ಯಾವುದೇ ಗಿಮಿಕ್ಕಿಲ್ಲ, ಆದರೂ 2 ದಿನದಲ್ಲಿ 1.33 ಲಕ್ಷ ಕೋಟಿ ಹೂಡಿಕೆ

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಮೊದಲ ಬಂಡವಾಳ ಹೂಡಿಕೆ ಸಮಾವೇಶ ಯಶಸ್ವಿಯಾಗಿದೆ. ಇನ್ವೆಸ್ಟ್ ಕರ್ನಾಟಕ ಕೋಟಿಗಟ್ಟಲೇ...
ಇನ್ವೆಸ್ಟ್ ಕರ್ನಾಟಕ ಸಮಾವೇಶದಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ರೇಲ್ವೆ ಸಚಿವ ಸುರೇಶ್ ಪ್ರಭು
ಇನ್ವೆಸ್ಟ್ ಕರ್ನಾಟಕ ಸಮಾವೇಶದಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ರೇಲ್ವೆ ಸಚಿವ ಸುರೇಶ್ ಪ್ರಭು
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಮೊದಲ ಬಂಡವಾಳ ಹೂಡಿಕೆ ಸಮಾವೇಶ ಯಶಸ್ವಿಯಾಗಿದೆ. ಇನ್ವೆಸ್ಟ್ ಕರ್ನಾಟಕ ಕೋಟಿಗಟ್ಟಲೇ ಬಂಡವಾಳ ಹೂಡಿಕೆ ಮಾಡುವ ಮೂಲಕ ಲಕ್ಷಾಂತರ ಉದ್ಯೋಗ ಸೃಷ್ಟಿಯ ಭರವಸೆ ನೀಡಿದೆ. 
ನಗರದ ಅರಮನೆ ಮೈದಾನದಲ್ಲಿ ನಡೆಯುತ್ತಿರುವ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ 2015ರ ಏಪ್ರಿಲ್ ನಿಂದ ಇದುವರೆಗಿನ ಹೂಡಿಕೆಯೂ ಸೇರಿ ಒಟ್ಟು 3.08 ಲಕ್ಷ ಕೋಟಿ ಬಂಡವಾಳ ಹರಿದು ಬಂದಿದೆ. 
ಕಳೆದ ಎರಡು ದಿನಗಳಲ್ಲಿ 1.33 ಲಕ್ಷ ಕೋಟಿ ಹೂಡಿಕೆಯಾಗಿದ್ದು, ಇಂಧನ ವಲಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಬಂಡವಾಳ ಹರಿದು ಬಂದಿದೆ. ಸ್ಟೀಲ್, ಕೆಮಿಕಲ್ಸ್, ಕೃಷಿ ಸಂಬಂಧಿ ಉದ್ದಿಮೆ, ಕೈಗಾರಿಕೆಗಳ ಜೊತೆಗೆ ಮೂಲಭೂತ ಸವಲತ್ತು, ಪ್ರವಾಸೋದ್ಯಮ, ತೈಲ, ಅನಿಲ, ವೈಮಾನಿಕ ವಲಯಗಳಲ್ಲೂ ಬಂಡವಾಳ ಹರಿದು ಬಂದಿದ್ದು, ಒಟ್ಟು 6.7 ಲಕ್ಷ ಉದ್ಯೋಗ ಸೃಷ್ಟಿಸುವ ಅಂದಾಜು ಮಾಡಲಾಗಿದೆ.
ದೇಶದಲ್ಲಿ ಕರ್ನಾಟಕವನ್ನು ಅತ್ಯಂತ ಹೂಡಿಕೆ ಸ್ನೇಹಿ ಮಾತ್ರವಲ್ಲ. ಅಭಿವೃದ್ಧಿ ದರದಲ್ಲಿ(ಜಿಡಿಪಿ) ದೇಶದಲ್ಲಿ ನಂಬರ್ ಒನ್ ಸ್ಥಾನಕ್ಕೆ ಏರಿಸುವ ಗುರಿಯೊಂದಿಗೆ ಮುನ್ನುಗ್ಗುತ್ತಿರುವ ರಾಜ್ಯ ಸರ್ಕಾರ ಇದೇ ಮೊದಲ ಬಾರಿಗೆ ಇಷ್ಟು ಪ್ರಮಾಣದ ಬಂಡವಾಳ ಹರಿಸುವಲ್ಲಿ ಯಶಸ್ವಿಯಾಗಿದೆ.
ಕೇವಲ ಬೆಂಗಳೂರು ನಗರ ಮಾತ್ರವಲ್ಲದೇ ಜಿಲ್ಲೆಗಳತ್ತಲೂ ಬಂಡವಾಳ ಹರಿದು ಬಂದಿದ್ದು, ಬೆಂಗಳೂರು ನಗರ ಹೊರತಾಗಿ ಬಳ್ಳಾರಿ, ದಕ್ಷಿಣ ಕನ್ನಡ, ತುಮಕೂರು, ಶಿವಮೊಗ್ಗ, ಬೆಂಗಳೂರು ಗ್ರಾಮಾಂತರ, ಕೋಲಾರ ಜಿಲ್ಲೆಗಳಲ್ಲೂ ಉದ್ದಿಮೆಗಳು ಸ್ಥಾಪನೆಯಾಗುವತ್ತ ದಾಪುಗಾಲು ಹಾಕುವಲ್ಲಿ ಇನ್ವೆಸ್ಟ್ ಕರ್ನಾಟಕ ನೆರವಾಗಿದೆ.
ಇಂಧನ ವಲಯಕ್ಕೆ ಅತಿ ಹೆಚ್ಚು: ಇಂಧನ ವಲಯ ಅದರಲ್ಲೂ ಮುಖ್ಯವಾಗಿ ಪರ್ಯಾಯ ಇಂಧನ ಮೂಲಗಳಾದ ಪವನ ಶಕ್ತಿ, ಸೌರಶಕ್ತಿ ವಲಯಗಳಲ್ಲಿ ಈ ದಾಖಲೆ ಹೂಡಿಕೆಯಾಗಿದ್ದು ಒಂದು ಲಕ್ಷ ಕೋಟಿ ಮೊತ್ತದ ಯೋಜನೆಗಳಿಗೆ ಬಂಡವಾಳ ಹರಿದು ಬಂದಿದೆ. 24 ಸಾವಿರ ಕೋಟಿ ಹೂಡಿಕೆಯಾಗಿರುವ ಕೆಮಿಕಲ್ ವಲಯ ಎರಡನೇ ಸ್ಥಾನದಲ್ಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com