ಹುತಾತ್ಮ ಹನುಮಂತಪ್ಪ ಸ್ಮರಣಾರ್ಥ: ಸೇನೆಗೆ 6 ಮುಧೋಳ ನಾಯಿ ಹಸ್ತಾಂತರ

ಜಮ್ಮು ಮತ್ತು ಕಾಶ್ಮೀರದ ಸಿಯಾಚಿನ್‌ನಲ್ಲಿ ಸಂಭವಿಸಿದ ಹಿಮಪಾತದಲ್ಲಿ ಸಿಲುಕಿ ಹುತಾತ್ಮರಾದ ಬೆಟದೂರಿನ ಸೈನಿಕ ಲ್ಯಾನ್ಸ್‌ ನಾಯಕ್‌ ಹನುಮಂತಪ್ಪ ಕೊಪ್ಪದ್...
ಮುಧೋಳ ನಾಯಿ
ಮುಧೋಳ ನಾಯಿ

ಬಾಗಲಕೋಟೆ: ಜಮ್ಮು ಮತ್ತು ಕಾಶ್ಮೀರದ ಸಿಯಾಚಿನ್‌ನಲ್ಲಿ ಸಂಭವಿಸಿದ ಹಿಮಪಾತದಲ್ಲಿ ಸಿಲುಕಿ ಹುತಾತ್ಮರಾದ ಬೆಟದೂರಿನ ಸೈನಿಕ ಲ್ಯಾನ್ಸ್‌ ನಾಯಕ್‌ ಹನುಮಂತಪ್ಪ ಕೊಪ್ಪದ್ ಸ್ಮರಣಾರ್ಥ 6 ಮುಧೋಳ ನಾಯಿಗಳನ್ನು ಸೇನೆಗೆ ಹಸ್ತಾಂತರಿಸಲಾಗಿದೆ.

ಕರ್ನಾಟಕ ಪಶು ವೈದ್ಯಕೀಯ ವಿವಿ ವ್ಯಾಪ್ತಿಯ ಮುಧೋಳದ ಶ್ವಾನ ಸಂಶೋಧನಾ ಕೇಂದ್ರ ವತಿಯಿಂದ ನಾಯಿಗಳನ್ನು ಹಸ್ತಾಂತರಿಸಲಾಗಿದೆ. ಕೇಂದ್ರದಲ್ಲಿ ಬೆಳೆದ 3 ಗಂಡು ಮತ್ತು 3 ಹೆಣ್ಣು  ಶ್ವಾನಗಳನ್ನು ಬೆಂಗಳೂರಿನ ಹೆಬ್ಟಾಳದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಸ್ತಾಂತರಿಸಲಾಯಿತು. ಇದರೊಂದಿಗೆ ಸೇನೆಯಲ್ಲಿ ಇದೇ ಮೊದಲ ಬಾರಿಗೆ ಮುಧೋಳ ನಾಯಿಗಳ ಪ್ರವೇಶ ಆದಂತಾಗಿದೆ.

ಭಾರತೀಯ ಸೇನೆಯು ಉತ್ತರ ಪ್ರದೇಶದ ಮೇರಠ್ ನಲ್ಲಿ ಸೇನಾ ಶ್ವಾನ ಗಳ ತರಬೇತಿ ಘಟಕ ಹೊಂದಿದೆ. ಇಲ್ಲಿ ಶ್ವಾನಗಳಿಗೆ ಬಾಂಬ್‌ ಪತ್ತೆ ಹಚ್ಚುವಿಕೆ, ಪತ್ತೇದಾರಿ ಚಟುವಟಿಕೆ, ರಕ್ಷಣಾ ಕಾರ್ಯದ ಕುರಿತು ತರಬೇತಿ ನೀಡಲಾಗುತ್ತದೆ. ಭಾರತೀಯ ಸೇನೆಯಲ್ಲಿ ಈವರೆಗೆ ಲ್ಯಾಬ್ರಡಾರ್‌, ಜರ್ಮನ್‌ ಶಫರ್ಡ್‌, ಬೆಲ್ಜಿಯನ್‌ ಶಫರ್ಡ್‌ನಂತಹ ವಿದೇಶಿ ಶ್ವಾನ ತಳಿಗಳನ್ನು ಬಳಸಲಾಗುತ್ತಿದೆ. ಇದೇ ಮೊದಲ ಬಾರಿಗೆ ಸೇನೆಗೆ ದೇಶಿ ತಳಿಯಾದ ಮುಧೋಳ ನಾಯಿಗಳ ಪ್ರವೇಶವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com