ಮೊಹಮದ್ ಅಲಿ ಕೇರಳಕ್ಕೆ ಬಂದ ಪ್ರಸಂಗ ನೆನಪಿಸಿಕೊಂಡ ವೈದ್ಯ

ಶುಕ್ರವಾರ ನಿಧನರಾದ ಬಾಕ್ಸಿಂಗ್ ದಂತಕಥೆ ಮೊಹಮದ ಅಲಿ ೧೯೮೯ರಲ್ಲಿ ಕೇರಳಕ್ಕೆ ಬಂದು ನೆಲಸಿದ್ದ ಘಟನೆಯನ್ನು ನ್ಯೂರಾಲಜಿಸ್ಟ್ ವೈದ್ಯರೊಬ್ಬರು
ಬಾಕ್ಸಿಂಗ್ ದಂತಕಥೆ ಮೊಹಮದ ಅಲಿ
ಬಾಕ್ಸಿಂಗ್ ದಂತಕಥೆ ಮೊಹಮದ ಅಲಿ

ಕೋಜಿಕೋಡ್: ಶುಕ್ರವಾರ ನಿಧನರಾದ ಬಾಕ್ಸಿಂಗ್ ದಂತಕಥೆ ಮೊಹಮದ ಅಲಿ ೧೯೮೯ರಲ್ಲಿ ಕೇರಳಕ್ಕೆ ಬಂದು ನೆಲಸಿದ್ದ ಘಟನೆಯನ್ನು ನ್ಯೂರಾಲಜಿಸ್ಟ್ ವೈದ್ಯರೊಬ್ಬರು ನೆನಪಿಸಿಕೊಂಡಿದ್ದಾರೆ.

ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಮಾನವತಾವಾದಿ ೭೪ ವರ್ಷದ ಅಲಿ ಅಮೆರಿಕಾದಲ್ಲಿ ಶುಕ್ರವಾರ ಕೊನೆಯುಸಿರೆಳೆದಿದ್ದಾರೆ.

ಕ್ರೀಡಾ ಇತಿಹಾಸದಲ್ಲೇ ವಿಶ್ವದ ಶ್ರೇಷ್ಠ ಬಾಕ್ಸರ್ ಗಳಲ್ಲಿ ಒಬ್ಬರಾದ ಅಲಿ ಅವರಿಗೆ ೧೯೮೧ ರಲ್ಲಿ ನರದೌರ್ಬಲ್ಯ ತೊಂದರೆ ಕಾಣಿಸಿಕೊಂಡಾಗ ನಿವೃತ್ತಿ ಘೋಷಿಸಿದ್ದರು. ನಂತರ ಅವರು ಪಾರ್ಕಿನ್ಸನ್ ಖಾಯಿಲೆಗಾಗಿ ಚಿಕಿತ್ಸೆ ಪಡೆಯುತ್ತಿದ್ದರು.

ಅಲಿ ಅವರನ್ನು ನೆನಪಿಸಿಕೊಂಡ ಮುಸ್ಲಿಂ ಶಿಕ್ಷಣ ಸಮಾಜದ (ಎಂ ಇ ಎಸ್) ಅಧ್ಯಕ್ಷ ಪಿ ಎ ಫಜಲ್ ಗಫೂರ್, ತಮ್ಮ ಸಂಸ್ಥೆಯ ಬೆಳ್ಳಿಹಬ್ಬದ ಉದ್ಘಾಟನೆಗೆ ಮೊಹಮದ ಅಲಿ ಅವರನ್ನು ಆಹ್ವಾನಿಸಲು ನಿರ್ಧರಿಸಿದ್ದರಂತೆ. "ಅಂದು ಅಲಿ ಅವರ ಜೊತೆಗೆ ಖ್ಯಾತ ಬಾಲಿವುಡ್ ನಟ ದಿಲೀಪ್ ಕುಮಾರ್ ಕೂಡ ಉಪಸ್ಥಿತರಿದ್ದರು. ಅಮೆರಿಕಾದ ಕೆಲವು ಗೆಳೆಯರ ಸಹಾಯದಿಂದ ಅಲಿ ಅವರನ್ನು ಕರೆತರಲು ಯಶಸ್ವಿಯಾಗಿದ್ದೆವು. ನಾನು ನ್ಯೂರಾಲಜಿಸ್ಟ್ ಆಗಿದ್ದರಿಂದ ಅವರ ಜೊತೆ ಕೈಕುಲುಕುವ ಅವಕಾಶ ಒದಗಿ ಬಂತು ಮತ್ತು ಅವರ ಆರೋಗ್ಯದಲ್ಲಿ ಎಲ್ಲವೂ ಸರಿಯಿಲ್ಲ ಎಂಬುದು ನನಗೆ ಮನವರಿಕೆಯಾಯಿತು" ಎನ್ನುತ್ತಾರೆ ಗಫೂರ್.

"ಅವರು ನಮ್ಮ ಜೊತೆಗೆ ಎರಡು ದಿನ ಉಳಿದಿದ್ದರು, ಅವರ ಚಲನವಲನ ಮತ್ತು ಮಾತುಕತೆಯಲ್ಲಿ ತೊಂದರೆಯಾಗಿತ್ತು ಆದುದರಿಂದ ಹೆಚ್ಚು ಮಾತನಾಡದೆ ಉಳಿದರು" ಎನ್ನುತ್ತಾರೆ ಗಫೂರ್.

"ಅವರು ಇಸ್ಲಾಂ ಧರ್ಮಕ್ಕೆ ಬದಲಾಗಿದ್ದರು, ಮತ್ತು ನಾವು ಒಂದೇ ಧರ್ಮೀಯರಾಗಿದ್ದರೂ ಅವರು ಇಸ್ಲಾಂ ಬಗೆಗೆ ಹೆಚ್ಚು ಮಾತನಾಡಲಿಲ್ಲ. ಅವರು ಅಂದಿಗೆ ವಿಶ್ವದಾದ್ಯಂತ ಜನಾಂಗೀಯ ನಿಂದನೆಯ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದರು" ಎಂಬುದನ್ನೂ ಗಫೂರ್ ನೆನಪಿಸಿಕೊಳ್ಳುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com