ಅಸ್ಸಾಂ ಅಭಯಾರಣ್ಯದಲ್ಲಿ ಮೂರನೆ ರೈನೊ ಬೇಟೆ

ಅಸ್ಸಾಮಿನ ಕಾಜಿರಂಗ ಅಭಯಾರಣ್ಯದಲ್ಲಿ ಬೇಟೆಗಾರರು ಒಂದು ಕೊಂಬಿನ ರೈನೋ ಒಂದನ್ನು ಕೊಂದಿದ್ದು, ೨೦೧೬ ರಲ್ಲಿ ಬೇಟೆಯಾಡಿದ ರೈನೊಗಳ ಸಂಖ್ಯೆ ಮೂರಕ್ಕೆ ಏರಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಗೌಹಾಟಿ: ಅಸ್ಸಾಮಿನ ಕಾಜಿರಂಗ ಅಭಯಾರಣ್ಯದಲ್ಲಿ ಬೇಟೆಗಾರರು ಒಂದು ಕೊಂಬಿನ ರೈನೋ ಒಂದನ್ನು ಕೊಂದಿದ್ದು, ೨೦೧೬ ರಲ್ಲಿ ಬೇಟೆಯಾಡಿದ ರೈನೊಗಳ ಸಂಖ್ಯೆ ಮೂರಕ್ಕೆ ಏರಿದೆ.

ಈ ಬೇಟೆಗಾರರು ಘೇಂಡಾಮೃಗದ ಕೊಂಬನ್ನು ಕದ್ದೊಯ್ದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ೪೮ ಘಂಟೆಗಳ ಅವಧಿಯಲ್ಲಿ ನಡೆದ ಎರಡನೇ ಬೇಟೆ ಇದಾಗಿದೆ.

"ಬರ್ಹಾಪಹಾರ್ ಶ್ರೇಣಿಯಲ್ಲಿ ಸುಮಾರು ರಾತ್ರಿ ೧೨:೩೦ಕ್ಕೆ ಗುಂಡಿನ ಶಬ್ದ ಕೇಳಿ ಬಂದಿದ್ದು, ಕೂಡಲೇ ಅರಣ್ಯ ಇಲಾಖೆಯ ಸಿಬ್ಬಂದಿ ಕಾರ್ಯಾಚರಣೆಗೆ ಇಳಿದಿದ್ದಾರೆ. ಆದರೆ ಅರಣ್ಯ  ಸಿಬ್ಬಂದಿಗೆ ಬುಧವಾರ ಘೇಂಡಾಮೃಗದ ಕಳೇಬರ ಮಾತ್ರ ಸಿಕ್ಕಿದೆ ಮತ್ತು ಕೊಂಬು ಕಾಣೆಯಾಗಿದೆ" ಎಂದು ಅಭಯಾರಣ್ಯದ ಅಧಿಕಾರಿಗಳು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com