ಪಠಾಣ್ ಕೋಟ್ ನಲ್ಲಿ ಉಗ್ರರ ವಿರುದ್ಧ ಕಾರ್ಯಾಚರಣೆ (ಸಂಗ್ರಹ ಚಿತ್ರ)
ಪಠಾಣ್ ಕೋಟ್ ನಲ್ಲಿ ಉಗ್ರರ ವಿರುದ್ಧ ಕಾರ್ಯಾಚರಣೆ (ಸಂಗ್ರಹ ಚಿತ್ರ)

ಮತ್ತೋರ್ವ ಉಗ್ರನ ಹತ್ಯೆ; ಪಠಾಣ್ ಕೋಟ್ ನಲ್ಲಿ ಮುಂದುವರೆದ ಕಾರ್ಯಾಚರಣೆ

ಪಂಜಾಬ್ ನ ಪಠಾಣ್ ಕೋಟ್ ನಲ್ಲಿರುವ ಸೇನಾ ವಾಯುನೆಲೆಯಲ್ಲಿ ಶನಿವಾರ ನಡೆದ ಉಗ್ರದಾಳಿ ಪ್ರಕರಣ ಭಾನುವಾರವೂ ಮುಂದುವರೆದಿದ್ದು, ಭಾರತೀಯ ಸೇನಾಪಡೆಗಳು ಮತ್ತೋರ್ವ ಉಗ್ರನನ್ನು ಹತ್ಯೆಗೈಯ್ಯುವಲ್ಲಿ ಯಶಸ್ವಿಯಾಗಿದೆ...

ಪಠಾಣ್‌ಕೋಟ್‌: ಪಂಜಾಬ್ ನ ಪಠಾಣ್ ಕೋಟ್ ನಲ್ಲಿರುವ ಸೇನಾ ವಾಯುನೆಲೆಯಲ್ಲಿ ಶನಿವಾರ ನಡೆದ ಉಗ್ರದಾಳಿ ಪ್ರಕರಣ ಭಾನುವಾರವೂ ಮುಂದುವರೆದಿದ್ದು, ಭಾರತೀಯ ಸೇನಾಪಡೆಗಳು  ಮತ್ತೋರ್ವ ಉಗ್ರನನ್ನು ಹತ್ಯೆಗೈಯ್ಯುವಲ್ಲಿ ಯಶಸ್ವಿಯಾಗಿದೆ.

ಭಾನುವಾರ ಹತನಾದ ಉಗ್ರನನ್ನು ಸೇರಿ ಈ ವರೆಗೂ ಒಟ್ಟು 6 ಉಗ್ರರನ್ನು ಕೊಲ್ಲಲಾಗಿದೆ. ಇದೇ ವೇಳೆ ನಿನ್ನೆ ಕಾರ್ಯಾಚರಣೆ ವೇಳೆ ಗಾಯಗೊಂಡಿದ್ದ ಇಬ್ಬರು ಸೈನಿಕರು ಇಂದು ಚಿಕಿತ್ಸೆ  ಫ‌ಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ಭಾನುವಾರ ಬೆಳಗ್ಗೆ ಶೋಧ ಕಾರ್ಯಾಚರಣೆ ವೇಳೆ ಗ್ರೆನೇಡ್‌ ಸ್ಫೋಟಗೊಂಡಿದ್ದು, ಸ್ಫೋಟದಿಂದಾಗಿ ಓರ್ವ ಸೈನಿಕ ಮೃತಪಟ್ಟಿದ್ದಾನೆ ಎಂದು  ತಿಳಿದುಬಂದಿದೆ. ಇದರೊಂದಿಗೆ ಶನಿವಾರದಿಂದ ನಡೆದ ಈ ವರೆಗೂ ನಡೆದ ದಾಳಿಯಲ್ಲಿ ಒಟ್ಟು ಹತ್ತು ಮಂದಿ ಸೈನಿಕರು ಹುತಾತ್ಮರಾಗಿದ್ದಾರೆ. ಸೇನಾ ಪಡೆಗಳು ಉಗ್ರನನ್ನು ಜೀವಂತವಾಗಿ  ಸೆರೆಹಿಡಿಯುವ ಸಲುವಾಗಿ ಕಾರ್ಯಾಚರಣೆ ಮುಂದುವರಿಸಿದ್ದಾರೆ.

ವಾಯುನೆಲೆಯಲ್ಲಿದ್ದ ಯುದ್ಧವಿಮಾನ ಮತ್ತು ಹೆಲಿಕಾಪ್ಚರ್ ಗಳ ಧ್ವಂಸವೇ ಉಗ್ರರ ಗುರಿ
ಸೇನಾ ವಾಯುನೆಲೆಯ ಮೇಲೆ ದಾಳಿ ಮಾಡಿರುವ ಉಗ್ರರು ಅಲ್ಲಿರುವ ಅತ್ಯಾಧುನಿಕ ಯುದ್ಧ ವಿಮಾನ ಮತ್ತು ಯುದ್ಧ ಹೆಲಿಕಾಪ್ಟರ್ ಗಳನ್ನು ಧ್ವಂಸ ಮಾಡುವುದಕ್ಕಾಗಿಯೇ ದಾಳಿ ಮಾಡಿದ್ದಾರೆ  ಎಂದು ಸೇನಾಮೂಲಗಳು ತಿಳಿಸಿವೆ.

ಮೃತ ಉಗ್ರರಿಂದ ಭಾರಿ ಪ್ರಮಾಣದ ಶಸ್ತ್ರಾಸ್ತ್ರ ವಶ
ಇದೇ ವೇಳೆ ಸೈನಿಕರ ಗುಂಡಿಗೆ ಹತರಾದ ಉಗ್ರರಿಂದ ಭಾರಿ ಪ್ರಮಾಣದ ಮದ್ದು-ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ಎಕೆ-47 ಬಂದೂಕುಗಳು, ಸಣ್ಣ ಫಿರಂಗಿಗಳು, ಗ್ರೆನೇಡ್ ಲಾಂಚರ್  ಗಳು ಮತ್ತು ತಾವು ಯಾವ ಜಾಗದಲ್ಲಿದ್ದೇವೆ ಎಂದು ಸೂಚಿಸುವ ಅತ್ಯಾಧುನಿಕ ಜಿಪಿಎಸ್ ವ್ಯವಸ್ಥೆಯನ್ನು ಉಗ್ರರಿಂದ ವಶಪಡಿಸಿಕೊಳ್ಳಲಾಗಿದೆ.

Related Stories

No stories found.

Advertisement

X
Kannada Prabha
www.kannadaprabha.com