ಮತ್ತೆ ಉಗ್ರರ ಭೀತಿ: ಗುರುದಾಸ್ ಪುರ ವಾಯುನೆಲೆ ಸುತ್ತುವರೆದ ಸೈನಿಕರು

ಪಂಜಾಬ್ ನ ಗುರುದಾಸ್ ಪುರದಲ್ಲಿ ಮತ್ತೆ ಉಗ್ರರು ಅಡಗಿರುವ ಕುರಿತು ಶಂಕೆ ವ್ಯಕ್ತವಾಗಿದ್ದು, ಸೇನಾ ನೆಲೆಯನ್ನು ಭಾರತೀಯ ಸೈನಿಕರು ಸುತ್ತುವರೆದಿದ್ದಾರೆ...
ಸೇನಾನೆಲೆಯಲ್ಲಿ ಶೋಧ ನಡೆಸುತ್ತಿರುವ ಸೈನಿಕರು (ಸಂಗ್ರಹ ಚಿತ್ರ)
ಸೇನಾನೆಲೆಯಲ್ಲಿ ಶೋಧ ನಡೆಸುತ್ತಿರುವ ಸೈನಿಕರು (ಸಂಗ್ರಹ ಚಿತ್ರ)

ಗುರುದಾಸ್ ಪುರ: ಪಂಜಾಬ್ ನ ಗುರುದಾಸ್ ಪುರದಲ್ಲಿ ಮತ್ತೆ ಉಗ್ರರು ಅಡಗಿರುವ ಕುರಿತು ಶಂಕೆ ವ್ಯಕ್ತವಾಗಿದ್ದು, ಸೇನಾ ನೆಲೆಯನ್ನು ಭಾರತೀಯ ಸೈನಿಕರು ಸುತ್ತುವರೆದಿದ್ದಾರೆ.

ಪಠಾಣ್ ಕೋಟ್ ಉಗ್ರ ದಾಳಿ ಪ್ರಕರಣ ಅಂತ್ಯವಾಗಿದೆ ಎಂದು ಸಮಾಧಾನಪಟ್ಟು ಕೊಳ್ಳುವಷ್ಟರಲ್ಲೇ ಮತ್ತೆ ಉಗ್ರರ ದಾಳಿ ಭೀತಿ ಆವರಿಸಿದ್ದು, ಪಂಜಾಬ್ ನ ಗುರುದಾಸ್ ಪುರದಲ್ಲಿ ಇಬ್ಬರು  ಶಂಕಿತರು ಅಡಗಿರುವ ಕುರಿತು ಮಾಹಿತಿಗಳು ಲಭ್ಯವಾಗಿವೆ. ಗುರುದಾಸ್ ಪುರದ ಟಿಬ್ರಿಯಲ್ಲಿರುವ ಸೇನಾ ನೆಲೆಯ ಸಮೀಪ ಸೇನಾ ಸಮವಸ್ತ್ರ ಧರಿಸಿರುವ ಇಬ್ಬರು ಶಂಕಿತ ವ್ಯಕ್ತಿಗಳು  ಅನುಮಾನಾಸ್ಪದವಾಗಿ ಕಂಡುಬಂದ ಹಿನ್ನಲೆಯಲ್ಲಿ ಭಾರತೀಯ ಸೈನಿಕರು ಸೇನಾನೆಲೆಯನ್ನು ಸುತ್ತುವರೆದಿದ್ದಾರೆ.

ಮೂಲಗಳ ಪ್ರಕಾರ ಸುಮಾರು 75ಕ್ಕೂ ಹೆಚ್ಚು ಸೈನಿಕರು ಸೇನಾನೆಲೆಯನ್ನು ಸುತ್ತುವರೆದಿದ್ದು, ಶಂಕಿತರಿಗಾಗಿ ತೀವ್ರ ಶೋಧ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.

ಕಳೆದ ಶನಿವಾರವಷ್ಟೇ ಟಿಬ್ರಿಯಿಂದ ಕೆಲವೇ ಕಿ.ಮೀ ದೂರದಲ್ಲಿರುವ ಪಠಾಣ್ ಕೋಟ್ ಸೇನಾ ವಾಯುನೆಲೆಯಲ್ಲಿ 6 ಮಂದಿ ಉಗ್ರರ ಗುಂಪು ದಾಳಿ ಮಾಡಿತ್ತು. ಎಲ್ಲ ಉಗ್ರರನ್ನು ಭಾರತೀಯ  ಸೈನಿಕರು ಹತ್ಯೆ ಮಾಡಿದ್ದರಾದರೂ, ದಾಳಿಯಲ್ಲಿ 7 ಮಂದಿ ಸೈನಿಕರು ಹುತಾತ್ಮರಾಗಿದ್ದರು. ಅಂತೆಯೇ 20ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದರು. ದಾಳಿಯಲ್ಲಿ ಎಷ್ಟು ಮಂದಿ  ಉಗ್ರರು ಪಾಲ್ಗೊಂಡಿದ್ದರು ಎಂಬಲ ಖಚಿತ ಮಾಹಿತಿ ಇಲ್ಲವಾದ್ದರಿಂದ ಭಾರತೀಯ ಸೇನಾಪಡೆ ಕೂಂಬಿಂಗ್ ಕಾರ್ಯಾಚರಣೆಯನ್ನು ಮುಂದುವರಿಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com