ತೆರಿಗೆ: ಮಧ್ಯಮ ವರ್ಗಕ್ಕೆ ಯಥಾಸ್ಥಿತಿ; 5 ಲಕ್ಷ ಆದಾಯ ಮೇಲ್ಪಟ್ಟವರಿಗೆ ಶೇ.20 ತೆರಿಗೆ

ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಸೋಮವಾರ ಲೋಕಸಭೆಯಲ್ಲಿ 3ನೇ ಬಾರಿಗೆ ಕೇಂದ್ರ ಬಜೆಟ್ ಮಂಡನೆ ಮಾಡಿದ್ದು, ಈ ಬಾರಿಯ ಬಜೆಟ್ ಪರಿಣಾಮದ ಬಿಸಿ ಶ್ರೀಮಂತರ ಮೇಲೆ ತಟ್ಟಿದೆ...
ತೆರಿಗೆ: ಮಧ್ಯಮ ವರ್ಗಕ್ಕೆ ಯಥಾಸ್ಥಿತಿ; 5 ಲಕ್ಷ ಆದಾಯ ಮೇಲ್ಪಟ್ಟವರಿಗೆ ಶೇ.20 ತೆರಿಗೆ
ತೆರಿಗೆ: ಮಧ್ಯಮ ವರ್ಗಕ್ಕೆ ಯಥಾಸ್ಥಿತಿ; 5 ಲಕ್ಷ ಆದಾಯ ಮೇಲ್ಪಟ್ಟವರಿಗೆ ಶೇ.20 ತೆರಿಗೆ

ನವದೆಹಲಿ: ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಸೋಮವಾರ ಲೋಕಸಭೆಯಲ್ಲಿ 3ನೇ ಬಾರಿಗೆ ಕೇಂದ್ರ ಬಜೆಟ್ ಮಂಡನೆ ಮಾಡಿದ್ದು, ಈ ಬಾರಿಯ ಬಜೆಟ್ ಪರಿಣಾಮದ ಬಿಸಿ ಶ್ರೀಮಂತರ ಮೇಲೆ ತಟ್ಟಿದೆ.

ವಿತ್ತ ಸಚಿವರು ಮಂಡನೆ ಮಾಡಿರುವ ಬಜೆಟ್ ನಲ್ಲಿ ವೈಯಕ್ತಿಕ ಆದಾಯ ತೆರಿಗೆ ವರ್ಗೀಕರಣ ಮಿತಿಗಳನ್ನು ಈ ಹಿಂದಿನಂತೆಯೇ ಉಳಿಸಿಕೊಳ್ಳಲಾಗಿದ್ದು, ಒಂದು ರೀತಿಯಲ್ಲಿ ಹೇಳಬೇಕಾದರೆ, ಮಧ್ಯಮವರ್ಗದ ಜನರಿಗೆ ಮಾತ್ರ ಕೊಂಚ ನಿರಾಳ ಸಿಕ್ಕಿದೆ ಎಂಬುದನ್ನು ಬಿಟ್ಟರೆ, ಈ ಬಾರಿಯ ಬಜೆಟ್ ಯಾರಿಗೂ ಹೆಚ್ಚಿನ ಲಾಭವನ್ನು ನೀಡಿಲ್ಲ.

ಬಜೆಟ್ ನಲ್ಲಿ ಮಂಡನೆ ಮಾಡಿರುವ ಪ್ರಕಾರ. ರು. 0-2.5 ಲಕ್ಷ ವರೆಗೆ ಆದಾಯ ಗಳಿಕೆ ಮಾಡುವವರು ಯಾವುದೇ ತೆರಿಗೆಯನ್ನು ಕಟ್ಟುವಂತಿಲ್ಲ. 2.5- 5 ಲಕ್ಷ ವರೆಗೆ ಆದಾಯ ಗಳಿಸುವವರು ಶೇ.10 ರಷ್ಟು ತೆರಿಗೆಯನ್ನು ಕಟ್ಟಬೇಕು. 5-10 ಲಕ್ಷ ದವರು ಶೇ.20 ರಷ್ಟು ಹಾಗೂ 10 ಲಕ್ಷಕ್ಕೂ ಮೇಲ್ಪಟ್ಟವರು ಶೇ.30 ರಷ್ಟು ತೆರಿಗೆಯನ್ನು ಪಾವತಿಸಬೇಕು ಎಂದು ತಿಳಿದುಬಂದಿದೆ.

ಪೆಟ್ರೋಲ್, ಎಲ್ ಪಿಜಿ, ಸಿಎನ್ ಜಿ ಚಾಲಿಕ ಸಣ್ಣ ಕಾರುಗಳ ಮೇಲೆ ಶೇ. 1 ರಷ್ಟು ಮತ್ತು ಡೀಸಲ್ ಚಾಲಿತ ಕಾರುಗಳ ಮೇಲೆ ಶೇ.2.5 ರಷ್ಟು ಮಾಲಿನ್ಯ ಸೆಸ್ ವಿಧಿಸಲಾಗಿದೆ. ಇದರಂತೆ ಎಲ್ಲಾ ಸೇವೆಗಳಿಗೆ ಶೇ.0.5 ರಷ್ಟು ಕೃಷಿ ಕಲ್ಯಾಣ್ ಕರ ಹೇರಲಾಗಿದೆ. ಇನ್ನು ಆಭರಣಗಳ ವಿಚಾರಕ್ಕೆ ಬಂದರೆ, ಬೆಳ್ಳಿ ಹೊರತು ಪಡಿಸಿ ಇತರೆ ಆಭರಗಳ ಮೇಲೆ ಶೇ. 1 ರಷ್ಟು ತೆರಿಗೆಯನ್ನು ಹೆಚ್ಚಿಸಲಾಗಿದೆ.

ಸಾಲಪತ್ರಗಳ ವರ್ಗಾವಣೆ ಮೇಲೂ ಶೇ.0.17ರಿಂದ ಶೇ.0.05ರಷ್ಟು ತೆರಿಗೆಯನ್ನು ಹೆಚ್ಚಿಸಲಾಗಿದೆ. ವಾರ್ಷಿಕ ಗಳಿಸುವ ಲಾಭಾಂಶ ರು. 10 ಲಕ್ಷಕ್ಕಿಂತ ಹೆಚ್ಚಿದ್ದರೆ ಇನ್ನುಮುಂದೆ ಶೇ.10 ರಷ್ಟು ಹೆಚ್ಚುವರಿ ತೆರಿಗೆ ಪಾವತಿಸಬೇಕು. ತಂಬಾಕು ಉತ್ಪನ್ನಗಳ ಮೇಲೂ ಶೇ.15 ರಷ್ಟು ತೆರಿಗೆ ಏರಿಕೆಯಾಗಿದೆ. ಅಗ್ಗದ ಮನೆಗಳ ನಿರ್ಮಾಣಕ್ಕೆ ಸೇವಾ ತೆರಿಗೆಯಿಂದ ವಿನಾಯಿತಿ ನೀಡಲಾಗಿದ್ದು, ವಾರ್ಷಿಕ ವರಮಾನ ರು.1 ಕೋಟಿಗಿಂತ ಹೆಚ್ಚಿದ್ದರೆ ಶೇ.15 ರಷ್ಟು ಸೆಸ್ ಪಾವತಿಸಬೇಕು.

ಇದರಂತೆ ನಿರ್ಮಯಾ ಸ್ವಾಸ್ಥ್ಯ ಭೀಮಾ ಯೋಜನೆ ಅಡಿಯಲ್ಲಿ ಬರುವ ಜೀವ ವಿಮಾ ಯೋಜನೆಗಳಿಗೂ ಸೇವಾ ತೆರಿಗೆಯಲ್ಲಿ ವಿನಾಯಿತಿಯನ್ನು ನೀಡಲಾಗಿದೆ. ಡಯಾಲಿಸಿಸ್ ನ ಮೇಲೂ ಸುಂಕವನ್ನು ಇಳಿಸಿದ್ದು, ಮೊದಲ ಬಾರಿ ಮನೆ ಖರೀದಿಸುವವರಿಗೆ ರಿಲೀಫ್ ಸಿಕ್ಕಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com