ವಾಸ್ತು ಎಫೆಕ್ಟ್: ತೋಟದ ಮನೆಯಿಂದ ಸರ್ಕಾರ ನಡೆಸುತ್ತಿರುವ ಕೆಸಿಆರ್

ವಾಸ್ತುಶಾಸ್ತ್ರದ ಮೇಲೆ ಅತೀವವಾಗಿ ನಂಬಿಕೆ ಇಟ್ಟಿರುವ ತೆಲಂಗಾಣ ಮುಖ್ಯಮಂತ್ರಿ ಕೆ.ಸಿ ಚಂದ್ರಶೇಖರ್ ರಾವ್ ಸಚಿವಾಲಯ ಬಿಟ್ಟು ತಮ್ಮ ತೋಟದ ..
ಕೆ.ಚಂದ್ರಶೇಖರ್
ಕೆ.ಚಂದ್ರಶೇಖರ್

ಹೈದರಾಬಾದ್: ವಾಸ್ತುಶಾಸ್ತ್ರದ ಮೇಲೆ ಅತೀವವಾಗಿ ನಂಬಿಕೆ ಇಟ್ಟಿರುವ ತೆಲಂಗಾಣ ಮುಖ್ಯಮಂತ್ರಿ ಕೆ.ಸಿ ಚಂದ್ರಶೇಖರ್ ರಾವ್ ಸಚಿವಾಲಯ ಬಿಟ್ಟು ತಮ್ಮ ತೋಟದ ಮನೆಯಿಂದಲೇ ಆಡಳಿತ ನಡೆಸುತ್ತಿದ್ದಾರೆ.

ಸರ್ಕಾರ ಎರಡು ವರ್ಷ ಅಧಿಕಾರ ಪೂರೈಸಿದ ಹಿನ್ನೆಲೆಯಲ್ಲಿ ಜೂನ್ 3 ರಂದು ಕೆಸಿಆರ್ ಸಚಿವಾಲಯಕ್ಕೆ ಭೇಟಿ ನೀಡಿ ಸಂಪುಟ ಸಭೆ ನಡೆಸಿದರು. ಕಳೆದ ಮಾರ್ಚ್ 6ರಂದು ಸಭೆ ನಡೆಸಲಾಗಿತ್ತು.

ತಮ್ಮ ವಿಧಾನ ಸಭಾ ಕ್ಷೇತ್ರ ಎರ್ರವಳ್ಳಿಯಲ್ಲಿರುವ ಸುಮಾರು 22 ಎಕರೆ ವಿಸ್ತಾರದ ತೋಟದ ಮನೆಯಿಂದಲೇ ಆಡಳಿತ ಯಂತ್ರ ನಡೆಯುತ್ತಿದೆ. ರಾವ್ ತೋಟದ ಮನೆಯಿಂದ ಆಡಳಿತ ನಡೆಸುತ್ತಿರುವ ಉದ್ದೇಶ ಏನು ಎಂಬುದು ಯಾರಿಗೂ ತಿಳಿದಿಲ್ಲ.

ಅಧಿಕಾರ ಸ್ವೀಕರಿಸಿದ ಆರಂಭದ ದಿನದಿಂದಲೂ ಇದೇ ರೀತಿಯಲ್ಲಿ ಆಡಳಿತ ನಡೆಸುತ್ತಿದ್ದು, ಸಂಬಂಧ ಪಟ್ಟ ಎಲ್ಲಾ ಇಲಾಖೆಯ ಕಡಿತಗಳ ವಿಲೇವಾರಿ. ಸಹಿ, ಪ್ರಮುಖವಾದ ನಿರ್ಧಾರ ಎಲ್ಲಾ ಇಲ್ಲಿಂದಲೇ ನಡೆಯುತ್ತಿವೆ.

ಸಚಿವಾಲಯಕ್ಕೆ ಪ್ರತಿನಿತ್ಯ ಭೇಟಿ ನೀಡದ ಹಿನ್ನೆಲೆಯಲ್ಲಿ ಸಿಎಂ ಎಲ್ಲಿ ಸಿಗುತ್ತಾರೋ ಅಲ್ಲಿಯೇ ಕಡಿತಗಳಿಗೆ ಸಹಿ ಹಾಕಿಸಿಕೊಳ್ಳುವ ಪರಿಪಾಠ ಕೂಡ ಆರಂಭವಾಗಿದೆ. ಆಂದ್ರಪ್ರದೇಶ ಡಾ. ಮರಿಚನ್ನ ರೆಡ್ಡಿ ಮಾನವ ಸಂಪನ್ಮೂಲ ಅಭಿವೃದ್ಧಿ ಸಂಸ್ಥೆಯಲ್ಲಿ ಎಲ್ಲಾ ಸಚಿವ ಸಂಪುಟ ಸಭೆಗಳು ನಡೆಯುತ್ತಿದ್ದು, ಎಲ್ಲಾ ಮಹತ್ವಹ ಫೈಲ್ ಗಳೂ ಅಲ್ಲಿಂದಲೇ ಕ್ಲಿಯರ್ ಆಗುತ್ತವೆ.

ಇತ್ತೀಚೆಗೆ ಚಂದ್ರಶೇಖರ್ ರಾವ್ ತಮ್ಮ ತೋಟದ ಮನೆಯಲ್ಲಿ ಆಯುತಾ ಮಹಾ ಚಂಡಿ ಯಾಗ ಕೂಡ ನಡೆಸಿದ್ದಾರೆ. ಪ್ರತಿದಿನ 8 ಗಂಟೆಗಳ ಕಾಲ 5 ನಿಮಿಷಗಳ ಕಾಲ ಬಿಡುವು ತೆಗೆದುಕೊಳ್ಳದೆ ಕೆಸಿಆರ್ ರಾವ್ ಕೆಲಸ ಮಾಡುತ್ತಾರೆ. ಈ ವೇಳೆ ಅಧಿಕಾರಿಗಳು ತುಟಿ ಬಿಚ್ಚದಂತೆ ಇರುತ್ತಾರೆ ಎಂದು ಮೂಲಗಳು ತಿಳಿಸಿವೆ.

ಸಚಿವಾಲಯದ ವಾಸ್ತು ಸರಿಯಿಲ್ಲ ಎಂದು ನಂಬಿರುವ ಕಾರಣ ಕೆಸಿಆರ್ ತೋಟದ ಮನೆಯಿಂದ ಸರ್ಕಾರ ನಡೆಸುತ್ತಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com