ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ

ಭಾರತ ಹೊಂದಿದ ಅತಿ ಪರಿಣಾಮಕಾರಿ ಮುಖಂಡ ಮೋದಿ: ಅಮೆರಿಕಾ ಸೆನೆಟರ್

ಅಮೆರಿಕಾದ ಮೂಲಭೂತ ರಾಜತಾಂತ್ರಿಕ ನೀತಿ ಪಾಕಿಸ್ತಾನ ಮತ್ತು ಭಾರತದ ನಡುವೆ ಸಂಬಂಧಗಳನ್ನು ಉತ್ತಮಪಡಿಸುವುದು ಎಂದು ಹೇಳಿರುವ ಅಮೆರಿಕಾದ ಸೆನೆಟರ್ ಜಾನ್ ಮೆಕ್ ಕೆನ್ ಭಾರತದ ಪ್ರಧಾನಿ
ಲಾಹೋರ್: ಅಮೆರಿಕಾದ ಮೂಲಭೂತ ರಾಜತಾಂತ್ರಿಕ ನೀತಿ ಪಾಕಿಸ್ತಾನ ಮತ್ತು ಭಾರತದ ನಡುವೆ ಸಂಬಂಧಗಳನ್ನು ಉತ್ತಮಪಡಿಸುವುದು ಎಂದು ಹೇಳಿರುವ ಅಮೆರಿಕಾದ ಸೆನೆಟರ್ ಜಾನ್ ಮೆಕ್ ಕೆನ್ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಸಹಕಾರದಿಂದಲೇ ಭಾರತ ಮತ್ತು ಅಮೆರಿಕಾ ನಡುವೆ ಸಂಬಂಧ ಬಲಗೊಂಡಿರುವುದು ಎಂದಿದ್ದಾರೆ. 
ಅರಿ ನ್ಯೂಸ್ ಗೆ ನೀಡಿರುವ ಸಂದರ್ಶನದ ವರದಿ ಮಾಡಿರುವ ಡಾನ್ ಪತ್ರಿಕೆ, ಅಮೆರಿಕಾ ಪಾಕಿಸ್ತಾನವನ್ನು ತೊರೆದು ಹೆಚ್ಚು ಭಾರತದ ಕಡೆಗೆ ವಾಲುತ್ತಿದೆ ಎಂಬ ಆರೋಪವನ್ನು ಅಮೆರಿಕಾ ಸೆನೆಟರ್ ತಳ್ಳಿಹಾಕಿದ್ದು, ಬರಾಕ್ ಒಬಾಮಾ ನೇತೃತ್ವದ ಸರ್ಕಾರ ಒಬ್ಬರ ಪರವಾಗಿ ನಿಂತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ ಎಂದಿದೆ. 
"ಬಹುಶಃ ಭಾರತ ದೀರ್ಘ ಕಾಲದ ನಂತರ ಹೊಂದಿದ ಅತಿ ಪರಿಣಾಮಕಾರಿ ನಾಯಕ ಮೋದಿ ಎಂಬುದರಲ್ಲಿ ಸಂಶಯವಿಲ್ಲ ಹಾಗೂ ಅಮೆರಿಕಾ ಮತ್ತು ಭಾರತದ ನಡುವೆ ಸಂಬಂಧ ವೃದ್ಧಿಸಿರುವುದು ಮೋದಿ ಅವರ ಸಹಕಾರದಿಂದ" ಎಂದು ಮೆಕ್ ಕೆನ್ ಹೇಳಿರುವುದಾಗಿ ವರದಿಯಾಗಿದೆ. 
ಭಾರತದೊಂದಿಗಿನ ಸಂಬಂಧಕ್ಕಾಗಿ ಪಾಕಿಸ್ತಾನದ ಜೊತೆಗೆ ಗೆಳೆತನವನ್ನು ತ್ಯಾಗ ಮಾಡುವ ಯಾವುದೇ ಇರಾದೆಯಿಲ್ಲ ಎಂದಿರುವ ಸೆನೆಟರ್ ಪ್ರಧಾನಿ ಮೋದಿ ಅವರೊಂದಿಗಿನ ಉತ್ತಮ ಸಂಬಂಧ, ಪಾಕಿಸ್ತಾನ ಮತ್ತು ಭಾರತದ ನಡುವೆ ಬಾಂಧವ್ಯ ಉತ್ತಮಪಡಿಸುವ ನಮ್ಮ ಉಮೇದಿಗೆ ಸಹಕಾರವಾಗುತ್ತದೆ ಎಂದಿದ್ದಾರೆ. 

Related Stories

No stories found.

Advertisement

X
Kannada Prabha
www.kannadaprabha.com