ಜ್ಞಾನಪೀಠ ವಿಜೇತ ಸಾಹಿತಿ ಮಹಾಶ್ವೇತ ದೇವಿ ಆರೋಗ್ಯಸ್ಥಿತಿ ಗಂಭೀರ

ಸಾಮಾಜಿಕ ಕಾರ್ಯಕರ್ತೆ ಮತ್ತು ಜ್ಞಾನಪೀಠ ವಿಜೇತ ಸಾಹಿತಿ ಮಹಾಶ್ವೇತ ದೇವಿ ಅವರ ಆರೋಗ್ಯಸ್ಥಿತಿ ಗಂಭೀರವಾಗಿದೆ ಎಂದು ಅವರು ಚಿಕಿತ್ಸೆ ಪಡೆಯುತ್ತಿರುವ ಆಸ್ಪತ್ರೆಯ ವೈದ್ಯರು
ಸಾಮಾಜಿಕ ಕಾರ್ಯಕರ್ತೆ ಮತ್ತು ಜ್ಞಾನಪೀಠ ವಿಜೇತ ಸಾಹಿತಿ ಮಹಾಶ್ವೇತ ದೇವಿ
ಸಾಮಾಜಿಕ ಕಾರ್ಯಕರ್ತೆ ಮತ್ತು ಜ್ಞಾನಪೀಠ ವಿಜೇತ ಸಾಹಿತಿ ಮಹಾಶ್ವೇತ ದೇವಿ
Updated on
ಕೊಲ್ಕತ್ತಾ: ಸಾಮಾಜಿಕ ಕಾರ್ಯಕರ್ತೆ ಮತ್ತು ಜ್ಞಾನಪೀಠ ವಿಜೇತ ಸಾಹಿತಿ ಮಹಾಶ್ವೇತ ದೇವಿ ಅವರ ಆರೋಗ್ಯಸ್ಥಿತಿ ಗಂಭೀರವಾಗಿದೆ ಎಂದು ಅವರು ಚಿಕಿತ್ಸೆ ಪಡೆಯುತ್ತಿರುವ ಆಸ್ಪತ್ರೆಯ ವೈದ್ಯರು ಶನಿವಾರ ಹೇಳಿದ್ದಾರೆ. 
"ಅವರು ಎಚ್ಚರದಿಂದಿದ್ದಾರೆ ಆದರೆ ಅವರ ಸ್ಥಿತಿ ಗಂಭೀರವಾಗಿದೆ. ಅವರು ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದು, ಕಿಡ್ನಿಗಳು ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಅವರ ರಕ್ತಕ್ಕೆ ಬ್ಯಾಕ್ಟೀರಿಯಾ ಸೋಂಕು ತಗುಲಿದೆ" ಎಂದು ವೈದ್ಯರು ಹೇಳಿದ್ದಾರೆ. 
90 ವರ್ಷದ ಸಾಹಿತಿ ದಿನನಿತ್ಯದ ಡಯಾಲಿಸಿಸ್ ಗೆ ಒಳಗಾಗಿದ್ದು ಗುರುವಾರದಿಂದ ಅವರ ಸ್ಥಿತಿ ಗಂಭೀರವಾಗಿದೆ. 
1996 ರಲ್ಲಿ ಜ್ಞಾನಪೀಠ ಪ್ರಶಸ್ತಿ ಪಡೆದಿದ್ದ ಬರಹಗಾರ್ತಿ ಅನಾರೋಗ್ಯದಿಂದ ಎರಡು ತಿಂಗಳುಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com