ಭಾರತದಲ್ಲಿ ಪರಮಾಣು ಘಟಕ ಕಾಮಗಾರಿ ಆರಂಭ; ಅಮೆರಿಕ ಸ್ಪಷ್ಟನೆ

ಇಂಡೋ-ಅಮೆರಿಕ ನಡುವಿನ ದಶಕಗಳ ಹಳೆಯ ನಾಗರೀಕ ಪರಮಾಣ ಒಪ್ಪಂದದಂತೆ ಭಾರತದಲ್ಲಿ ಆರು ಪರಮಾಣು ಘಟಕಗಳ ಕಾಮಗಾರಿ ಆರಂಭವಾಗಿದೆ ಎಂದು ಅಮೆರಿಕ ಸ್ಪಷ್ಟಪಡಿಸಿದೆ...
ಪರಮಾಣು ಘಟಕ (ಸಂಗ್ರಹ ಚಿತ್ರ)
ಪರಮಾಣು ಘಟಕ (ಸಂಗ್ರಹ ಚಿತ್ರ)
Updated on

ವಾಷಿಂಗ್ಟನ್: ಇಂಡೋ-ಅಮೆರಿಕ ನಡುವಿನ ದಶಕಗಳ ಹಳೆಯ ನಾಗರೀಕ ಪರಮಾಣ ಒಪ್ಪಂದದಂತೆ ಭಾರತದಲ್ಲಿ ಆರು ಪರಮಾಣು ಘಟಕಗಳ ಕಾಮಗಾರಿ ಆರಂಭವಾಗಿದೆ ಎಂದು ಅಮೆರಿಕ  ಸ್ಪಷ್ಟಪಡಿಸಿದೆ.

ವಿಶ್ವ ಸಮುದಾಯದ ಕಣ್ತಪ್ಪಿಸಿ ಭಾರತ ರಹಸ್ಯವಾಗಿ ಪರಮಾಣು ಘಟಕಗಳನ್ನು ಸ್ಥಾಪಿಸುತ್ತಿದೆ ಎಂಬ ಆರೋಪಗಳ ಬೆನ್ನಲ್ಲೇ ಭಾರತದಲ್ಲಿ 6 ಪರಮಾಣು ಘಟಕಗಳ ಕಾಮಗಾರಿ  ಆರಂಭವಾಗಿದೆ ಎಂದು ಅಮೆರಿಕ ಸ್ಪಷ್ಟಪಡಿಸಿದೆ. ಭಾರತ ಮತ್ತು ಅಮೆರಿಕ ದೇಶಗಳ ನಡುವೆ ನಡೆದಿದ್ದ ನಾಗರೀಕ ಪರಮಾಣು ಒಪ್ಪಂದದ ಅನ್ವಯ ಈ ಘಟಕಗಳು ಸ್ಥಾಪನೆಯಾಗುತ್ತಿದೆ ಎಂದು  ಅಮೆರಿಕ ಸ್ಪಷ್ಟಪಡಿಸಿದೆ.

ಪ್ರಧಾನಿ ನರೇಂದ್ರ ಮೋದಿ ಅವರ ಅಮೆರಿಕ ಪ್ರವಾಸದ ವೇಳೆ ಅಧ್ಯಕ್ಷ ಬರಾಕ್ ಒಬಾಮರೊಂದಿಗಿನ ದ್ವಿಪಕ್ಷೀಯ ಶೃಂಗಸಭೆಯ ಬಳಿಕ ವೈಟ್ ಹೌಸ್ ಈ ಬಗ್ಗೆ ಸ್ಪಷ್ಟನೆ ನೀಡಿದ್ದು, "ಅಮೆರಿಕ  ಪಾಲಿಗೆ ಭಾರತ ಪ್ರಮುಖ ರಕ್ಷಣಾ ಪಾಲುದಾರ ರಾಷ್ಟ್ರವಾಗಿದ್ದು, ನಾಗರೀಕ ಪರಮಾಣು ಒಪ್ಪಂದದ ಅನ್ವಯ ಭಾರತದಲ್ಲಿ 6 ಪರಮಾಣು ಸ್ಥಾವರಗಳ ಪ್ರಾಥಮಿಕ ಕಾಮಗಾರಿ  ಆರಂಭವಾಗಿರುವುದು ಸಂತಸದ ವಿಚಾರವಾಗಿದೆ ಎಂದು ಹೇಳಿದೆ.

"ಭಾರತದ ವಿವಿಧ ಪ್ರದೇಶಗಳಲ್ಲಿ ಒಟ್ಟು 6 ಎಪಿ1000 ತಂತ್ರಜ್ಞಾನದ ಪರಮಾಣು ಸ್ಥಾವರಗಳನ್ನು ನಿರ್ಮಾಣ ಮಾಡಲಾಗುತ್ತಿದ್ದು, ಕಾಮಗಾರಿ ಪೂರ್ಣಗೊಂಡ ಬಳಿಕ ಈ ಬಗೆಯ ವಿನ್ಯಾಸದ  ಪರಮಾಣು ಸ್ಥಾವರಗಳಲ್ಲಿ ಅತೀ ದೊಡ್ಡ ಪ್ರಮಾಣದ ಪರಮಾಣು ಸ್ಥಾವರಗಳಾಗಲಿವೆ. ಆ ಮೂಲಕ ಭಾರತದ ಇಂಧನ ಬೇಡಿಕೆಗೆ ಈ ಪರಮಾಣು ಸ್ಥಾವರಗಳು ಪರಿಣಾಮಕಾರಿ  ಪರಿಹಾರವಾಗಲಿದ್ದು, ಪಳೆಯುಳಿಕೆ ಇಂಧನಕ್ಕೆ ಪರ್ಯಾಯವಾಗಲಿದೆ ಎಂದು ಅಮೆರಿಕ ಅಭಿಪ್ರಾಯಪಟ್ಟಿದೆ.

2005ರ ಜುಲೈ 18ರಂದು ಅಂದಿನ ಅಮೆರಿಕ ಅಧ್ಯಕ್ಷ ಜಾರ್ಜ್ ಬುಷ್ ಹಾಗೂ ಅಂದಿನ ಭಾರತ ಪ್ರಧಾನಿ ಮನಮೋಹನ್ ಸಿಂಗ್ ಅವರ ಸಮ್ಮುಖದಲ್ಲಿ ಉಭಯ ದೇಶಗಳು 123 ಒಪ್ಪಂದಗಳ  ನಾಗರೀಕ ಪರಮಾಣು ಒಪ್ಪಂದಕ್ಕೆ ಸಹಿ ಹಾಕಿದ್ದವು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com