ಐಪಿಎಸ್ ಅಧಿಕಾರಿ ಹರೀಶ್ ಪಂಚಭೂತಗಳಲ್ಲಿ ಲೀನ

ಚೆನ್ನೈನ ಎಗ್ಮೋರ್ ನಲ್ಲಿರುವ ಪೊಲೀಸ್ ಆಫೀಸರ್ಸ್ ಮೆಸ್ ನಲ್ಲಿ ನಿಗೂಢ ರೀತಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ ಕನ್ನಡಿಗಾರದ ಹರೀಶ್ ಅವರ ಅಂತ್ಯಕ್ರಿಯೆ ಸಕಲ...
ಹರೀಶ್
ಹರೀಶ್
Updated on

ಕೋಲಾರ: ಚೆನ್ನೈನ ಎಗ್ಮೋರ್ ನಲ್ಲಿರುವ ಪೊಲೀಸ್ ಆಫೀಸರ್ಸ್ ಮೆಸ್ ನಲ್ಲಿ ನಿಗೂಢ ರೀತಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ ಕನ್ನಡಿಗಾರದ ಹರೀಶ್ ಅವರ ಅಂತ್ಯಕ್ರಿಯೆ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿತು.

ಹರೀಶ್ ಅವರ ಹುಟ್ಟೂರಾದ ಮಾಲೂರಿನ ಬಂಡೆ ಹೊಸೂರಿನಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನಡೆಸಲಾಯಿತು. ಈ ವೇಳೆ ಹರೀಶ್ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಹಿಂದೂ ಸಂಪ್ರದಾಯದಂತೆ ವಿಧಿವಿಧಾನಗಳನ್ನು ನೆರವೇರಿಸಲಾಯಿತು.

ಆ್ಯಂಬುಲೆನ್ಸ್ ಮೂಲಕ ಹರೀಶ್ ಪಾರ್ಥಿವ ಶರೀರವನ್ನು ತಂದು ಹೊಸಕೋಟೆಯ ಸರ್ಕಾರಿ ಶಾಲೆಯ ಆವರಣದಲ್ಲಿ ಸಾರ್ವಜನಿಕರ ದರ್ಶನಕ್ಕೆ ವ್ಯವಸ್ಥೆ ಮಾಡಲಾಯಿತು. ಮಾಜಿ ಸಚಿವ ಬಚ್ಚೇಗೌಡ ಸೇರಿದತೆ ಹಲವು ಮಂದಿ ಹರೀಶ್ ಅವರಿಗೆ ಅಂತಿಮ ನಮನ ಸಲ್ಲಿಸಿದರು. ಇದಾದ ಬಳಿಕ, ಹರೀಶ್ ಹುಟ್ಟೂರಾದ ಮಾಲೂರು ತಾಲೂಕಿನ ಬಂಡೆಹೊಸೂರಿಗೆ ಅವರ ದೇಹವನ್ನು ಕೊಂಡೊಯ್ಯಲಾಯಿತು.

2009ರ ಬ್ಯಾಚ್'ನ ಐಪಿಎಸ್ ಅಧಿಕಾರಿಯಾದ ಹರೀಶ್ ಅವರಿಗೆ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರ ಮಗಳೊಂದಿಗೆ ವಿವಾಹ ನಿಶ್ಚಯವಾಗಿತ್ತು. ಇದೇ ವರ್ಷದ ಮಾರ್ಚ್ 18-19ರಂದು ಬಸವೇಶ್ವರನಗರದಲ್ಲಿ ಮದುವೆ ನಡೆಸಲು ನಿಗದಿಯಾಗಿತ್ತು. ಮದುವೆ ಮುನ್ನ ಹರೀಶ್ ಆತ್ಮಹತ್ಯೆಗೆ ಶರಣಾಗಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com