
ನವದೆಹಲಿ: ದಿವಂಗತ ಶಿವಸೇನಾ ಸುಪ್ರಿಮೋ ಭಾಳಾಸಾಹೇಬ್ ಠಾಕ್ರೆ ಅವರ ೯೦ ನೆಯ ಜನ್ಮದಿನದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಗೌರವ ಸಲ್ಲಿಸಿದ್ದಾರೆ.
"ಭಾಳಾಸಾಹೇಬ್ ಠಾಕ್ರೆ... ನನ್ನ ಮನಸ್ಸಿನಲ್ಲಿ ಹಲವು ನೆನಪುಗಳು ತುಂಬಿಕೊಂಡಿವೆ. ಅತಿ ಹೆಚ್ಚು ಗೌರವ ಹೊಂದಿರುವ ಅವರ ಜನ್ಮ ದಿನದ ಅಂಗವಾಗಿ ನನ್ನ ನಮನಗಳು" ಎಂದು ಮೋದಿ ಟ್ವೀಟ್ ಮಾಡಿದ್ದಾರೆ.
೧೯೨೬ ಜನವರಿ ೨೩ ರಂದು ಜನಿಸಿದ್ದ ಠಾಕ್ರೆ, ಮುಂಬೈನ ಆಂಗ್ಲ ದೈನಿಕದಲ್ಲಿ ಕಾರ್ಟೂನಿಸ್ಟ್ ಆಗಿ ತಮ್ಮ ವೃತ್ತಿಜೀವನ ಆರಂಭಿಸಿದ್ದರು ನಂತರ ೧೯೬೦ ರಲ್ಲಿ ತಮ್ಮದೇ ರಾಜಕೀಯ ಪತ್ರಿಕೆ 'ಮಾರ್ಮಿಕ್' ಪ್ರಾರಂಭಿಸಿದ್ದರು.
೧೯೬೬ರಲ್ಲಿ ಶಿವಸೇನಾ ಪಕ್ಷವನ್ನು ಕಟ್ಟಿದ್ದ ಠಾಕ್ರೆ, ಮುಂಬೈ ನ ರಾಜಕೀಯ ಮತ್ತು ವೃತ್ತಿಪರ ಜೀವನದಲ್ಲಿ ಮರಾಠಿ ಭಾಷಿಕರೇ ಇರಬೇಕು ಎಂಬುದನ್ನು ಉಗ್ರವಾಗಿ ಪ್ರತಿಪಾದಿಸಿದವರು.
ಇವರು ನವೆಂಬರ್ ೨೦೧೨ ರಲ್ಲಿ ತೀರಿಹೋದಾಗ, ಶಿವಾಜಿ ಉದ್ಯಾನವನದಲ್ಲಿ ಕೊನೆಯ ವಿಧಿವಿಧಾನಗಳನ್ನು ನಡೆಸಲಾಗಿತ್ತು.
Advertisement