'ಧಾರ್ಮಿಕ ಭಾವನೆಗಳಿಗೆ ಧಕ್ಕೆ'; ಪಂಜಾಬ್ ನಲ್ಲಿ ಎಎಪಿ ವಿರುದ್ಧ ಬಿಜೆಪಿ ಆರೋಪ, ಧರಣಿ

ಪಂಜಾಬ್ ನಲ್ಲಿ "ಕೋಮು ಸೌಹಾರ್ದವನ್ನು ಹದಗೆಡಿಸುತ್ತಿರುವುದಕ್ಕೆ" ಹಾಗೂ "ಧಾರ್ಮಿಕ ಭಾವನೆಗಳಿಗೆ ಧಕ್ಕೆ ಮಾಡಿರುವುದಕ್ಕೆ" ಆಮ್ ಆದ್ಮಿ ಪಕ್ಷದ ವಿರುದ್ಧ ಬಿಜೆಪಿ ಪಕ್ಷದ ನಾಯಕರು ಗುರುವಾರ
ಎಎಪಿ ಮುಖಂಡ ಅರವಿಂದ್ ಕೇಜ್ರಿವಾಲ್
ಎಎಪಿ ಮುಖಂಡ ಅರವಿಂದ್ ಕೇಜ್ರಿವಾಲ್
ನವದೆಹಲಿ: ಪಂಜಾಬ್ ನಲ್ಲಿ "ಕೋಮು ಸೌಹಾರ್ದವನ್ನು ಹದಗೆಡಿಸುತ್ತಿರುವುದಕ್ಕೆ" ಹಾಗೂ "ಧಾರ್ಮಿಕ ಭಾವನೆಗಳಿಗೆ ಧಕ್ಕೆ ಮಾಡಿರುವುದಕ್ಕೆ" ಆಮ್ ಆದ್ಮಿ ಪಕ್ಷದ ವಿರುದ್ಧ ಬಿಜೆಪಿ ಪಕ್ಷದ ನಾಯಕರು ಗುರುವಾರ ಧರಣಿ ನಡೆಸಿದ್ದಾರೆ. 
ಎಎಪಿ ಮುಖಂಡರಾದ ನರೇಶ್ ಯಾದವ್ ಮತ್ತು ಆಶಿಶ್ ಕೇತನ್ ಅವರನ್ನು ಉಚ್ಚಾಟಿಸಿ, ಪಂಜಾಬ್ ಜನತೆಯ ಭಾವನೆಗಳಿಗೆ ಘಾಸಿ ಮಾಡಿದ್ದಕ್ಕೆ ಕ್ಷಮೆ ಕೋರುವಂತೆ ಬಿಜೆಪಿ ಆಗ್ರಹಸಿದೆ. 
"ಪಂಜಾಬ್ ನಲ್ಲಿ ಕೋಮು ಸೌಹಾರ್ದವನ್ನು ಹಾಳುಮಾಡಲು ಎಎಪಿ ನಾಯಕರು ನಿರಂತರವಾಗಿ ಪ್ರಯತ್ನಿಸುತ್ತಿದ್ದಾರೆ. ನರೇಶ್ ಯಾದವ್ ಮತ್ತು ಆಶಿಶ್ ಕೇತನ್ ಅವರನ್ನು ಅರವಿಂದ್ ಕೇಜ್ರಿವಾಲ್ ಕೂಡಲೇ ಉಚ್ಛಾಟಿಸಿ ಪಂಜಾಬ್ ಜನತೆಯ ಕ್ಷಮೆ ಕೋರಬೇಕು" ಎಂದು ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಆರ್ ಪಿ ಸಿಂಗ್ ಹೇಳಿದ್ದಾರೆ. 
ಪಂಜಾಬ್ ನ ಮಲೆರ್ಕೊಟ್ಟಲಾದಲ್ಲಿ ಜೂನ್ 24 ರಂದು ಕುರಾನ್ ಅನ್ನು ಹಾನಿ ಮಾಡಿದ್ದ ಆರೋಪದ ಮೇಲೆ ಎಎಪಿ ಶಾಸಕ ಯಾದವ್ ಅವರನ್ನು ಪಂಜಾಬ್ ಪೊಲೀಸರು ಗುರುವಾರ ಪ್ರಶ್ನಿಸಿದ್ದರು. 
ಪಕ್ಷದ ಪಂಜಾಬ್ ಚುನಾವಣಾ ಪ್ರನಾಳಕೆಯನ್ನು ಪವಿತ್ರ ಸಿಖ್ ಗ್ರಂಥ ಗುರು ಗ್ರಂಥ ಸಾಹಿಬ್ ಗೆ ಹೋಲಿಸಿದ್ದಕ್ಕೆ ಎಎಪಿ ನಾಯಕ ಆಶಿಶ್ ಕೇತನ್ ವಿರುದ್ಧವೂ ಪೊಲೀಸರು ಪ್ರಕರಣ ದಾಖಲಿಸಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com