ನೇತಾಜಿ ಅಸ್ಥಿಯ ಡಿಎನ್‍ಎ ಪರೀಕ್ಷೆ ನಡೆಯಲಿ: ಅನಿತಾ ಬೋಸ್

ನೇತಾಜಿ ಸುಭಾಷ್ ಚಂದ್ರ ಬೋಸ್ ಸಾವು ಮತ್ತು ಅದರ ಹಿಂದಿನ ರಹಸ್ಯ ಕುರಿತು ಸಾಕಷ್ಟು ಅನುಮಾನಗಳು ಮೂಡುತ್ತಿರುವಂತೆಯೇ ನೇತಾಜಿ ಪುತ್ರಿ ಅನಿತಾ ಬೋಸ್ ಅವರು ತಮ್ಮ ತಂದೆಯ ಅಸ್ಥಿಯ ಡಿಎನ್ ಎ ಪರೀಕ್ಷೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ...
ನೇತಾಜಿ ಪುತ್ರಿ ಅನಿತಾ ಬೋಸ್ (ಸಂಗ್ರಹ ಚಿತ್ರ)
ನೇತಾಜಿ ಪುತ್ರಿ ಅನಿತಾ ಬೋಸ್ (ಸಂಗ್ರಹ ಚಿತ್ರ)

ನವದೆಹಲಿ: ನೇತಾಜಿ ಸುಭಾಷ್ ಚಂದ್ರ ಬೋಸ್ ಸಾವು ಮತ್ತು ಅದರ ಹಿಂದಿನ ರಹಸ್ಯ ಕುರಿತು ಸಾಕಷ್ಟು ಅನುಮಾನಗಳು ಮೂಡುತ್ತಿರುವಂತೆಯೇ ನೇತಾಜಿ ಪುತ್ರಿ ಅನಿತಾ ಬೋಸ್ ಅವರು  ತಮ್ಮ ತಂದೆಯ ಅಸ್ಥಿಯ ಡಿಎನ್ ಎ ಪರೀಕ್ಷೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.

ನೇತಾಜಿ ಸಾವಿನ ಕುರಿತು ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಕಡತಗಳ ಕುರಿತು ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅನಿತಾ ಬೋಸ್ ಅವರು, ತೈಪೆಯಲ್ಲಿ ವಿಮಾನ  ಅಪಘಾತದಿ೦ದ ಸಾವನ್ನಪ್ಪಿರುವುದು ಬಹುತೇಕ ನ೦ಬಬಹುದಾದ ಅ೦ಶವಾಗಿದೆ ಎ೦ದಿರುವ ಅವರು, ಬೂದಿಯಲ್ಲಿ ಇರಬಹುದಾದ ಮೂಳೆಗಳನ್ನು ತೆಗೆದು ಡಿಎನ್‍ಎ ಪರೀಕ್ಷೆ ನಡೆಸಿದರೆ  ವಾಸ್ತವಾ೦ಶ ಹೊರಬಿದ್ದೀತು ಎ೦ದು ಹೇಳಿದ್ದಾರೆ.

ಜಪಾನ್‍ನ ದೇಗುಲದಲ್ಲಿದೆ ಎ೦ದು ಹೇಳಲಾದ ಬೋಸ್‍ರ ಅಸ್ಥಿಯ ಡಿಎನ್‍ಎ ಪರೀಕ್ಷೆ ಮಾಡುವ೦ತೆ ಬೋಸ್ ಪುತ್ರಿ ಅನಿತಾ ಬೋಸ್ ಕೇ೦ದ್ರ ಸಕಾ೯ರವನ್ನು ಆಗ್ರಹಿಸಿದ್ದು, ರೆಂಕೋಜೆ  ದೇಗುಲದಲ್ಲಿರುವ ತಮ್ಮ ತಂದೆ ದೇಹದ ಅಸ್ಥಿಯಲ್ಲಿರುವ ಮೂಳೆ ಡಿಎನ್ ಎ ಪರೀಕ್ಷೆಗೆ ಒಳಪಡಿಸಲಾರದಷ್ಟು ಸುಟ್ಟು ಹೋಗಿರಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಕಡತಗಳ ಪೈಕಿ ಕೆಲವು ಕಡತಗಳನ್ನು ಮಾತ್ರ ತಾವು ಪರಿಶೀಲಿಸಿದ್ದು, ದಾಖಲೆಗಳಲ್ಲಿ ನೇತಾಜಿ ಅವರ ಮರಣ ಪ್ರಮಾಣಪತ್ರವೇ ಇಲ್ಲದಿರುವುದು ನನಗೆ  ಅಚ್ಚರಿ ತಂದಿದೆ. ಇನ್ನು ಜಪಾನ್ ಪ್ರಜೆಗಳ ಅಭಿಪ್ರಾಯದಂತೆ ನೇತಾಜಿ ತಮ್ಮ ಅಂತಿಮ ದಿನಗಳಲ್ಲಿ ಜಪಾನ್ ನಲ್ಲಿದ್ದರು ಮತ್ತು ಅವರ ಮರಣದ ನಂತರ ಅವರ ಅಸ್ಥಿಯನ್ನು ಶೇಖರಿಸಿಡಲಾಗಿದೆ  ಎಂದು ಹೇಳಲಾಗುತ್ತಿದೆ. ಇದನ್ನು ಸಾಬೀತು ಪಡಿಸಲು ಆ ಅಸ್ಥಿಯಲ್ಲಿರುವ ಮೂಳೆಯ ಡಿಎನ್ ಎ ಪರೀಕ್ಷೆ ನಡೆಸಬೇಕು ಎಂದು ಅನಿತಾ ಬೋಸ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com