ಪಾಕ್ ಕೃಷ್ಣನಿಗಾಗಿ ಮೀರಾ ಆದ ಗೌರವ್!

ಆತ ಲಖನೌದ ಕಥಕ್ ನೃತ್ಯಗಾರ. ಕಥಕ್ ಜೊತೆಗೆ ಸೂಫಿಯಿಸಂ ಕುರಿತು ಪಿಎಚ್‍ಡಿ ಅಧ್ಯಯನ ಕೈಗೊಂಡ. ಆ ಅಧ್ಯಯನ ಸೂಫಿ ತತ್ವ...
ರಿಜ್ವಾನ್ ಪ್ರೇಮಕ್ಕಾಗಿ ಲಿಂಗ ಪರಿವರ್ತನೆ ಮಾಡಿಕೊಂಡ ಗೌರವ್
ರಿಜ್ವಾನ್ ಪ್ರೇಮಕ್ಕಾಗಿ ಲಿಂಗ ಪರಿವರ್ತನೆ ಮಾಡಿಕೊಂಡ ಗೌರವ್
ಲಖನೌ: ಆತ ಲಖನೌದ ಕಥಕ್ ನೃತ್ಯಗಾರ. ಕಥಕ್ ಜೊತೆಗೆ ಸೂಫಿಯಿಸಂ ಕುರಿತು ಪಿಎಚ್‍ಡಿ ಅಧ್ಯಯನ ಕೈಗೊಂಡ. ಆ ಅಧ್ಯಯನ ಸೂಫಿ ತತ್ವ ಸಿದ್ಧಾಂತಗಳತ್ತ ಸೆಳೆಯಿತು. ಆ ಸೆಳೆತ ಕೊನೆಗೆ ಆತನನ್ನು ತಂದು ನಿಲ್ಲಿಸಿದ್ದು ರಿಜ್ವಾನ್ ಎಂಬ ಸಂಗಾತಿಯ ಎದುರು!ಹೌದು, ಇದು ಒಂದು ರೀತಿಯಲ್ಲಿ ಅವನಲ್ಲ ಅವಳು ಎಂಬಂಥ ಕಥೆ. 
ಲಖನೌದ ಗೌರವ್ ತನ್ನ ಕಥಕ್ ನೃತ್ಯದ ಹೊರತಾಗಿಯೂ ಸೂಫಿ  ಸಿದ್ಧಾಂತದಲ್ಲಿ ಆಸಕ್ತಿ ಬೆಳೆಸಿಕೊಂಡ. ನಂತರ ಅದೇ ವಿಷಯದ ಮೇಲೆ ಪಿಎಚ್‍ಡಿಗೆ ತೊಡಗಿದ. ಹೆಣ್ಣು- ಗಂಡುಗಳೆಂಬ ಭೇದವನ್ನೂ ಮೀರಿದ ಅಸೀಮ ಪ್ರೇಮವನ್ನು ಕುರಿತ ಅದರ ವ್ಯಾಖ್ಯಾನ, ಧೋರಣೆಗಳಿಗೆ ಮನಸೋತಂತೆಯೇ ವಿಷಯದ ಚರ್ಚೆಗೆ ಆನ್ ಲೈನ್‍ನಲ್ಲಿ ಪರಿಚಿತನಾದ ವ್ಯಕ್ತಿಗೂ ಮನಸೋತ. ಆ ಪರವಶತೆ ಅಂತಿಮವಾಗಿ ಆತನಿಲ್ಲದೆ ತಾನು ಬದುಕಿರಲಾರೆ ಎಂಬ ಮಟ್ಟಕ್ಕೆ ಹೋದಾಗ, ಇಬ್ಬರೂ ಪರಸ್ಪರ ಸಂಗಾತಿಗಳಾಗಲು ನಿರ್ಧರಿಸಿದರು. 
ಅದೂ ಆನ್‍ಲೈನ್‍ನಲ್ಲೇ. ಈವರೆಗೆ ನಿಜವಾಗಿ ಭೇಟಿ ಕೂಡ ಆಗದಿದ್ದರೂ ಗೌರವ್ ಮತ್ತು ಪಾಕಿಸ್ತಾನದ ರಿಜ್ವಾನ್ ಪರಸ್ಪರ ಸತಿಪತಿಗಳಾಗಲು ನಿರ್ಧರಿಸಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ಅಸೀಮ ಪ್ರೇಮಕ್ಕೆ ಅಡ್ಡಿಯಾಗಿದ್ದು ಅವರಿಬ್ಬರ ಪುರುಷತ್ವ. ಹಾಗಾಗಿ, ಗೌರವ್ ತನ್ನ ಲಿಂಗ ಪರಿವರ್ತನೆ ನಿರ್ಧಾರಕ್ಕೆ ಬಂದು, ಕಳೆದ 6 ತಿಂಗಳಿನಿಂದ ಅದಕ್ಕಾಗಿ ಮುಂಬೈನ ಡಾ ಮಿಥಲೇಶ್ ಮಿತ್ರಾ ಅವರ ಬಳಿ ಲಿಂಗ ಪರಿವರ್ತನೆ ಶಸ್ತ್ರಚಿಕಿತ್ಸೆಗೆ ಒಳಗಾಗುತ್ತಿದ್ದಾರೆ. 
ಪಾಕಿಸ್ತಾನದಲ್ಲಿನ ತನ್ನ ಪಾಲಿನ ಕೃಷ್ಣನಿಗಾಗಿ ತಾನೇ ಲಿಂಗ ಪರಿವರ್ತನೆ ಮಾಡಿಕೊಂಡು ಮೀರಾ ಆಗಲು ಹೊರಟಿದ್ದಾನೆ. ಗೌರವ್ ಅಲಿಯಾಸ್ ಮೀರಾರ ಈ ನಿರ್ಧಾರಕ್ಕೆ ನಟಿಯಾಗಿರುವ ಅವರ `ಸಹೋದರಿ ಹೊರತುಪಡಿಸಿ ಮನೆಮಂದಿಯ ವಿರೋಧವಿದೆ, ಸ್ನೇಹಿತರ ಆತಂಕವಿದೆ. ಆದರೆ, ಅದೆಲ್ಲವನ್ನೂ ಮೀರಿ ತನಗೆ ರಿಜ್ವಾನ್ ಮೇಲೆ ಸೆಳೆತವಿದೆ ಮತ್ತು ಅವರು ಮೋಸ ಮಾಡುವುದಿಲ್ಲ ಎಂಬ ನಂಬಿಕೆ ಇದೆ. 
ಹಾಗೂ ಆಗಬಾರದ್ದು ಆದರೆ,ಸೂಫಿ ಹೇಳುವ ದೇವರಿದ್ದಾನೆ' ಎನ್ನುವ ನಂಬಿಕೆ ವರದ್ದು. ಈಗಾಗಲೇ ಹಾರ್ಮೋನ್ ಥೆರಫಿ ಪಡೆದುಕೊಂಡಿರುವ ಅವರು, ಲಿಂಗ-ಪರಿವರ್ತನೆ ಶಸ್ತ್ರ ಚಿಕಿತ್ಸೆಗೆ ಈಗ ಸಿದ್ಧರಾಗಿದ್ದಾರೆ. ತನ್ನ ಜೀವವಾದ ಕಥಕ್‍ನಲ್ಲಿ ತನ್ನೊಂದಿಗೆ ರಿಜ್ವಾನ್ ಹೆಜ್ಜೆಹಾಕಲಿದ್ದಾರೆ ಎಂಬ ಕನಸು ಬೆನ್ನುಹತ್ತಿದ್ದಾರೆ!

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com