ಮಹಾದಾಯಿ ವಿವಾದ: ಉಮಾಭಾರತಿ ಪತ್ರಕ್ಕೆ ಎಂಬಿ. ಪಾಟೀಲ್ ಅಸಮಾಧಾನ

ಬಹು ವಿವಾದಿತ ಮಹಾದಾಯಿ ನದಿ ನೀರು ಹಂಚಿಕೆ ವಿಚಾರ ಸಂಬಂಧ ಕೇಂದ್ರ ಸಚಿವೆ ಉಮಾಭಾರತಿ ಬರೆದಿರುವ ಪತ್ರ ದುರದೃಷ್ಟಕರವಾಗಿದೆ ಎಂದು ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ಅವರು ಶನಿವಾರ ಹೇಳಿದ್ದಾರೆ...
ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ (ಸಂಗ್ರಹ ಚಿತ್ರ)
ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ (ಸಂಗ್ರಹ ಚಿತ್ರ)

ಬೆಂಗಳೂರು: ಬಹು ವಿವಾದಿತ ಮಹಾದಾಯಿ ನದಿ ನೀರು ಹಂಚಿಕೆ ವಿಚಾರ ಸಂಬಂಧ ಕೇಂದ್ರ ಸಚಿವೆ ಉಮಾಭಾರತಿ ಬರೆದಿರುವ ಪತ್ರ ದುರದೃಷ್ಟಕರವಾಗಿದೆ ಎಂದು ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ಅವರು ಶನಿವಾರ ಹೇಳಿದ್ದಾರೆ.

ಮಹಾದಾಯಿ ವಿಚಾರ ಸಂಬಂಧ ರಾಜ್ಯಕ್ಕೆ ಉಮಾಭಾರತಿ ಬರೆದಿರುವ ಪತ್ರ ಸಂಬಂಧ ಸದಾಶಿವ ನಗರದಲ್ಲಿ ಪ್ರತಿಕ್ರಿಯೆ ನೀಡಿ ಮಾತನಾಡಿರುವ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕೇಂದ್ರ ಸಚಿವೆ ಉಮಾಭಾರತಿಯವರು ಬರೆದಿರುವ ಪತ್ರ ನಿಜಕ್ಕೂ ದುರದೃಷ್ಟಕರವಾಗಿದ್ದು, ರಾಜ್ಯದ ಜನತೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಕೇಂದ್ರ ಸಚಿವೆ ಉಮಾಭಾರತಿಯವರು ಮೋಸ ಮಾಡುತ್ತಿದ್ದಾರೆಂದು ಹೇಳಿದ್ದಾರೆ.

ಮಹಾದಾಯಿ ವಿಚಾರ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆಗ ಚರ್ಚೆ ನಡೆಸುತ್ತೇನೆ. ಈ ಕುರಿತಂತೆ ಮತ್ತೆ ಪ್ರಧಾನಿಯವರಿಗೆ ಪತ್ರ ಬರೆದು ಒತ್ತಡ ಹೇರಲಿದ್ದೇವೆ. ವಿವಾದ ಸಂಬಂಧ ಗೋವಾ ಮುಖ್ಯಮಂತ್ರಿಯವರ ಪತ್ರ ಕೂಡ ದುರದೃಷ್ಟಕರವಾಗಿದ್ದು, ಈ ಬಗ್ಗೆ ನಿಯೋಗ ಭೇಟಿಯನ್ನು ಅವರು ತಿರಸ್ಕರಿಸಿದ್ದಾರೆ. ನಿಯೋಗ ಭೇಟಿ ನೀಡಿದಾಗಾದರೂ ಕನಿಷ್ಟ ಪಕ್ಷ ಸೌಜನ್ಯವನ್ನಾದರೂ ತೋರಬೇಕಿತ್ತು. ಅದನ್ನು ಅವರು ಮಾಡಿಲ್ಲ. ಮಹಾದಾಯಿ ವಿಚಾರದಲ್ಲಿ ಬಿಜೆಪಿ ಬಣ್ಣ ಬಯಲಾಗಿದ್ದು, ವಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಹಾಗೂ ಪ್ರಹ್ಲಾದ್ ಜೋಷಿಯವರು ರಾಜ್ಯದ ಜನತೆಯ ಕಣ್ಣಿಗೆ ಮಣ್ಣು ಎರಚುವ ಪ್ರಯತ್ನ ಮಾಡುತ್ತಿದ್ದಾರೆಂದು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com