ನಜೀಬ್ ಜಂಗ್-ಅರವಿಂದ್ ಕೇಜ್ರಿವಾಲ್
ಪ್ರಧಾನ ಸುದ್ದಿ
ಜಂಗ್ ರಾಜೀನಾಮೆ; ಅಚ್ಚರಿ ವ್ಯಕ್ತಪಡಿಸಿದ ಕೇಜ್ರಿವಾಲ್
ದೆಹಲಿಯ ಲೆಫ್ಟಿನೆಂಟ್ ಗವರ್ನರ್ ನಜೀಬ್ ಜಂಗ್ ಅವರ ದಿಢೀರ್ ರಾಜಿನಾಮೆಗೆ ದೆಹಲಿ ಮುಖ್ಯಮಂತ್ರಿ ಅರವಿಂಗ್ ಕೇಜ್ರಿವಾಲ್ ಗುರುವಾರ ಅಚ್ಚರಿ ವ್ಯಕ್ತಪಡಿಸಿದ್ದಾರೆ.
ನವದೆಹಲಿ: ದೆಹಲಿಯ ಲೆಫ್ಟಿನೆಂಟ್ ಗವರ್ನರ್ ನಜೀಬ್ ಜಂಗ್ ಅವರ ದಿಢೀರ್ ರಾಜಿನಾಮೆಗೆ ದೆಹಲಿ ಮುಖ್ಯಮಂತ್ರಿ ಅರವಿಂಗ್ ಕೇಜ್ರಿವಾಲ್ ಗುರುವಾರ ಅಚ್ಚರಿ ವ್ಯಕ್ತಪಡಿಸಿದ್ದಾರೆ.
"ಜಂಗ್ ರಾಜೀನಾಮೆ ನನಗೆ ಅಚ್ಚರಿ ತಂದಿದೆ" ಎಂದು ಜಂಗ್ ಅಧಿಕಾರಕ್ಕೆ ರಾಜೀನಾಮೆ ನೀಡಿದ ನಂತರ ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ.
ದೆಹಲಿಯಲ್ಲಿ ಅಧಿಕಾರ ಸ್ವೀಕರಿಸಿದಾಗಿಲಿಂದಲೂ ಕೇಜ್ರಿವಾಲ್ ಅವರು ಹಲವು ವಿಷಯಗಳಲ್ಲಿ ಜಂಗ್ ಜೊತೆಗೆ ಜಟಾಪಟಿ ನಡೆಸಿದ್ದರು. ಈಗ ಲೆಫ್ಟಿನೆಂಟ್ ಗವರ್ನರ್ ಭವಿಷ್ಯಕ್ಕೆ ಒಳಿತಾಗಲಿ ಎಂದು ಹರಸಿದ್ದಾರೆ.
"ಅವರ ಮುಂದಿನ ಯೋಜನೆಗಳಿಗೆ ನನ್ನ ಶುಭ ಹಾರೈಕೆಗಳು" ಎಂದು ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ.


