ಔಷಧಿ ಬೆಲೆಗಳು ತುಟ್ಟಿಯಾಗುವುದಿಲ್ಲ: ಆರೋಗ್ಯ ಸಚಿವ ನಡ್ಡ

ಆಮದು ತೆರಿಗೆ ಹೆಚ್ಚಾಗಿರುವುದರಿಂದ ಔಷಧಿಗಳ ಬೆಲೆ ಹೆಚ್ಚಾಗಲಿವೆ ಎಂಬ ವದಂತಿಗಳ ನಡುವೆ, ಕೇಂದ್ರ ಆರೋಗ್ಯ ಸಚಿವ ಜೆ ಪಿ ನಡ್ಡ, ಔಷಧಿಗಳು ಕಡಿಮೆ ಬೆಲೆಯಲ್ಲಿಯೇ
ಕೇಂದ್ರ ಆರೋಗ್ಯ ಸಚಿವ ಜೆ ಪಿ ನಡ್ಡ
ಕೇಂದ್ರ ಆರೋಗ್ಯ ಸಚಿವ ಜೆ ಪಿ ನಡ್ಡ

ಅಲೆಪ್ಪೆ: ಆಮದು ತೆರಿಗೆ ಹೆಚ್ಚಾಗಿರುವುದರಿಂದ ಔಷಧಿಗಳ ಬೆಲೆ ಹೆಚ್ಚಾಗಲಿವೆ ಎಂಬ ವದಂತಿಗಳ ನಡುವೆ, ಕೇಂದ್ರ ಆರೋಗ್ಯ ಸಚಿವ ಜೆ ಪಿ ನಡ್ಡ, ಔಷಧಿಗಳು ಕಡಿಮೆ ಬೆಲೆಯಲ್ಲಿಯೇ ಸಿಗಲಿವೆ ಎಂದು ತಿಳಿಸಿದ್ದಾರೆ.

"ಆಮದು ತೆರಿಗೆಯಲ್ಲಿ ಹೆಚ್ಚಳವಾಗಿರುವುದರಿಂದ ಔಷಧಿಗಳ ಬೆಲೆ ತುಟ್ಟಿಯಾಗಲಿದೆ ಎಂದು ತಪ್ಪಾಗಿ ವರದಿ ಮಾಡಲಾಗಿದೆ. ಆದರೆ ಅದಕ್ಕೆ ತದ್ವಿರುದ್ಧವಾಗಿ ಅವುಗಳ ಬೆಲೆ ಕಡಿಮೆಯಾಗಲಿದೆ. ಸಾಮಾನ್ಯ ಔಷಧಗಳನ್ನು ಹೊರತುಪಡಿಸಿ, ಕ್ಯಾನ್ಸರ್ ಮತ್ತು ಹೃದಯ ಸಂಬಂಧಿ ಚಿಕಿತೆಯ್ಸ ಔಷಧಿಗಳು ಶೇಕಡಾ ೬೦ ರಿಂದ ೯೦% ಸಬ್ಸಿಡಿ ಬೆಲೆಯಲ್ಲಿ ದೊರೆಯಲಿವೆ" ಎಂದು ನಡ್ಡ, ಟಿ ಡಿ ವೈದ್ಯಕೀಯ ಕಾಲೇಜಿನಲ್ಲಿ ಹೇಳಿದ್ದಾರೆ.

ವೈದ್ಯಕೀಯ ಶಾಲೆಯಲ್ಲಿ ೧೫೦ ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ವಿಭಾಗದ ಶಿಲಾನ್ಯಾಸ ಏರ್ಪಡಿಸಿದ್ದಲ್ಲದೆ, ಕೇರಳ ಮತ್ತು ಇತರ ರಾಜ್ಯಗಳಲ್ಲಿ ಕಡಿಮೆ ಬೆಲೆಯಲ್ಲಿ ಔಷಧಗಳು ಸಿಕ್ಕಲು ಹಾಗೂ ಚಿಕಿತ್ಸೆಗಳಿಗಾಗಿ ಕೇಂದ್ರ ಸರ್ಕಾರ ಸಹಾಯಧನ ನೀಡಲಿದೆ ಎಂದು ಕೂಡ ನಡ್ಡ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com