆಗೆದುಹಾಕುವುದಕ್ಕಾಗಿ ಸಲ್ಲಿಸಿದ್ದ ಆರ್ಜಿಯನ್ನು ದೆಹಲಿ ಹೈಕೋರ್ಟ್ ವಜಾ ಮಾಡಿದೆ. 
"ಅರ್ಜಿ ವಜಾ ಮಾಡಲಾಗಿದೆ" ಎಂದು ಮುಖ್ಯ ನ್ಯಾಯಾಧೀಶೆ ಜಿ ರೋಹಿಣಿ ಮತ್ತು ನ್ಯಾಯಾಧೀಶ ವಿ ಕಾಮೇಶ್ವರ್ ರಾವ್ ಅವರನ್ನು ಒಳಗೊಂಡ ನ್ಯಾಯಪೀಠ ತಿಳಿಸಿದೆ. ನವೆಂಬರ್ ೨೫ ರಂದು, ಹಣ ಹಿಂಪಡೆಯುವ ನಿರ್ಬಂಧವನ್ನು ತೆಗೆದುಹಾಕಲು ಕೋರಿ ಉದ್ದಿಮೆದಾರ ಸಲ್ಲಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾ ಮಾಡಿತ್ತು. ಆದರೆ ಈ ಆದೇಶವನ್ನು ಹಿಂಪಡೆಯಲು ಸಲ್ಲಿಸಿದ್ದ ಮತ್ತೊಂದು ಅರ್ಜಿಯನ್ನು ವಿಚಾರಣೆ ಮಾಡಿದ್ದ ಕೋರ್ಟ್ ನವೆಂಬರ್ ೩೦ ರಂದು ತೀರ್ಪನ್ನು ಈ ದಿನಕ್ಕೆ ಕಾಯ್ದಿರಿಸಿತ್ತು. 
೨೪೦೦೦ ರು ಮಾತ್ರ ಹಿಂಪಡೆಯಬಹುದು ಎಂಬ ನಿರ್ಭಂಧ ಇರುವುದು ನವೆಂಬರ್ ೨೪ ರವರೆಗೆ ಮಾತ್ರ ಎಂದು ಕೇಂದ್ರ ಸರ್ಕಾರ ತಪ್ಪು ಮಾಹಿತಿಯನ್ನು ಕೋರ್ಟ್ ಗೆ ನೀಡಿದೆ ಬದಲಾಗಿ ಈ ನಿರ್ಬಂಧವನ್ನು ಡಿಸೆಂಬರ್ ೩೦ ರವರೆಗೆ ಸರ್ಕಾರ ವಿಸ್ತರಿಸಿದೆ ಎಂದು ಅರ್ಜಿದಾರ ಆರೋಪಿಸಿದ್ದರು. 
ಅಶೋಕ್ ಶರ್ಮಾ ಅವರ ಅರ್ಜಿಯನ್ನು ಆಲಿಸಿದ್ದ ಕೋರ್ಟ್, ಅಂತಹ ನಿರ್ಬಂಧ ಏನು ಇಲ್ಲ, ಏಕೆಂದರೆ ಚೆಕ್, ಡಿಡಿ ಮತ್ತು ಅಂತರ್ಜಾಲ ಬ್ಯಾಂಕಿಂಗ್ ಮೂಲಕ ಹಣವನ್ನು ಕಳುಹಿಸುವುದು-ಪಡೆಯುವುದು ಸಾಧ್ಯವಿದೆ ಎಂದು ಪೀಠ ತಿಳಿಸಿತ್ತು. ನಮ್ಮ ಕಾಯ್ದೆಯನ್ನು ಪರಿಣಾಮಕಾರಿಗೊಳಿಸಲು ಮಾತ್ರ ಈ ನಿರ್ಬಂಧ ಹೇರಲಾಗಿದೆ ಎಂದು ಕೇಂದ್ರ ಸರ್ಕಾರ ವಾದಿಸಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com