(ಸಂಗ್ರಹ ಚಿತ್ರ)
(ಸಂಗ್ರಹ ಚಿತ್ರ)

ದೇಗುಲ ಪ್ರವೇಶಕ್ಕೆ ಅವಕಾಶ ಕೊಡಿ

ಮಹಾರಾಷ್ಟ್ರದ ಶನಿ ಶಿಂಗಣಾಪುರದ ಶನಿ ದೇಗುಲ ಪ್ರವೇಶ ವಿವಾದಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಮತ್ತು ಹೋರಾಟಗಾರರ ನಡುವೆ ಪುಣೆಯಲ್ಲಿ ಬುಧವಾರ ಮಾತುಕತೆ ನಡೆಯಿತು...

ನವದೆಹಲಿ: ಮಹಾರಾಷ್ಟ್ರದ ಶನಿ ಶಿಂಗಣಾಪುರದ ಶನಿ ದೇಗುಲ ಪ್ರವೇಶ ವಿವಾದಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಮತ್ತು ಹೋರಾಟಗಾರರ ನಡುವೆ ಪುಣೆಯಲ್ಲಿ ಬುಧವಾರ ಮಾತುಕತೆ ನಡೆಯಿತು.

ಹೋರಾಟದ ನೇತೃತ್ವ ವಹಿಸಿರುವ ಭೂಮಾತಾ ಬ್ರಿಗೇಡ್ ನ ನಾಯಕಿ ತೃಪ್ತಿ ದೇಸಾಯಿ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ರನ್ನು ಭೇಟಿಯಾಗಿ ಈ ವಿವಾದ ಪರಿಹರಿಸುವಂತೆ ಮತ್ತು ಇತರ ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಮಾಡಿದರು.

ದೇಸಾಯಿ ಮತ್ತು ಇತರ ಹೋರಾಟಗಾರರ ಜತೆಗೆ ಮಾತುಕತೆ ನಡೆಸಿದ ಅವರು ಒಟ್ಟಾರೆ ಬೆಳವಣಿಗೆ ಬಗ್ಗೆ ಮಾಹಿತಿ ಪಡೆದುಕೊಂಡರು. ಬಳಿಕ ವಿವಾದವನ್ನು ಶೀಘ್ರವಾಗಿ ಪರಿಶೀಲಿಸಿ, ಇತ್ಯರ್ಥಪಡಿಸುವುದಾಗಿ ತಿಳಿಸಿದರು.

ಮುಖ್ಯಮಂತ್ರಿ ಜತೆಗಿನ ಭೇಟಿ ಬಳಿಕ ಮಾತನಾಡಿದ ಭೂಮಾತಾ ಬ್ರಿಗೇಡ್ ನಾಯಕಿ ತೃಪ್ತಿ ದೇಸಾಯಿ ಮುಖ್ಯಮಂತ್ರಿ ಜತೆಗೆ ಸೌಹಾರ್ದಯುತವಾಗಿ ಮಾತಕತೆ ನಡೆಸಿದ್ದೇವೆ. ಬೇಡಿಕೆಗಳ ಪಟ್ಟಿಯನ್ನು ಅವರಿಗೆ ಸಲ್ಲಿಸಲಾಗಿದೆ. ವಿವಾದ ಇತ್ಯರ್ಥಪಡಿಸುವ ಭರವಸೆಯನ್ನು ಅವರು ನೀಡಿದ್ದಾರೆ. ಇದರ ಜತೆಗೆ ದೇಗುಲಕ್ಕೆ ಭೇಟಿ ನೀಡುವಂತೆಯೂ ಸಂಘಟನೆ ವತಿಯಿಂದ ಮನವಿ ಮಾಡಿಕೊಂಡಿದ್ದೇವೆ ಎಂದು ತಿಳಿಸಿದರು.

400 ಮಂದಿ ಹೋರಾಟಗಾರರನ್ನು ತಡೆಹಿಡಿದ ಬಗ್ಗೆ ದೇಶಾದ್ಯಂತ ಟೀಕೆ ವ್ಯಕ್ತವಾಗುತ್ತಿದ್ದಂತೆ ಮುಖ್ಯಮಂತ್ರಿ ಫಡ್ನವೀಸ್ ವಿವಾದ ಪರಿಹಾರದ ನಿಟ್ಟಿನಲ್ಲಿ ಮಾತುಕತೆ ನಡೆಸುವ ಬಗ್ಗೆ ಒಲವು ತೋರಿದ್ದರು.

ಮಹಿಳೆಯರಿಗೆ ಅವಕಾಶ ನೀಡಬೇಕು ಎಂದು ಕಾಂಗ್ರೆಸ್ ಒತ್ತಾಯಿಸಿದೆ. ಈ ಬಗ್ಗೆ ಮಹಿಳಾ ಹೋರಾಟಗಾರರು ನಡೆಸುತ್ತಿರುವ ಆಂದೋಲನಕ್ಕೆ ಪಕ್ಷ ಬೆಂಬಲ ನೀಡಿದೆ. ದೆಹಲಿಯಲ್ಲಿ ಮಾತನಾಡಿದ ಪಕ್ಷದ ಪ್ರಧಾನ ಕಾರ್ಯದರ್ಶಿ ಜನಾರ್ಧನ ದ್ವಿವೇದಿ ಶತಮಾನಗಳಿಂದ ಮಹಿಳೆಯರಿಗೆ ಧಾರ್ಮಿಕ ಮತ್ತು ತತ್ವಶಾಸ್ತ್ರದಲ್ಲಿ ಸಮಾನ ಹಕ್ಕುಗಳನ್ನು ನೀಡಲಾಗಿದೆ.

ಆದರೆ ಮಹಾರಾಷ್ಟ್ರದಲ್ಲಿ ಮಹಿಳೆಯರ ಒಂದು ಗುಂಪು ಈ ಹಕ್ಕನ್ನು ನಿರಾಕರಿಸುತ್ತಿದೆ. ಜ್ಞಾನ ಮತ್ತು ಧಾರ್ಮಿಕ ಕ್ಷೇತ್ರದ ಬಾಗಿಲು ಎಲ್ಲರಿಗೂ ಯಾವುದೇ ತಾರತಮ್ಯವಿಲ್ಲದೆ ತೆರೆದಿರಬೇಕು ಎಂದು ಅವರು ಪ್ರತಿಪಾದಿಸಿದ್ದಾರೆ. ಈ ಹೋರಾಟಕ್ಕೆ ಬೆಂಬಲ ನೀಡುವುದು ಎಲ್ಲರ ಕರ್ತವ್ಯ ಎಂದು ದ್ವಿವೇದಿ ಅಭಿಪ್ರಾಯಪಟ್ಟಿದ್ದಾರೆ. ಇದರ ಜತೆಗೆ ಮಹಾರಾಷ್ಟ್ರ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸಂಜಯ ನಿರುಪಮ್ ಕೂಡ ಹೋರಾಟಕ್ಕೆ ಬೆಂಬಲ ನೀಡಿದ್ದಾರೆ.

ಗ್ರಾಮಸಭಾದಿಂದ ಖಂಡನಾ ನಿರ್ಣಯ

ಶನಿ ಶಿಂಗಮಾಪುರದ ದೇಗುಲ ಪ್ರವೇಶಕ್ಕೆ ಮುಂದಾದ 400ಮಂದಿ ಮಹಿಳಾ ಹೋರಾಟಗಾರರ ಬಗ್ಗೆ ಶಿಂಗಣಾಪುರ ಗ್ರಾಮ ಸಭೆ ಆಕ್ಷೇಪ ವ್ಯಕ್ತಪಡಿಸಿದೆ. ಭೂಮಾತಾ ಮಹಿಳಾ ಸಂಘಟನೆ ಮತ್ತು ಅದರ ಮುಖ್ಯಸ್ಥೆ ತೃಪ್ತಿ ದೇಸಾಯಿ ವಿರುದ್ಧ ಸಭೆ ಅತೃಪ್ತಿ ವ್ಯಕ್ತಪಡಿಸಿದೆ.

Related Stories

No stories found.

Advertisement

X
Kannada Prabha
www.kannadaprabha.com