ಆರ್‍ಜೆಡಿಗೆ ಜೆಡಿಯು ತಿರುಗೇಟು: ನಿತೀಶ್‍ಗೆ ನಿಮ್ಮ ಪಾಠ ಅಗತ್ಯವಿಲ್ಲ

ಬಿಹಾರದಲ್ಲಿ ಆರ್‍ಜೆಡಿ ಮತ್ತು ಜೆಡಿಯು ಒಕ್ಕೂಟದಲ್ಲಿನ ಬಿರುಕು ದಿನಕಳೆದಂತೆ ದೊಡ್ಡದಾಗುತ್ತಿದೆ. ಎಂಜಿನಿಯರ್‍ಗಳ ಹತ್ಯೆ ಸಂಬಂಧ ಸಿಎಂ ನಿತೀಶ್ ಕುಮಾರ್ ವಿರುದ್ಧ...
ಲಾಲು ಪ್ರಸಾದ್ ಯಾದವ್, ನಿತೀಶ್ ಕುಮಾರ್
ಲಾಲು ಪ್ರಸಾದ್ ಯಾದವ್, ನಿತೀಶ್ ಕುಮಾರ್
Updated on: 

ಪಾಟ್ನಾ: ಬಿಹಾರದಲ್ಲಿ ಆರ್‍ಜೆಡಿ ಮತ್ತು ಜೆಡಿಯು ಒಕ್ಕೂಟದಲ್ಲಿನ ಬಿರುಕು ದಿನಕಳೆದಂತೆ ದೊಡ್ಡದಾಗುತ್ತಿದೆ. ಎಂಜಿನಿಯರ್‍ಗಳ ಹತ್ಯೆ ಸಂಬಂಧ ಸಿಎಂ ನಿತೀಶ್ ಕುಮಾರ್ ವಿರುದ್ಧ ಆರ್‍ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಹಾಗೂ ಉಪಾಧ್ಯಕ್ಷ ರಘುವಂಶ್ ಪ್ರಸಾದ್ ಸಿಂಗ್ ವಾಗ್ದಾಳಿ ನಡೆಸಿದ ಬೆನ್ನಲ್ಲೇ ಶುಕ್ರವಾರ ಜೆಡಿಯು ಕೂಡ ಆರ್‍ಜೆಡಿಗೆ ತಿರುಗೇಟು ನೀಡಿದೆ. ಈವರೆಗೆ ಆರ್‍ಜೆಡಿ ಆರೋಪಗಳಿಗೆ ಸಿಎಂ ನಿತೀಶ್ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಆದರೆ, ಶುಕ್ರವಾರ ಆರ್‍ಜೆಡಿ ವಿರುದ್ಧ ತಿರುಗಿಬಿದ್ದಿರುವ ಜೆಡಿಯು ವಕ್ತಾರ ಸಂಜಯ್ ಕುಮಾರ್ ಸಿಂಗ್, 'ನಿತೀಶ್ ಅವರಿಗೆ ಯಾರಿಂದಲೂ ಪಾಠ ಕೇಳಿಸಿಕೊಳ್ಳಬೇಕಾದ ಅಗತ್ಯವಿಲ್ಲ. ಅವರ ಟ್ರ್ಯಾಕ್ ರೆಕಾರ್ಡ್ ಎಲ್ಲರಿಗೂ ಗೊತ್ತಿದೆ'' ಎಂದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com