ವೆಮುಲನ ಮಹಾತ್ಮ ಗಾಂಧಿಗೆ ಹೋಲಿಸಿದ ರಾಹುಲ್

ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಇತ್ತೀಚೆಗಷ್ಟೇ ಆತ್ಮಹತ್ಯೆಮಾಡಿಕೊಂಡ ಹೈದ್ರಾಬಾದ್ ವಿವಿ ವಿದ್ಯಾರ್ಥಿ...
ಹೈದ್ರಾಬಾದ್ ವಿವಿಯಲ್ಲಿ ರೋಹಿತ್ ಆತ್ಮಹತ್ಯೆಗೆ ಸಂಬಂಧಿಸಿ ನಡೆಯುತ್ತಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ
ಹೈದ್ರಾಬಾದ್ ವಿವಿಯಲ್ಲಿ ರೋಹಿತ್ ಆತ್ಮಹತ್ಯೆಗೆ ಸಂಬಂಧಿಸಿ ನಡೆಯುತ್ತಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ
Updated on: 
ನವದೆಹಲಿ/ಹೈದ್ರಾಬಾದ್: ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಇತ್ತೀಚೆಗಷ್ಟೇ ಆತ್ಮಹತ್ಯೆಮಾಡಿಕೊಂಡ ಹೈದ್ರಾಬಾದ್ ವಿವಿ ವಿದ್ಯಾರ್ಥಿ ರೋಹಿತ್ ವೆಮುಲಾರನ್ನು ಮಹಾತ್ಮ ಗಾಂಧಿಗೆ ಹೋಲಿಸಿದ್ದಾರೆ. ಸತ್ಯ ನುಡಿದಿದ್ದಕ್ಕೆ ಇವರಿಬ್ಬರನ್ನೂ ಟಾರ್ಗೆಟ್ ಮಾಡಲಾಯಿತು ಎಂದು ಅವರು ಆರೋಪಿಸಿದ್ದಾರೆ.
ಹೈದ್ರಾಬಾದ್ ವಿವಿಯಲ್ಲಿ ರೋಹಿತ್ ಆತ್ಮಹತ್ಯೆಗೆ ಸಂಬಂಧಿಸಿ ಪ್ರತಿಭಟನೆ ನಡೆಸುತ್ತಿರುವ ವಿದ್ಯಾರ್ಥಿಗಳೊಂದಿಗೆ ಶುಕ್ರವಾರ ರಾತ್ರಿಯಿಡೀ ಕಳೆದ ರಾಹುಲ್ ಶನಿವಾರ ಸಂಜೆಯವರೆಗೂ ಅವರೊಂದಿಗೆ ನಿರಶನದಲ್ಲಿ ಪಾಲ್ಗೊಂಡರು. 
ಇನ್ನೊಂದೆಡ, ರಾಹುಲ್ ಅವರು ರೋಹಿತ್ ಆತ್ಮಹತ್ಯೆಯನ್ನು ರಾಜಕೀಕರಣ ಗೊಳಿಸುತ್ತಿದ್ದಾರೆ ಎಂದು ಆರೋಪಿಸಿರುವ ಬಿಜೆಪಿಯ ವಿದ್ಯಾರ್ಥಿ ಘಟಕ ಎಬಿವಿಪಿ, ಭಾನುವರಾದಿಂದ 2 ದಿಗನಳ ಕಾಲ ರಾಷ್ಟ್ರವ್ಯಾಪಿ ಬಂದ್ ಗೆ ಕರೆ ನೀಡಿದೆ. ರಾಹುಲ್ ಭೇಟಿ ಖಂಡಿಸಿ ಪ್ರತಿಭಟನೆ ನಡೆಸುತ್ತಿದ್ದ 50ರಷ್ಟು ಎಂಬಿವಿಪಿ ಕಾರ್ಯಕರ್ತರನ್ನು ಶನಿವಾರ ಪೊಲೀಸರು ವಶಕ್ಕೆ ಪಡೆದುಕೊಂಡರು.
ಏತನ್ಮಧ್ಯೆ, ರಾಹುಲ್ ಅವರು ವಿದ್ಯಾರ್ಥಿಗಳನ್ನು ರಾಜಕೀಯ ಅಸ್ತ್ರವನ್ನಾಗಿ ಬಳಸುತ್ತಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com