ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಪೋಕೆಮಾನ್ ಗೋ ಆಡುವಾಗ ಎಚ್ಚರದಿಂದಿರಿ, ಕಾನೂನು ಉಲ್ಲಂಘನೆಗೆ ಶಿಕ್ಷೆ: ಟ್ರಾಫಿಕ್ ಪೊಲೀಸ್

'ಪೋಕೆಮಾನ್ ಗೋ' ಎಂಬ ಮೊಬೈಲ್ ಫೋನಿನ ಆಟ ವಿಶ್ವದೆಲ್ಲೆಡೆ ಜನಪ್ರಿಯವಾಗಿದ್ದು, ಅಪಘಾತಗಳಿಗೆ ಎಡೆಮಾಡಿಕೊಡುತ್ತಿದೆ. ವಾಹನಗಳೆಡೆಗೆ ನುಗ್ಗುತ್ತಿರವುದು, ನಿಷೇಧಿತ ಜಾಗಗಳಲ್ಲಿ ಸಂಚರಿಸುತ್ತಿರುವುದು,
Published on
ಬೆಂಗಳೂರು: 'ಪೋಕೆಮಾನ್ ಗೋ' ಎಂಬ ಮೊಬೈಲ್ ಫೋನಿನ ಆಟ ವಿಶ್ವದೆಲ್ಲೆಡೆ ಜನಪ್ರಿಯವಾಗಿದ್ದು, ಅಪಘಾತಗಳಿಗೆ ಎಡೆಮಾಡಿಕೊಡುತ್ತಿದೆ. ವಾಹನಗಳೆಡೆಗೆ ನುಗ್ಗುತ್ತಿರವುದು, ನಿಷೇಧಿತ ಜಾಗಗಳಲ್ಲಿ ಸಂಚರಿಸುತ್ತಿರುವುದು, ಎಚ್ಚರಿಕೆಯಿಲ್ಲದೆ ವಾಹನ ಚಾಲನೆ ಹೀಗೆ ಅಪರಾಧಗಳ ಪಟ್ಟಿ ಬೆಳೆಯುತ್ತಿರುವ ಹಿನ್ನಲೆಯಲ್ಲಿ, ಈ ಆಟ ಆಡುವ ಮಂದಿಯನ್ನು ನಗರ ಟ್ರಾಫಿಕ್ ಪೊಲೀಸರು ಎಚ್ಚರಿಸಿದ್ದಾರೆ.
ವಾಹನ ಸಂಚರಿಸುವಾಗ ಮೊಬೈಲ್ ನಲ್ಲಿ ಆಟವಾಡಿದರೆ 100 ರೂ ದಂಡ, ನಿಯಮ ಉಲ್ಲಂಘಿಸಿ ಮೊಬೈಲ್ ಹಿಡಿದು ಅಡ್ಡಾದಿಡ್ಡಿ ರಸ್ತೆ ದಾಟಿದರೆ 50 ರೂ ದಂಡ ವಿಧಿಸಲಾಗುವುದು ಹಾಗು ನಿಯಮಗಳನ್ನು ಮತ್ತೆ ಮತ್ತೆ ಉಲ್ಲಂಘಿಸಿದವರ ವಾಹನ ಚಾಲನಾ ಪರವಾನಗಿ ರದ್ದುಪಡಿಸಲಾಗುವುದು ಎಂದು ಟ್ರಾಫಿಕ್ ಪೊಲೀಸ್ ಹೆಚ್ಚುವರಿ ಆಯುಕ್ತ ಪಿ ಹಿತೇಂದ್ರ ಹೇಳಿದ್ದಾರೆ. 
"ಚಾಲಕರನ್ನು ಮತ್ತು ರಸ್ತೆ ಬದಿ ಚಲಿಸುವವವರನ್ನು ಗಮನ ಬೇರೆಡೆಗೆ ಸೆಳೆವುದನ್ನು ತಡೆಯಬೇಕು. ಈ ಆಟ ಆಡುವವರು ಟ್ರಾಫಿಕ್ ಗೆ ತೊಂದರೆ ಕೊಡಬಾರದು. ಮೊಬೈಲ್ ಫೋನ್ ಬಳಸುತ್ತಾ ವಾಹನ ಚಾಲನೆ ಮಾಡುವುದು ತಪ್ಪು" ಎಂದು ಅವರು ತಿಳಿಸಿದ್ದಾರೆ. 
ಏನಿದು ಪೋಕೆಮಾನ್ ಗೋ?
ಪೋಕೆಮಾನ್ ಗೋ ಆಟ ಇನ್ನು ಭಾರತದಲ್ಲಿ ಬಿಡುಗಡೆಯಾಗಿಲ್ಲವಾದರೂ ಅನಧಿಕೃತ ಮೂಲಗಳಿಂದ ಇದನ್ನು ಮೊಬೈಲ್ ಗೆ ಇಳಿಸಿಕೊಂಡು ಆಡಬಹುದಾಗಿದ್ದು, ಭಾರತದಲ್ಲೂ ಇದನ್ನು ಆಡುವವರ ಸಂಖ್ಯೆ ದಿನೇ ದಿನೇ ಬೆಳೆಯುತ್ತಿದೆ. 
ಈ ಆಟವನ್ನು ಆಡುವಾಗ, ಕ್ಯಾಮರಾ ಚಾಲನೆಯಾಗಿ ಯಾವುದೋ ಒಂದು ಪ್ರದೇಶದಲ್ಲಿ ಪೋಕೆಮಾನ್ ಇರುವಂತೆ ಗೋಚರವಾಗಿ ನಿಮ್ಮ ಮೊಬೈಲ್ ಪರದೆ ಮೇಲೆ ಕಾಣಲಿದ್ದು, ಅದರ ಮೇಲೆ ಬಾಲ್ (ಅಗೋಚರ) ಎಸೆಯುವ ಮೂಲಕ ಹಿಡಿಯುವುದು ಆಟ. ಇದನ್ನು ಆಗಮಂಟೆಡ್ ರಿಯಾಲಿಟಿ ಆಟ ಎನ್ನುವ ತಂತ್ರಜ್ಞಾನದಿಂದ ಸಿದ್ಧಪಡಿಸಿದ್ದು, ಪೆರೇಡ್ ಮೇಲೆ ಮೂಡುವ ನೈಜ ಪ್ರದೇಶಗಳು, ಆಟದಲ್ಲಿ ತಲ್ಲೀನಗೊಳಿಸಿ, ಅಪಘಾತಗಳಿಗೆ ಎಡೆ ಮಾಡಿಕೊಡುವ ಸಂದರ್ಭ ಸೃಷ್ಟಿಸುತ್ತದೆ. 
ವಿಶ್ವದಾದ್ಯಂತ ವರದಿಯಾಗಿರುವ ಪೋಕೆಮಾನ್ ಗೋ ಅಪಘಾತಗಳು
ಜುಲೈ 12: ನ್ಯೂಯಾರ್ಕ್ ನಲ್ಲಿ 28 ವರ್ಷದ ಯುವಕ ಚಕ್ರದ ಹಿಂದೆ ಪೋಕೆ ಮಾನ್ ಹಿಡಿಯಲು ಹೋಗಿ ಅಪಘಾತ. 
ಜುಲೈ 13: ಇಬ್ಬರು ಕೆನಡಾ ಯುವಕರು ಪೋಕೆಮಾನ್ ಆಡುತ್ತಾ ಕಾರ್ ಚಾಲನೆ ಮಾಡುತ್ತಾ ಪೋಲೀಸರ ವಾಹನಕ್ಕೆ ಗುದ್ದಿ, ಇಬ್ಬರು ಪೊಲೀಸರಿಗೆ ಗಾಯ
ಜುಲೈ 13: ಬ್ಯುಸಿ ರಸ್ತೆಯನ್ನು ದಾಟುವಾಗ ಪೋಕೆಮಾನ್ ಆಡುತ್ತಿದ್ದರಿಂದ ಪೆನ್ಸ್ಲಿವೇನಿಯಾದ ಪಿಟ್ಸ್ ಬರ್ಗ್ ನಲ್ಲಿ ಬಾಲಕಿಯೊಬ್ಬಳಿಗೆ ಗಾಯ
ಜುಲೈ 19: ಇಂಡೋನೇಷಿಯಾದಲ್ಲಿ ಪೋಕೆಮಾನ್ ಆಡುತ್ತಾ ಸೇನಾ ಶಿಬಿರದೊಳಗೆ ನುಗ್ಗಿದ ಫ್ರೆಂಚ್ ಯುವಕ. ಬಂಧನ. 
ಜುಲೈ 21: ನ್ಯೂಯಾರ್ಕ್ ನಲ್ಲಿ ಪೋಕೆ ಮಾನ್ ಆಡುತ್ತಾ ಸ್ಮಶಾನವೊಂದರಲ್ಲಿ ಮರ ಹತ್ತಿದ ಮಹಿಳೆ; ಇಳಿಯಲಾಗದೆ ತುರ್ತು ನಿಗಾ ಘಟಕ 911 ಗೆ ಕರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com