ಹೈದರಾಬಾದ್ ಐ ಟಿ ಕಾರಿಡಾರ್ ನಿಂದ ಟೆಕ್ಕಿ ಕಾಣೆ

ಹೈದರಾಬಾದ್ ನ ಬಹುರಾಷ್ಟ್ರೀಯ ಸಂಸ್ಥೆಯೊಂದರಲ್ಲಿ ನೌಕರಿ ಮಾಡುವ ೨೨ ವರ್ಷದ ಮಹಿಳಾ ಸಾಫ್ಟ್ವೇರ್ ಎಂಜಿನಿಯರ್ ಒಬ್ಬರು ಸೋಮವಾರ ಸಂಜೆಯಿಂದ ಕಾಣೆಯಾಗಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಹೈದರಾಬಾದ್: ಹೈದರಾಬಾದ್ ನ ಬಹುರಾಷ್ಟ್ರೀಯ ಸಂಸ್ಥೆಯೊಂದರಲ್ಲಿ ನೌಕರಿ ಮಾಡುವ ೨೨ ವರ್ಷದ ಮಹಿಳಾ ಸಾಫ್ಟ್ವೇರ್ ಎಂಜಿನಿಯರ್ ಒಬ್ಬರು ಸೋಮವಾರ ಸಂಜೆಯಿಂದ ಕಾಣೆಯಾಗಿದ್ದಾರೆ. ಅವರ ತಂದೆ ನೀಡಿರುವ ದೂರಿನ ಮೇರೆಗೆ ಮಂಗಳವಾರ ಗಾಚಿಬೌಲಿ ಸೈದರಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಕಾಣೆಯಾದ ವ್ಯಕ್ತಿ ಅನುಶ್ರೀ ಬೆಂಗಳೂರಿನವರಾಗಿದ್ದು, ಗಾಚಿಬೌಲಿಯ ದಿವ್ಯಶ್ರೀ ಮಹಿಳಾ ಹಾಸ್ಟೆಲ್ ಒಂದರಲ್ಲಿ ವಾಸವಾಗಿದ್ದರು. ಅದಿಬಾಟ್ಲಾದಲ್ಲಿರುವ ಟಿಸಿಎಸ್ ಸಂಸ್ಥೆಯಲ್ಲಿ ಈ ಯುವತಿ ಕೆಲಸ ಮಾಡುತ್ತಿದ್ದರು.

ಪೊಲೀಸರ ಪ್ರಕಾರ ಅನುಶ್ರೀ ಸೋಮವಾರ ಕಚೇರಿಯಿಂದ ಹಿಂದಿರುಗಿಲ್ಲ.

ಸೋಮವಾರ ಯುವತಿ ತನ್ನ ತಂದೆ ಪ್ರಭಾಕರ್ ಅವರಿಗೆ ಕರೆ ಮಾಡಿ ಅನಾರೋಗ್ಯದ ಬಗ್ಗೆ ತಿಳಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ್ದ ತಂದೆ ಅಲ್ಲಿಗೆ ತೆರಳಿ ಆಸ್ಪತ್ರೆಗೆ ಕರೆದೊಯ್ಯುವುದಾಗಿ ತಿಳಿಸಿದ್ದಾರೆ. "ಯುವತಿಗೆ ಅನಾರೋಗ್ಯವಿತ್ತು ಎಂದು ತಂದೆ ನಮಗೆ ತಿಳಿಸಿದ್ದಾರೆ. ಅವರು ಸ್ವಂತವಾಗಿಯೇ ನಗರವನ್ನು ಬಿಟ್ಟಿರಬಹುದಾಗಿದೆ. ಪೊಲೀಸರು ಈ ಪ್ರಕರಣದ ತನಿಖೆ ನಡೆಸಿದ್ದಾರೆ" ಎಂದು ಗಾಚಿಬೌಲಿ ಇನ್ಸ್ಪೆಕ್ಟರ್ ಜೆ ರಮೇಶ್ ಕುಮಾರ್ ತಿಳಿಸಿದ್ದಾರೆ.

ಯುವತಿಯ ಕರೆಯ ನಂತರ ಹೈದರಾಬಾದ್ ಗೆ ಹೊರಟ ತಂದೆಗೆ ಯುವತಿ ಫೋನ್ ನಿಷ್ಕ್ರಿಯಗೊಳಿಸಿರುವುದು ತಿಳಿದಿದೆ. ಹಾಸ್ಟೆಲ್ ನಲ್ಲಿ ವಿಚಾರಣೆ ನಡೆಸಿದಾಗ, ಯುವತಿ ಹಿಂದುರಗದಿದ್ದನ್ನು ತಿಳಿದಿದ್ದಾರೆ. ನಂತರ ತಿಳಿದ ಮಾಹಿತಿಯ ಪ್ರಕಾರ ಅವರು ಕಚೇರಿಗೂ ಹೋಗಿಲ್ಲ. ಆದುದರಿಂದ ಕಾಣೆಯಾದ ಕೇಸ್ ದಾಖಲಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com