
ಚೆನ್ನೈ: ಹಾಲು ಮತ್ತು ಹಾಲು ಉತ್ಪನ್ನ ಅಭಿವೃದ್ಧಿಗಳ ಸಚಿವ ಬಿ ವಿ ರಮಣಾ ಅವರನ್ನು ಸಚಿವ ಸ್ಥಾನದಿಂದ, ಹಾಗೂ ಪಕ್ಷದ ಸ್ಥಾನದಿಂದ ತಮಿಳುನಾಡು ಮುಖ್ಯಮಂತ್ರಿ ಜೆ ಜಯಲಲಿತಾ ವಜಾ ಮಾಡಿದ್ದಾರೆ.
ರಮಣಾ ಅವರು ತಿರುವಳ್ಳುವರ್ ಪಶ್ಚಿಮ ಜಿಲ್ಲೆಯ ಎಐಡಿಎಂಕೆ ಪಕ್ಷದ ಕಾರ್ಯದರ್ಶಿಗಳಾಗಿದ್ದರು.
ಪಕ್ಷದ ಸ್ಥಾನದಿಂದಾಗಲೀ, ಸಚಿವನ ಸ್ಥಾನದಿಂದಾಗಲೀ ವಜಾ ಮಾಡಲು ಯಾವುದೇ ಕಾರಣಗಳನ್ನು ನೀಡಿಲ್ಲ. ಸದ್ಯಕ್ಕೆ ಹಾಲು ಮತ್ತು ಹಾಲು ಉತ್ಪನ್ನ ಅಭಿವೃದ್ಧಿಗಳ ಸಚಿವರಾಗಿ ಗ್ರಾಮೀಣ ಕೈಗಾರಿಕೆಗಳು ಮತ್ತು ಕಾರ್ಮಿಕ ಸಚಿವ ಪಿ ಮೋಹನ್ ಹೆಚ್ಚುವರಿಯಾಗಿ ನೇಮಕಗೊಂಡಿದ್ದಾರೆ.
Advertisement