ಕೊನೆಗೂ ರಾಸಲೀಲೆ ಸಿಡಿ ಬಿಡುಗಡೆ, ಸಚಿವ ಸ್ಥಾನಕ್ಕೆ ಎಚ್.ವೈ. ಮೇಟಿ ರಾಜಿನಾಮೆ

ಕೊನೆಗೂ ಅಬಕಾರಿ ಸಚಿವ ಎಚ್.ವೈ.ಮೇಟಿ ಅವರು ನಡೆಸಿದ ರಾಸಲೀಲೆ ಸಿಡಿ ಬುಧವಾರ ಮಾಧ್ಯಮಗಳಲ್ಲಿ ಬಿಡುಗಡೆಯಾಗಿದ್ದು, ಸಚಿವ ಸ್ಥಾನಕ್ಕೆ ರಾಜಿನಾಮೆ...
ಎಚ್.ವೈ.ಮೇಟಿ
ಎಚ್.ವೈ.ಮೇಟಿ
ಬೆಂಗಳೂರು: ಕೊನೆಗೂ ಅಬಕಾರಿ ಸಚಿವ ಎಚ್.ವೈ.ಮೇಟಿ ಅವರು ನಡೆಸಿದ ರಾಸಲೀಲೆ ಸಿಡಿ ಬುಧವಾರ ಮಾಧ್ಯಮಗಳಲ್ಲಿ ಬಿಡುಗಡೆಯಾಗಿದ್ದು, ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ.
ಈ ಹಿಂದೆ ತಮ್ಮ ವಿರುದ್ಧದ ರಾಸಲೀಲೆ ಸಿಡಿ ಬಿಡುಗಡೆಯಾದರೆ, ತಾನು ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡುವುದಾಗಿ ಮೇಟಿ ಹೇಳಿದ್ದರು. ಅದರಂತೆ ಈಗ ಸಿಡಿ ಬಿಡುಗಡೆಯಾಗುತ್ತಿದ್ದಂತೆ ಮೇಟಿ ಅವರು ರಾಜಿನಾಮೆ ಪತ್ರದೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಿವಾಸಕ್ಕೆ ತೆರಳಿ, ಚರ್ಚೆ ನಡೆಸಿದ್ದಾರೆ. ಈ ವೇಳೆ ಸಿಎಂ ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡುವಂತೆ ಮೇಟಿ ಅವರಿಗೆ ಸೂಚಿಸಿದ್ದು, ಸಿಎಂ ಸೂಚನೆಯಂತೆ ರಾಜಿನಾಮೆ ನೀಡಿದ್ದಾರೆ. 
ಬಳಿಕ ಸಿಎಂ ಸಚಿವರ ರಾಜಿನಾಮೆ ಪತ್ರವನ್ನು ರಾಜಭವನಕ್ಕೆ ರವಾನಿಸಿದ್ದು, ರಾಜ್ಯಪಾಲ ವಜುಭಾಯಿ ವಾಲಾ ಅವರು ರಾಜಿನಾಮೆಯನ್ನು ಅಂಗೀಕರಿಸಿದ್ದಾರೆ.
ರಾಸಲೀಲೆ ಸಿಡಿಯೇ ಇಲ್ಲ ಎಂದು ಮೇಟಿ ಸಾರಸಗಟಾಗಿ ಅಲ್ಲಗಳೆದಿದ್ದರು. ಆ ನಿಟ್ಟಿನಲ್ಲಿ ಈಗ ರಾಸಲೀಲೆ ಸಿಡಿ ಇರೋದು ಸತ್ಯವಾಗಿದೆ. ಸಚಿವರ ರಾಸಲೀಲೆಯದ್ದು ಎನ್ನಲಾದ ಸಿಡಿ 3 ನಿಮಿಷ 23ಸೆಕೆಂಡ್ ಇದೆ. ಆರ್ ಟಿಐ ಕಾರ್ಯಕರ್ತ ರಾಜಶೇಖರ್ ಅವರು ನವದೆಹಲಿಯಲ್ಲಿ ಸಿಡಿಯನ್ನು ಬಿಡುಗಡೆ ಮಾಡಿರುವುದಾಗಿ ಮಾಧ್ಯಮಗಳು ವರದಿ ಮಾಡುತ್ತಿವೆ.
ಸರ್ಕಾರಿ ಕಚೇರಿಯಲ್ಲಿ ಮಹಿಳೆಯೊಂದಿಗೆ ಲೈಂಗಿಕ ಸಂಪರ್ಕದಲ್ಲಿ ತೊಡಗಿರುವ ದೃಶ್ಯ ಸಿಡಿಯಲ್ಲಿ ದಾಖಲಾಗಿದೆ. ಸಿಡಿಯಲ್ಲಿ ಎಚ್.ವೈ.ಮೇಟಿ ಮತ್ತು ಮಹಿಳೆ ಸಂಭಾಷಣೆ ಅಸ್ಪಷ್ಟವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com