ಚಂಡಮಾರುತದ ಅಬ್ಬರ; ಅಂಡಮಾನ್ ನ 10 ಹಳ್ಳಿಗಳ ಸಂಪರ್ಕ ಕಡಿತ

ಅಂಡಮಾನ್ ಮತ್ತು ನಿಕೋಬಾರ್ ದ್ವೀಪ ಸಮೂಹದಲ್ಲಿ ಉಂಟಾಗಿರುವ ಚಂಡಮಾರುತದಿಂದಾಗಿ ಹ್ಯಾವ್ಲಾಕ್ ಮತ್ತು ನೀಲ್ ದ್ವೀಪದ ಸುಮಾರು 10ಕ್ಕೂ ಹೆಚ್ಚು ಹಳ್ಳಿಗಳು ಹೊರಗಿನ ಸಂಪರ್ಕವನ್ನೇ ಕಡಿದುಕೊಂಡಿದ್ದು, ಹಳ್ಳಿಗಳಿಗೆ ಪ್ರತಿನಿತ್ಯ ರವಾನೆಯಾಗುತ್ತಿದ್ದ ಅಗತ್ಯ ವಸ್ತುಗಳ ಪೂರೈಕೆ ಕೂಡ ಸ್ಥಗಿತಗೊಂಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಪೋರ್ಟ್ ಬ್ಲೇರ್: ಅಂಡಮಾನ್ ಮತ್ತು ನಿಕೋಬಾರ್ ದ್ವೀಪ ಸಮೂಹದಲ್ಲಿ ಉಂಟಾಗಿರುವ ಚಂಡಮಾರುತದಿಂದಾಗಿ ಹ್ಯಾವ್ಲಾಕ್ ಮತ್ತು ನೀಲ್ ದ್ವೀಪದ ಸುಮಾರು 10ಕ್ಕೂ ಹೆಚ್ಚು ಹಳ್ಳಿಗಳು ಹೊರಗಿನ ಸಂಪರ್ಕವನ್ನೇ  ಕಡಿದುಕೊಂಡಿದ್ದು, ಹಳ್ಳಿಗಳಿಗೆ ಪ್ರತಿನಿತ್ಯ ರವಾನೆಯಾಗುತ್ತಿದ್ದ ಅಗತ್ಯ ವಸ್ತುಗಳ ಪೂರೈಕೆ ಕೂಡ ಸ್ಥಗಿತಗೊಂಡಿದೆ.

ಸೋಮವಾರದಿಂದಲೇ ಈ ದ್ವೀಪ ಸಮೂಹಕ್ಕೆ ತೆರಳುತ್ತಿದ್ದ ನೌಕೆಗಳು ಸ್ಥಗಿತವಾಗಿದ್ದು, ಇಲ್ಲಿನ ಗ್ರಾಮಸ್ಥರು ಪರದಾಡುವಂತಾಗಿದೆ. ಅಂಡಮಾನ್ ಆಡಳಿತ ಮಂಡಳಿ ತಿಳಿಸಿರುವಂತೆ ಭಾರಿ ಮಳೆ ಹಾಗೂ ಚಂಡಮಾರುತದಿಂದಾಗಿ  ಇಲ್ಲಿನ ವಿದ್ಯುತ್ ಸಂಪರ್ಕ ಕಡಿತವಾಗಿದ್ದು, ಮರಗಳು ಬುಡ ಮೇಲಾಗಿವೆ. ತಗ್ಗು ಪ್ರದೇಶಗಳಲ್ಲಿರುವ ಪ್ರದೇಶಗಳು ಜಲಾವೃತ್ತಗೊಂಡಿದೆ ಎಂದು ತಿಳಿಸಿದ್ದಾರೆ. ಅಂತೆಯೇ ಅಂಡಮಾನ್ ನಲ್ಲಿ ಮೊಬೈಲ್ ಸೇವೆ ಮತ್ತು ಇಂಟರ್ ನೆಟ್  ಸೇವೆಗಳು ಕೂಡ ಸ್ಥಗಿತಗೊಂಡಿದ್ದು, ಹೊರ ಪ್ರಪಂಚದ ಸಂಪರ್ಕವೇ ಇಲ್ಲದೇ ಇಲ್ಲಿನ ಜನ ಕಂಗಾಲಾಗಿದ್ದಾರೆ.

ಸ್ಥಳೀಯ ಜಿಲ್ಲಾಡಳಿತ ಅಂಡಮಾನ್ ನಲ್ಲಿ ಎಲ್ 1 ಡಿಸಾಸ್ಟರ್ ಘೋಷಣೆ ಮಾಡಿದ್ದು, ನೆರವಿಗಾಗಿ ಕೇಂದ್ರ ಸರ್ಕಾರ ಹಾಗೂ ಭಾರತೀಯ ಸೇನೆಯನ್ನು ಸಂಪರ್ಕಿಸಿದೆ. ಈ ಹಿನ್ನಲೆಯಲ್ಲಿ ಇಂದು ಪೋರ್ಟ್ ಬ್ಲೇರ್ ನಿಂದ ಹ್ಯಾವ್ಲಾಕ್  ಮತ್ತು ನೀಲ್ ದ್ವೀಪಗಳತ್ತ ಪ್ರಯಾಣಿಸುವ ನೌಕಾಪಡೆಯ ನಾಲ್ಕು ನೌಕೆಗಳಲ್ಲಿ ಅಗತ್ಯ ವಸ್ತುಗಳು, ಔಷಧಿಗಳು ಹಾಗೂ ನುರಿತ ವೈದ್ಯರನ್ನು ರವಾನಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com