ವಾಯುನೆಲೆ ಗೇಟ್ ಬಳಿ ಅನುಮಾನಾಸ್ಪದವಾಗಿ ನಿಂತಿದ್ದ ವ್ಯಕ್ತಿ ಬಂಧನ, ವಿಚಾರಣೆ

ಇತ್ತೀಚೆಗಷ್ಟೇ ಉಗ್ರರ ದಾಳಿಯಿಂದ ಭಾರಿ ಸುದ್ದಿಗೆ ಗ್ರಾಸವಾಗಿದ್ದ ಪಂಜಾಬ್ ನ ಪಠಾಣ್ ಕೋಟ್ ಸೇನಾ ವಾಯುನೆಲೆಯ ಗೇಟ್ ಬಳಿ ಬುಧವಾರ ಸಂಜೆ ವ್ಯಕ್ತಿಯೊಬ್ಬ ಅನುಮಾನಾಸ್ಪದವಾಗಿ ನಿಂತಿದ್ದ ಕಾರಣ ಆತನನ್ನು ಸೇನಾಧಿಕಾರಿಗಳು ವಶಕ್ಕೆ ಪಡೆದಿದ್ದಾರೆ...
ಪಠಾಣ್ ಕೋಟ್ ಸೇನಾ ವಾಯುನೆಲೆಯ ಗೇಟ್ ಬಳಿ ವ್ಯಕ್ತಿ ಬಂಧನ (ಚಿತ್ರಕೃಪೆ: ಟೈಮ್ಸ್ ನೌ)
ಪಠಾಣ್ ಕೋಟ್ ಸೇನಾ ವಾಯುನೆಲೆಯ ಗೇಟ್ ಬಳಿ ವ್ಯಕ್ತಿ ಬಂಧನ (ಚಿತ್ರಕೃಪೆ: ಟೈಮ್ಸ್ ನೌ)
Updated on: 

ಪಠಾಣ್‍ಕೋಟ್: ಇತ್ತೀಚೆಗಷ್ಟೇ ಉಗ್ರರ ದಾಳಿಯಿಂದ ಭಾರಿ ಸುದ್ದಿಗೆ ಗ್ರಾಸವಾಗಿದ್ದ ಪಂಜಾಬ್ ನ ಪಠಾಣ್ ಕೋಟ್ ಸೇನಾ ವಾಯುನೆಲೆಯ ಗೇಟ್ ಬಳಿ ಬುಧವಾರ ಸಂಜೆ ವ್ಯಕ್ತಿಯೊಬ್ಬ  ಅನುಮಾನಾಸ್ಪದವಾಗಿ ನಿಂತಿದ್ದ ಕಾರಣ ಆತನನ್ನು ಸೇನಾಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ಪಠಾಣ್ ಕೋಟ್ ಸೇನಾ ವಾಯುನೆಲೆಯ ಗೇಟ್ ಬಳಿ ಬ್ಯಾಗ್ ಹಿಡಿದು ಅನುಮಾನಾಸ್ಪದವಾಗಿ ಕಂಡ ಶಂಕಿತ ವ್ಯಕ್ತಿಯನ್ನು ಸೈನಿಕರು ಕೂಡಲೇ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಅತ್ತ  ಗುರುದಾಸ್ ಪುರದ ಟಿಬ್ರಿಯಲ್ಲಿರುವ ಸೇನಾನೆಲೆಯಲ್ಲಿಯೂ ಕೂಡ ಇಬ್ಬರು ಶಂಕಿತರು ಅನುಮಾನಾಸ್ಪದವಾಗಿ ಕಂಡ ಕುರಿತು ಸ್ಥಳೀಯ ಗ್ರಾಮಸ್ಥರು ಸೈನಿಕರಿಗೆ ಮಾಹಿತಿ ನೀಡಿದ್ದರು. ಈ  ಮಾಹಿತಿಯನ್ನಾಧರಿಸಿ ಸೈನಿಕರು ಗುರುದಾಸ್ ಪುರದಲ್ಲಿ ಶೋಧ ಕಾರ್ಯ ನಡೆಸುತ್ತಿದ್ದ, ಇತ್ತ ಪಠಾಣ್ ಕೋಟ್ ವಾಯುನೆಲೆಯ ಬಳಿಯಲ್ಲಿಯೂ ಓರ್ವ ವ್ಯಕ್ತಿ ಅನುಮಾನಾಸ್ಪದವಾಗಿ  ಕಾಣಿಸಿಕೊಂಡಿರುವುದು ಭೀತಿಗೆ ಕಾರಣವಾಗಿದೆ.

ಪ್ರಸ್ತುತ ಸೈನಿಕರು ವಶಕ್ಕೆ ಪಡೆದಿರುವ ವ್ಯಕ್ತಿ ಉಗ್ರನೋ ಅಥವಾ ಸ್ಥಳೀಯ ಗ್ರಾಮಸ್ಥನೋ ಎಂಬುದು ಇನ್ನೂ ತಿಳಿದುಬಂದಿಲ್ಲ. ಆದರೆ ಪಠಾಣ್ ಕೋಟ್ ಉಗ್ರ ದಾಳಿ ಬಳಿಕ ಮೈಯೆಲ್ಲಾ  ಕಣ್ಣಾಗಿಸಿಕೊಂಡಿರುವ ಸೈನಿಕರು ಶಂಕಾಸ್ಪದವಾಗಿ ಕಂಡುಬರುವ ಯಾವುದೇ ಸಣ್ಣ ವಿಚಾರವನ್ನು ತೀವ್ರ ವಿಚಾರಣೆಗೊಳಪಡಿಸುತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com