'ಇದು ಹುತಾತ್ಮ ಯೋಧ ಹನುಮಂತಪ್ಪ ಪತ್ನಿಯ ಕೊನೆ ಕೋರಿಕೆಯಾಗಿತ್ತು'

'ಓ ದೇವರೆ, ನನ್ನ ಪತಿಗೆ ಇದು ಪುನರ್ಜನ್ಮ, ಹೀಗಾಗಿ ಅವರನ್ನು ಮತ್ತೆ ಸಾಯಿಸಬೇಡ, ಬೇಕಿದ್ದರೆ ನನ್ನ ಜೀವ ತೆಗೆದುಕೋ... ದೇಶ ರಕ್ಷಣೆಗಾಗಿ ಅವರಿಗೆ ಜೀವಧಾನ...
ಹನುಮಂತಪ್ಪನ ಪತ್ನಿ ಹಾಗೂ ತಾಯಿ(ಬಲಗಡೆಯಿಂದ)
ಹನುಮಂತಪ್ಪನ ಪತ್ನಿ ಹಾಗೂ ತಾಯಿ(ಬಲಗಡೆಯಿಂದ)
ನವದೆಹಲಿ: 'ಓ ದೇವರೆ, ನನ್ನ ಪತಿಗೆ ಇದು ಪುನರ್ಜನ್ಮ, ಹೀಗಾಗಿ ಅವರನ್ನು ಮತ್ತೆ ಸಾಯಿಸಬೇಡ, ಬೇಕಿದ್ದರೆ ನನ್ನ ಜೀವ ತೆಗೆದುಕೋ... ದೇಶ ರಕ್ಷಣೆಗಾಗಿ ಅವರಿಗೆ ಜೀವದಾನ ಮಾಡು' ಎಂದು ಹುತಾತ್ಮ ಯೋಧನ ಪತ್ನಿ ಮಹಾದೇವಿ, ಪತಿ ಸಾಯುವ ಕೆಲವು ಕ್ಷಣಗಳ ಮುನ್ನ ದೇವರಲ್ಲಿ ಬೇಡಿಕೊಂಡ ಪರಿ ಇದು.
ಆದರೆ ಮಹಾದೇವಿಯ ಕೂಗು ಆ ದೇವರಿಗೆ ಕೇಳಿಸಲೇ ಇಲ್ಲ. ಪರಿಣಾಮ ಸಿಯಾಚಿನ್‌ ನಲ್ಲಿ ಸಂಭವಿಸಿದ ಹಿಮಪಾತದಲ್ಲಿ ಸಿಲುಕಿ, ಪವಾಡ ಸದೃಶ ರೀತಿಯಲ್ಲಿ ಬದುಕುಳಿದಿದ್ದ ಧಾರವಾಡ ಜಿಲ್ಲೆಯ ಕುಂದಗೊಳ ತಾಲೂಕಿನ ಬೆಟದೂರಿನ ಯೋಧ ಲ್ಯಾನ್ಸ್‌ನಾಯಕ್‌ ಹನುಮಂತಪ್ಪ ಕೊಪ್ಪದ್ ಅವರು ಇಂದು ಹುತಾತ್ಮರಾಗಿದ್ದಾರೆ.
ದೆಹಲಿ ಆರ್ ಆರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೀರಯೋಧ ಹನುಮಂತಪ್ಪನ ಚೇತರಿಕೆಗಾಗಿ ಇಡೀ ದೇಶ ಹಾಗೂ ಅವರ ಕುಟುಂಬದ ಪ್ರಾರ್ಥನೆ ಫಲಿಸಲಿಲ್ಲ. 
ಬದುಕುಳಿಯುವ ಯಾವ ಸಾಧ್ಯತೆಯೂ ಇಲ್ಲದ ಪರಿಸ್ಥಿತಿಯಲ್ಲೂ 6 ದಿನಗಳ ಕಾಲ ಸಾವಿನ ವಿರುದ್ಧ ಕುಗ್ಗದ ಇಚ್ಛಾಶಕ್ತಿಯನ್ನು ಮೆರೆದು ಜೀವ ಉಳಿಸಿಕೊಂಡು ಬಂದ ಸಾಹಸಿ ಯೋಧ ಹನುಮಂತಪ್ಪನ ಆರೋಗ್ಯಕ್ಕಾಗಿ ಬುಧವಾರ ಇಡೀ ದೇಶವೇ ಪ್ರಾರ್ಥಿಸಿತ್ತು. ದೇಶದ ಉದ್ದಗಲಕ್ಕೂ ಮಂದಿರ, ಮಸೀದಿ, ಚರ್ಚುಗಳಲ್ಲಿ ಜನತೆ ಪ್ರಾರ್ಥನೆ ಸಲ್ಲಿಸಿ, ವೀರ ಯೋಧನ ಆರೋಗ್ಯ ಸುಧಾರಣೆಗೆ ಮೊರೆ ಇಟ್ಟಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com